ಬೆಂಗಳೂರು : 2021ನೇ ಸಾಲಿನ ಸಾರ್ವತ್ರಿಕ ರಜಾ ದಿನಗಳ ಪಟ್ಟಿಯನ್ನು ರಾಜ್ಯ ಸರಕಾರ ಇಂದು ಪ್ರಕಟಿಸಿದೆ. ಕರ್ನಾಟಕ ಇಂಡಸ್ಟ್ರೀಯಲ್ ಎಸ್ಟಾಬ್ಲಿಷ್ಮೆಂಟ್ ಆಕ್ಟ್ 1963ರಂತೆ ವಾರ್ಷಿಕ ಕನಿಷ್ಠ ಹತ್ತು ದಿನಗಳ ರಜೆಯನ್ನು ಎಲ್ಲಾ ಕಾರ್ಮಿಕರಿಗೂ ಸಂಸ್ಥೆಗಳು ನೀಡುವಂತೆ ಸೂಚಿಸಿದೆ.
ಈ ಬಾರಿ ಮಹಾವೀರ ಜಯಂತಿ ಹಾಗೂ ಸ್ವಾತಂತ್ರ್ಯ ದಿನಾಚರಣೆ ಭಾನುವಾರ ಬಂದಿದ್ರೆ, ಕ್ರಿಸ್ ಮಸ್ ರಜೆ ನಾಲ್ಕನೇ ಶನಿವಾರ ಬಂದಿರುವುದರಿಂದ ರಜಾ ಪಟ್ಟಿಯಲ್ಲಿ ರಜೆಯನ್ನು ಪ್ರಕಟಿಸಿಲ್ಲ, ಅಲ್ಲದೇ ಎಪ್ರಿಲ್ 1ರಂದು ವಾಣಿಜ್ಯ ಬ್ಯಾಂಕುಗಳ ಹಾಗೂ ಸಹಕಾರಿ ಬ್ಯಾಂಕುಗಳ ವಾರ್ಷಿಕ ಮುಕ್ತಾಯದ ದಿನವಾಗಿರುವುದರಿಂದ ವಾಣಿಜ್ಯ ಹಾಗೂ ಸಹಕಾರಿ ಬ್ಯಾಂಕುಗಳಿಗೆ ಮಾತ್ರವೇ ರಜೆಯನ್ನು ರಾಜ್ಯ ಸರಕಾರ ಘೋಷಿಸಿದೆ. ಉಳಿದಂತೆ ರಾಜ್ಯ ಸರಕಾರ ಘೋಷಣೆ ಮಾಡಿರುವ ರಜಾ ದಿನಗಳ ವಿವರ ಈ ಕೆಳಗಿನಂತಿದೆ.


