Home Remedies For Headache : ಒಮ್ಮೆ ತಲೆನೋವು ಕಾಡೋಕೆ ಶುರುವಾಯ್ತು ಅಂದರೆ ಸಾಕು ಯಾವ ಕೆಲಸ ಮಾಡೋಕೂ ಮನಸ್ಸು ಇರೋದೇ ಇಲ್ಲ. ಈ ತಲೆನೋವು ವಾಸಿಯಾಗಬೇಕು ಅಂತಾ ನಾವು ನೋವು ನಿವಾರಕ ಮಾತ್ರೆಗಳನ್ನು ಸೇವನೆ ಮಾಡುತ್ತೇವೆ. ಆದರೆ ತಲೆನೋವನ್ನು ನಾವು ನೈಸರ್ಗಿಕ ವಿಧಾನದ ಮೂಲಕ ವೂ ವಾಸಿ ಮಾಡಬಹುದು ಎಂಬ ಅಂಶ ನಿಮಗೆ ತಿಳಿದಿದೆಯೇ..? ಮನೆಮದ್ದುಗಳ ಸಹ ತಲೆನೋವಿನ ತೀವ್ರತೆಯನ್ನು ಕಡಿಮೆ ಅಥವಾ ಸಂಪೂರ್ಣ ವಾಸಿಮಾಡುವ ಸಾಮರ್ಥ್ಯವನ್ನು ಹೊಂದಿವೆ. ನೀವು ಸಹ ಮೈಗ್ರೇನ್ನಂತಹ ಸಮಸ್ಯೆಗಳನ್ನು ಹೊಂದಿದ್ದರೆ ಈ ಮನೆಮದ್ದುಗಳನ್ನು ಬಳಕೆ ಮಾಡಬಹುದಾಗಿದೆ.
ಶುಂಠಿ : ತಲೆನೋವಿನಿಂದ ತ್ವರಿತವಾಗಿ ಉಪಶಮನ ಪಡೆಯಲು ನೀವು ಶುಂಠಿ ಬಳಕೆ ಮಾಡಬಹುದಾಗಿದೆ. ಶುಂಠಿಯು ತಲೆಯಲ್ಲಿರುವ ರಕ್ತನಾಳಗಳ ಊತವನ್ನು ಕಡಿಮೆ ಮಾಡುತ್ತದೆ. ಹಾಗೂ ಜೀರ್ಣಶಕ್ತಿಯನ್ನು ಉತ್ತೇಜಿಸುವ ಮೂಲಕ ಮೈಗ್ರೇನ್ ಸಂದರ್ಭದಲ್ಲಿ ಉಂಟಾಗುವ ವಾಕರಿಕೆ ಸಮಸ್ಯೆಯನ್ನು ದೂರ ಮಾಡುತ್ತದೆ. ಶುಂಠಿ ರಸ ಹಾಗೂ ನಿಂಬೆ ರಸವನ್ನು ಸಮಾನ ಪ್ರಮಾಣದಲ್ಲಿ ಮಿಶ್ರಣ ಮಾಡಿ ನೀವು ತಲೆನೋವಿಗೆ ಮದ್ದಾಗಿ ಬಳಕೆ ಮಾಡಬಹುದಾಗಿದೆ. ಈ ಮಿಶ್ರಣವನ್ನು ನೀವು ದಿನಕ್ಕೆ ಎರಡರಿಂದ ಮೂರು ಬಾರಿ ಕುಡಿಯಬೇಕು.
