ವಾಷಿಂಗ್ಟನ್ : ಕೊರೊನಾ ವೈರಸ್ ಸೋಂಕನ್ನು ಮಟ್ಟಹಾಕಲು ವಿಶ್ವದೆಲ್ಲೆಡೆ ಕೊರೊನಾ ಲಸಿಕೆಯನ್ನು ನೀಡಲಾಗುತ್ತಿದೆ. ಆದರೆ ಕೊರೊನಾ ಲಸಿಕೆ ಪಡೆದ್ರೆ ಮಕ್ಕಳಾಗಲ್ಲ ಅನ್ನೋ ಸುದ್ದಿಯಿಂದಾಗಿ ಅಮೇರಿಕಾದ ಯುವ ಜನತೆ ಬೆಚ್ಚಿಬಿದ್ದಿದ್ದು, ಲಸಿಕೆ ಪಡೆಯಲು ಹಿಂದೇಟು ಹಾಕಿದ್ದಾರೆ.

ಜೋ ಬೈಡನ್ ಸರಕಾರ ಅಮೇರಿಕಾದ ಎಲ್ಲಾ ನಾಗರೀಕರಿಗೆ ಕೊರೊನಾ ಲಸಿಕೆ ನೀಡುವ ಮೂಲಕ ಕೊರೊನಾ ಸೋಂಕಿನಿಂದ ಸಂಪೂರ್ಣವಾಗಿ ಪಾರಾಗಲು ಮುಂದಾಗಿದೆ. ಆದರೆ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿರುವ ಆ ಒಂದು ಸುದ್ದಿ ವ್ಯಾಕ್ಸಿನೇಷನ್ ಪ್ರಕ್ರಿಯೆ ಕುಂಠಿತವಾಗುವಂತೆ ಮಾಡಿದೆ.

ಕೊರೊನಾ ನಿರೋಧಕ ಲಸಿಕೆಯ ಪ್ರಭಾವದಿಂದ ಲಸಿಕೆ ಪಡೆದವರು ಭವಿಷ್ಯದಲ್ಲಿ ಸಂತಾನ ಹೊಂದಲು ಸಾಧ್ಯವಿಲ್ಲ ಅನ್ನೋ ಮಾಹಿತಿ ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದೆ. ಇದರಿಂದ ಬೆದರಿದ 18 ರಿಂದ 49 ವರ್ಷದೊಳಗಿನ ಬಹುತೇಕ ಅಮೇರಿಕನ್ನರು ಕೋವಿಡ್ ಲಸಿಕೆ ಪಡೆಯಲು ಹಿಂದೇಟು ಹಾಕುತ್ತಿದ್ದಾರೆ. ಲಸಿಕೆ ಪಡೆದರೆ ಸಂತಾನೋತ್ಪತ್ತಿಗೆ ತೊಂದರೆಯಾಗಲಿದೆ ಎಂಬ ಅನುಮಾನದಿಂದ ಮಹಿಳೆಯರೇ ಹೆಚ್ಚಿನ ಸಂಖ್ಯೆಯಲ್ಲಿ ಲಸಿಕೆಯನ್ನು ಪಡೆದುಕೊಳ್ಳು ತ್ತಿಲ್ಲ. ಅಮೇರಿಕಾದ ಜನರು ಲಸಿಕೆ ವಿಚಾರದಲ್ಲಿ ಆತಂಕ ವ್ಯಕ್ತಪಡಿ ಸುತ್ತಿದ್ದಾರೆ ಎಂದು ಕೈಸರ್ ಫ್ಯಾಮಿಲಿ ಫೌಂಡೇಶನ್‌ನ ನಿರ್ದೇಶಕ ಆಶ್ಲೇ ಕಿರ್ಜಿಂಜರ್ ಹೇಳಿದ್ದಾರೆ.

ಅಮೇರಿಕಾದಲ್ಲಿ ಕೊರೊನಾ ಲಸಿಕೆಯನ್ನು ಗರ್ಭಿಣಿಯರ ಮೇಲೆ ಪ್ರಯೋಗ ನಡೆಸಿಲ್ಲ. ಇದು ಅಮೇರಿಕಾದ ಯುವ ಜನರ ಅನುಮಾನ ಕ್ಕೆ ಪುಷ್ಟಿ ನೀಡಿದೆ. ಅಲ್ಲದೇ ನಕಲಿ ಸಂದೇಶ ಮಹಿಳೆಯರ ಕಳವಳಕ್ಕೆ ಕಾರಣವಾಗಿದೆ. ಲಸಿಕೆಗಳು ಬಂಜೆತನಕ್ಕೆ ಕಾರಣವಾಗ ಬಹುದು ಎಂಬುದಕ್ಕೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲ ಎಂದು ವಿಜ್ಞಾನಿ ಗಳು ಪದೇ ಪದೇ ಸ್ಪಷ್ಟಪಡಿಸುತ್ತಿದ್ದಾರೆ. ಆದರೆ ಅಮೇರಿಕನ್ನರು ಮಾತ್ರ ಯಾವುದನ್ನೂ ನಂಬುವ ಸ್ಥಿತಿಯಲ್ಲಿಲ್ಲ.
