(Fruits and Vegetables Health Tips)ಹಣ್ಣು ಮತ್ತು ತರಕಾರಿಯನ್ನು ಸೇವನೆ ಮಾಡುವುದರಿಂದ ಆರೋಗ್ಯಕ್ಕೆ ಹಲವು ಪ್ರಯೋಜನಗಳಿವೆ . ದೇಹಕ್ಕೆ ಬೇಕಾದ ಪೋಷಕಾಂಶಗಳನ್ನು ಒದಗಿಸುವುದಷ್ಟೇ ಅಲ್ಲದೆ ಮುಖದ ಅಂದ ಹೆಚ್ಚಿಸುವುದಕ್ಕೂ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಪ್ರತಿದಿನ ಹಣ್ಣು ಮತ್ತು ತರಕಾರಿಯನ್ನು ಸೇವನೆ ಮಾಡುವ ಹವ್ಯಾಸ ರೂಡಿಸಿಕೊಂಡರೆ ನಿಮ್ಮ ಮುಖದ ಅಂದ ಇನ್ನಷ್ಟು ಹೆಚ್ಚಿಗೆ ಆಗುತ್ತದೆ. ನಿಮ್ಮ ಮುಖದ ಅಂದ ಹೆಚ್ಚಿಸಿಕೊಳ್ಳಲು ಸೇವನೆ ಮಾಡುವಂತಹ ಹಣ್ಣು ಮತ್ತು ತರಕಾರಿಯ ಮಾಹಿತಿ ತಿಳಿದುಕೊಳ್ಳಿ.
(Fruits and Vegetables Health Tips)ಟೊಮೆಟೊ
ಟೊಮೆಟೊ ಮುಖಕ್ಕೆ ಸ್ಕ್ರಬ್ ಮಾಡುವುದರಿಂದ ನಿಮ್ಮ ಮುಖದಲ್ಲಿರುವ ಪಿಂಪಲ್ ಕಡಿಮೆ ಮಾಡಿ ಮುಖದ ಕಾಂತಿಯನ್ನು ಹೆಚ್ಚಿಸುವುದಲ್ಲದೆ. ಇದನ್ನು ಸೇವನೆ ಮಾಡುವುದರಿಂದ ಕೂಡ ನಿಮ್ಮ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಬಹುದು. ಊಟದ ತಟ್ಟೆಯಲ್ಲಿ ಸಿಗುವ ಟೊಮೆಟೊವನ್ನು ತಟ್ಟೆಬದಿಯಲ್ಲಿ ಇಡುವ ಬದಲು ಇದನ್ನು ಸೇವನೆ ಮಾಡಿದರೆ ನಿಮ್ಮ ಮುಖದ ಕಾಂತಿ ಇನ್ನಷ್ಟು ಹೆಚ್ಚಿಗೆ ಆಗುತ್ತದೆ. ಟೊಮೆಟೊ ಹಣ್ಣಿನಲ್ಲಿರುವ ನೈಸರ್ಗಿಕ ವಿಟಮಿನ್,ಖನಿಜ, ಕಬ್ಬಿಣ, ಮೆಗ್ನೀಸಿಯಮ್ ಅಂಶಗಳು ಮುಖದ ಕಾಂತಿಯನ್ನು ಹೆಚ್ಚಿಸುವುದಷ್ಟೇ ಅಲ್ಲದೆ ಹಲವು ಆರೋಗ್ಯ ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಕಿತ್ತಳೆ
ಕಿತ್ತಳೆ ಹಣ್ಣು ಮತ್ತು ಇದರ ಸಿಪ್ಪೆಯಿಂದಲೂ ಕೂಡ ಹಲವ ಆರೋಗ್ಯದ ಪ್ರಯೋಜನವಿದೆ. ಕಿತ್ತಳೆ ಹಣ್ಣು ಸೇವನೆ ಮಾಡುವುದರಿಂದ ಆರೋಗ್ಯ ಕಾಪಾಡುವುದಲ್ಲದೆ ನಿಮ್ಮ ಮುಖದ ಅಂದ ಕೂಡ ಹೆಚ್ಚಾಗುತ್ತದೆ. ಕಿತ್ತಳೆ ಸಿಪ್ಪೆಯನ್ನು ಪುಡಿಮಾಡಿಟ್ಟುಕೊಂಡು ಮುಖಕ್ಕೆ ಲೇಪನ ಮಾಡಿಕೊಂಡು ಸ್ವಲ್ಪ ಸಮಯ ಬಿಟ್ಟು ತೊಳೆಯುವುದರಿಂದ ನಿಮ್ಮ ಮುಖದ ಕಾಂತಿ ಹೆಚ್ಚಾಗುವಂತೆ ಮಾಡುತ್ತದೆ. ಕಿತ್ತಳೆ ಹಣ್ಣಿನಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವುದರಿಂದ ಚರ್ಮದ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ.
