ಮಂಗಳವಾರ, ಏಪ್ರಿಲ್ 29, 2025
HomeBreakingHome Remedies for Monsoon : ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಈ...

Home Remedies for Monsoon : ಮಳೆಗಾಲದಲ್ಲಿ ಕಾಡುವ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಈ ಮನೆಮದ್ದು ರಾಮಬಾಣ

- Advertisement -

ಮಳೆಗಾಲವು ನಮ್ಮಲ್ಲಿ ಹೆಚ್ಚಿನವರಿಗೆ ಬಹುನಿರೀಕ್ಷಿತ (Home Remedies for Monsoon) ಬದಲಾವಣೆಯಾಗಿದೆ. ಇದು ಬೇಸಿಗೆಯ ಬಿಸಿಲಿನಿಂದ ದೇಹದ ದಣಿವು ನಿವಾರಕ ಮಾತ್ರವಲ್ಲದೇ, ಬೆಚ್ಚಗಿನ ವಾತಾವರಣವನ್ನು ನೀಡುತ್ತದೆ. ಆದರೆ, ಇದು ವೈರಸ್‌ಗಳು ಮತ್ತು ವಿವಿಧ ರೀತಿಯ ಸೋಂಕುಗಳಂತಹ ವ್ಯಾಪಕವಾದ ಸಣ್ಣ ಮತ್ತು ಪ್ರಮುಖ ಕಾಯಿಲೆಗಳನ್ನು ಸಹ ತರಬಹುದು. ಅದರಲ್ಲೂ ಮಳೆಗಾಲದ ತಣ್ಣನೆಯ ವಾತಾವರಣದಿಂದ ಬಹಳ ಬೇಗನೇ ಕಾಣಿಸಿಕೊಳ್ಳುವ ಶೀತ, ಕೆಮ್ಮು ಹಾಗೂ ಜ್ವರಕ್ಕೆ ಒಂದಷ್ಟು ಮನೆಮದ್ದುಗಳು ಯಾವುದೇ ಅಡ್ಡಪರಿಣಾಮವಿಲ್ಲದೇ ಗುಣಮುಖರಾಗಬಹುದು. ಹಾಗಾದರೆ ನಮ್ಮ ದೇಹದ ಮೇಲೆ ಪರಿಣಾಮಕಾರಿ ಪ್ರಭಾವ ಬೀರುವ ಮನೆಮದ್ದುಗಳ ಬಗ್ಗೆ ತಿಳಿಯೋಣ.

ಜೀರಿಗೆ ಹಾಗೂ ಕೊತ್ತಂಬರಿಕಾಳು ಕಷಾಯ :
ಒಂದು ಪಾತ್ರೆಗೆ ಒಂದರಿಂದ ಒಂದೂವರೆ ಲೋಟ ಆಗುವಷ್ಟು ನೀರನ್ನು ಹಾಕಿ ಗ್ಯಾಸ್‌ ಮೇಲೆ ಇಟ್ಟು ಕುದಿಸಿಕೊಳ್ಳಬೇಕು. ನಂತರ ಉರಿದು ಪುಡಿ ಮಾಡಿ ಇಟ್ಟುಕೊಂಡಿರುವ (ಉದಾಹರಣೆಗೆ ಒಂದು ಕಪ್‌ ಜೀರಿಗೆ ಹಾಗೂ ಅರ್ಧ ಕಪ್‌ ಆಗುವಷ್ಟು ಕೊತ್ತಂಬರಿ ಬೀಜವನ್ನು ಹುರಿದು ಪುಡಿ ಮಾಡಿ ಡಬ್ಬಿಯಲ್ಲಿ ಇಟ್ಟುಕೊಳ್ಳಬಹುದು) ಜೀರಿಗೆ ಹಾಗೂ ಕೊತ್ತಂಬರಿಕಾಳು ಪುಡಿ (ಒಂದು ಟೇಬಲ್‌ ಸ್ಪೂನ್‌ನಷ್ಟು)ಯನ್ನು ಹಾಕಬೇಕು. ನಂತರ ಮೂರು ನಿಮಿಷಗಳ ಕಾಲ ಮಧ್ಯಮ ಉರಿಯಲ್ಲಿ ಚೆನ್ನಾಗಿ ಕುದಿಸಿಕೊಳ್ಳಬೇಕು. ಇದಕ್ಕೆ ಬೇಕಾದರೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪವನ್ನು ಸೇರಿಸಿಕೊಳ್ಳಬಹುದು. ಆಮೇಲೆ ಒಂದು ಲೋಟಕ್ಕೆ ಸೊಸಿಕೊಂಡು ಬೆಚ್ಚಗೆ ಇರುವಾಗ ಕುಡಿಯುವುದರಿಂದ ಒಳಗಿನ ಜ್ವರ ಇದ್ದರೂ ಕೂಡ ಗುಣವಾಗುತ್ತದೆ. ನಮ್ಮ ದೇಹದ ಜೀರ್ಣಾಂಗ ವ್ಯವಸ್ಥೆಯನ್ನು ಸರಿ ಮಾಡುತ್ತದೆ.

