ಮೈಸೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಬೋಧನೆ ಸರಕಾರಕ್ಕೆ ಸವಾಲಾಗಿದೆ. ಈ ನಡುವಲ್ಲೇ ಸರಕಾರ ಶಾಲಾ ಮಕ್ಕಳಿಗೆ ಭರ್ಜರಿ ಗುಡ್ ನ್ಯೂಸ್ ನೀಡಲು ಮುಂದಾಗಿದೆ. ಶಾಲಾ ಮಕ್ಕಳಿಗೆ ಉಚಿತ ‘ಸ್ಮಾರ್ಟ್ ಫೋನ್’ ವಿತರಣೆಯ ಕುರಿತು ಚಿಂತನೆ ನಡೆಸಿದ್ದೇವೆ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್ ಕುಮಾರ್ ತಿಳಿಸಿದ್ದಾರೆ.
ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆನ್ಲೈನ್ ಕ್ಲಾಸ್ ನಿಂದ ಯಾವ ಮಕ್ಕಳು ಕೂಡ ವಂಚಿತರಾಗಬಾರದು. ಮಕ್ಕಳಿಗೆ ಸ್ಮಾರ್ಟ್ ಫೋನ್ ನೀಡಲು ಸಂಘ, ಸಂಸ್ಥೆಗಳ ನೆರವು ಪಡೆಯುವ ಚಿಂತನೆ ಇದೆ, ಸರ್ಕಾರ ಈ ಬಗ್ಗೆ ಶೀಘ್ರದಲ್ಲೇ ಕ್ರಮ ಕೈಗೊಳ್ಳಲಿದೆ. ಬಡ ಮಕ್ಕಳ ನೆರವಿಗೆ ಸರ್ಕಾರ ಬರಲಿದೆ ಎಂದಿದ್ದಾರೆ.
ಕೊರೊನಾ ವೈರಸ್ ಸೋಂಕಿನ ಹಿನ್ನೆಲೆ ವಿದ್ಯಾರ್ಥಿಗಳಿಗೆ ಭೌತಿಕ ತರಗತಿಗಳಿಗಿಂತ ಹೆಚ್ಚಾಗಿ ಆನ್ಲೈನ್ ತರಗತಿಗಳೇ ನಡೆದಿವೆ. ಅದ್ರಲ್ಲೂ ಮುಂದಿನ ಶೈಕ್ಷಣಿಕ ವರ್ಷ ಹೇಗಿರುತ್ತದೆ ಅನ್ನುವುದನ್ನು ಹೇಳಲು ಸಾಧ್ಯವಿಲ್ಲ. ಹೇಳಲಾಗುವುದಿಲ್ಲ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲಕ್ಕಾಗಿ ಸರ್ಕಾರಿ ಶಾಲೆಯ ಬಡ ಮಕ್ಕಳಿಗೆ ಅನುಕೂಲವಾಗು ವಂತೆ ಉಚಿತವಾಗಿ ಸ್ಮಾರ್ಟ್ ಫೋನ್ ಒದಗಿಸುವ ಚಿಂತನೆ ನಡೆದಿದೆ.