ಆವಕಾಡೊ
ಆವಕಾಡೊ ತಿನ್ನಲು ರುಚಿಕರ ಅಷ್ಟೇ ಅಲ್ಲದೆ ನಿಮ್ಮ ಆರೋಗ್ಯವನ್ನು ಕಾಪಾಡುತ್ತದೆ ಮತ್ತು ಮುಖದ ಕಾಂತಿ ಹೆಚ್ಚಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದರಲ್ಲಿರುವ ಖನಿಜ, ವಿಟಮಿನ್ ಸಿ,ಇ ಮುಖದ ಹಲವು ಸಮಸ್ಯೆಗಳನ್ನು ನಿವಾರಣೆ ಮಾಡುತ್ತದೆ. ಈ ಆವಕಾಡೊ ಹಣ್ಣು ತಿನ್ನುವುದರಿಂದ ನಿಮ್ಮ ಮುಖಕ್ಕೆ ತೇವಾಂಶವನ್ನು ನೀಡುತ್ತದೆ. ಮತ್ತು ಚರ್ಮದ ಸುಕ್ಕುಗಳನ್ನು ಕಡಿಮೆ ಮಾಡುತ್ತದೆ.
ಕಲ್ಲಂಗಡಿ
ಕಲ್ಲಂಗಡಿ ಹಣ್ಣಿನಲ್ಲಿರುವ ಅತಿ ಹೆಚ್ಚು ನೀರಿನ ಅಂಶ ದೇಹ ಯಾವಾಗಲು ಹೈಡ್ರೇಟ್ ಆಗಿರುವಂತೆ ನೊಡಿಕೊಳ್ಳುತ್ತದೆ. ಇದರಲ್ಲಿರುವ ನೈಸರ್ಗಿಕ ಅಂಶ ಮೊಡವೆಗಳನ್ನು ಕಡಿಮೆ ಮಾಡಿ ನಿಮ್ಮ ಮುಖದ ಕಾಂತಿ ಹೆಚ್ಚಾಗುವಂತೆ ಮಾಡುತ್ತದೆ. ಕಲ್ಲಂಗಡಿ ಹಣ್ಣು ಅಥವಾ ಜ್ಯೂಸ್ ಕುಡಿಯುವುದರಿಂದ ನಿಮ್ಮ ಮುಖದ ಅಂದವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳಬಹುದು.
ಇದನ್ನೂ ಓದಿ:Health Effects Of Cigarette : ಸಿಗರೇಟ್ ಸೇದುವ ಮುನ್ನ ಎಚ್ಚರ : ನಿಮ್ಮನ್ನು ಕಾಡುತ್ತದೆ ಈ ಗಂಭೀರ ಸಮಸ್ಯೆ
ಇದನ್ನೂ ಓದಿ:Peach Fruit Health Tips:ದೇಹವನ್ನು ಹೈಡ್ರೇಟ್ ಆಗಿರಿಸುತ್ತೆ “ಪೀಚ್ ಪ್ರೂಟ್”
ದಾಳಿಂಬೆ
ದಾಳಿಂಬೆ ಹಣ್ಣು ಮತ್ತು ಇದರ ಸಿಪ್ಪೆಯಿಂದ ಹಲವು ಆರೋಗ್ಯದ ಪ್ರಯೋಜನವಿದೆ. ದಾಳಿಂಬೆ ಹಣ್ಣು ತಿನ್ನುವುದರಿಂದ ಮಧುಮೇಹ , ರಕ್ತದೊತ್ತಡವನ್ನು ಕಡಿಮೆ ಮಾಡುತ್ತದೆ. ಮತ್ತು ನಿಮ್ಮ ಮುಖದ ಅಂದವನ್ನು ಕೂಡ ಹೆಚ್ಚಿಸುತ್ತದೆ. ಇದರ ಸಿಪ್ಪೆಯನ್ನು ಬಿಸಿಲಿನಲ್ಲಿ ಒಣಗಿಸಿ ಪುಡಿಮಾಟ್ಟುಕೊಂಡು ಮುಖಕ್ಕೆ ಹಚ್ಚುವುದರಿಂದ ಮುಖದಲ್ಲಿರುವ ಮೊಡವೆ ಮತ್ತು ಕಲೆಗಳನ್ನು ಕಡಿಮೆ ಮಾಡುತ್ತದೆ.
Fruits and Vegetables Health Tips Fruits and vegetables naturally enhance your beauty