ಪುದೀನಾ ಎಣ್ಣೆ: ತಲೆನೋವಿಗೆ ಕಾರಣವಾಗುವ ಮುಚ್ಚಿದ ರಕ್ತನಾಳಗಳನ್ನು ತೆರೆಯಲು ಪುದೀನಾ ಸಹಾಯ ಮಾಡುತ್ತದೆ. ಇದು ದೇಹದಲ್ಲಿ ರಕ್ತದ ಹರಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ತಲೆನೋವನ್ನು ಹೋಗಲಾಡಿಸಲು ನೀವು 1 ಚಮದ ಬಾದಾಮಿ ಎಣ್ಣೆಗೆ ಮೂರು ಹನಿ ಪುದೀನಾ ಎಣ್ಣೆಯನ್ನು ಬೆರೆಸಿ ನಿಮ್ಮ ಕುತ್ತಿಗೆಯ ಹಿಂಭಾಗವನ್ನು ಮಸಾಜ್ ಮಾಡಿಕೊಳ್ಳಿ. ಇದರಿಂದ ನಿಮಗೆ ತಲೆನೋವಿನಿಂದ ಮುಕ್ತ್ತಿ ಸಿಗಲಿದೆ.ಇಲ್ಲವಾದಲ್ಲಿ ನೀವು 1 ಕಪ್ ಕುದಿಯುವ ನೀರಿಗೆ 1 ಟೀ ಚಮಚ ಒಣಗಿದ ಪುದೀನಾವನ್ನು ಸೇರಿಸಿ ಗಿಡಮೂಲಕ ಚಹಾವನ್ನು ಸವಿಯಬಹುದು. 10 ನಿಮಿಷಗಳ ಕಾಲ ಇದನ್ನು ಕುದಿಯಲು ಬಿಟ್ಟು ಬಳಿಕ ಜೇನುತುಪ್ಪ ಸೇರಿಸಿ ಕುಡಿಯಿರಿ.
ದಾಲ್ಚಿನ್ನಿ: ದಾಲ್ಚಿನ್ನಿ ಒಂದು ಮಾಂತ್ರಿಕ ಮಸಾಲೆಯಾಗಿದ್ದು, ತಲೆನೋವಿಗೆ ಪರಿಣಾಮಕಾರಿ ಪರಿಹಾರಗಳಲ್ಲಿ ಒಂದಾಗಿದೆ. ಇದನ್ನು ಬಳಸಲು, ದಾಲ್ಚಿನ್ನಿ ಪುಡಿಮಾಡಿ ಅದಿಕ್ಕೆ ಸ್ವಲ್ಪ ನೀರು ಸೇರಿಸಿ ದಪ್ಪ ಪೇಸ್ಟ್ ತಯಾರಿಸಿಕೊಳ್ಳಿ. ಈಗ ಅದನ್ನು ನಿಮ್ಮ ಹಣೆಗೆ ಹಚ್ಚಿಕೊಂಡು ಮತ್ತು 30 ನಿಮಿಷಗಳ ಕಾಲ ಮಲಗಿಕೊಳ್ಳಿ. ನಂತರ ಅದನ್ನು ಉಗುರು ಬೆಚ್ಚಗಿನ ನೀರಿನಿಂದ ತೊಳೆಯಿರಿ.ಈ ರೀತಿ ಮಾಡುವುದರಿಂದಲೂ ನೀವು ತಲೆನೋವಿನಿಂದ ಮುಕ್ತಿ ಪಡೆಯಲಿದ್ದೀರಿ.
ಇದನ್ನು ಓದಿ : Health Tips : ದಿನಕ್ಕೊಂದು ನೆಲ್ಲಿಕಾಯಿ ಸೇವನೆಯಿಂದ ವಾಸಿಯಾಗಲಿದೆ ಈ ಮಾರಕ ಕಾಯಿಲೆ..!
ಇದನ್ನೂ ಓದಿ : Menstrual Health :ನೆನಪಿಡಿ: ಮುಟ್ಟಿನ ದಿನಗಳಲ್ಲಿ ಮಹಿಳೆಯರು ಮಾಡಲೇಬಾರದು ಈ ತಪ್ಪು..!
Home Remedies For Headache | Is Headache Weakening You? Get Rid Of It With These 3 Magical Ingredients