ಕಲ್ಲುಸಕ್ಕರೆ, ನಿಂಬೆ ರಸ ಹಾಗೂ ಕಾಳು ಮೆಣಸಿನ ಉಂಡೆ :
ಕಲ್ಲುಸಕ್ಕರೆ, ನಿಂಬೆ ರಸ ಹಾಗೂ ಕಾಳು ಮೆಣಸಿನ ಪುಡಿಯನ್ನು ಬಳಸಿಕೊಂಡು ಮಾಡುವ ಈ ಉಂಡೆ ಮಳೆಗಾಲದಲ್ಲಿ ಸಾಮಾನ್ಯವಾಗಿ ಬಿಟ್ಟು ಬಿಡದೇ ಬರುವ ಕೆಮ್ಮುಗೆ ಬೆಸ್ಟ್‌ ಮನೆ ಮುದ್ದು ಎಂದರೆ ತಪ್ಪಾಗಲ್ಲ. ಇದನ್ನು ಮಾಡುವಾಗ ಮೊದಲಿಗೆ ( ಒಂದು ಹಿಡಿ ಕಲ್ಲು ಸಕ್ಕರೆಗೆ ಅರ್ಧ ಚಮಚ ಕಾಳು ಮೆಣಸನ್ನು ಬಳಸಿ) ಕಲ್ಲು ಸಕ್ಕರೆ ಹಾಗೂ ಕಾಳು ಮೆಣಸನ್ನು ನುಣ್ಣಗೆ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಹಿಡಿ ಇರುವ ಪಾತ್ರೆಗೆ ಈ ಮಿಶ್ರಣವನ್ನು ಹಾಕಿಕೊಂಡು ಸಣ್ಣ ಉರಿಯಲ್ಲಿ ಬಿಸಿ ಮಾಡಿಕೊಳ್ಳಬೇಕು. ಅದು ಬಿಸಿಯಾಗಿ ಲೇಹ ರೂಪಕ್ಕೆ ಬಂದಾಗ, ಸಣ್ಣದಾದರೆ ಅರ್ಧ ನಿಂಬೆ ಹಣ್ಣಿನ ರಸ ಹಾಕಿ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಎರಡು ನಿಮಿಷ ಬಿಸಿ ಮಾಡಿಕೊಳ್ಳಬೇಕು. ನಂತರ ಬಿಸಿ ಸಂಪೂರ್ಣವಾಗಿ ಆರಿದಾಗ ಚಿಕ್ಕ ಉಂಡೆ ಮಾಡಿ ಬಾಯಿಯಲ್ಲಿ ಇಟ್ಟುಕೊಂಡರೆ ಕಾಡುವ ಕೆಮ್ಮು ಸಂಪೂರ್ಣವಾಗಿ ಗುಣವಾಗುತ್ತದೆ.

ದಾಳಿಂಬೆ ರಸ :
ಮಕ್ಕಳು ಅಥವಾ ದೊಡ್ಡವರಿಗೆ ಜ್ವರ ಬಿಟ್ಟುಬಿಡದೇ ಬರುತ್ತಿದ್ದು, ಏನನ್ನು ತಿನ್ನಲು ಆಗದಿದ್ದಾಗ ದಾಳಿಂಬೆ ಹಣ್ಣಿನ್ನು ಬಿಡಿಸಿ ಒಂದು ಬಟ್ಟಲಿಗೆ ಹಾಕಿ ಒಂದು ಲೋಟದಲ್ಲಿ ಸ್ಮಾಶ್‌ ಮಾಡಿ ಜಾರಡಿಯಲ್ಲಿ ಅದರ ರಸವನ್ನು ಸೊಸಿ ಕುಡಿಯುವುದರಿಂದ ಜ್ವರ ಬೇಗನೆ ಗುಣವಾಗುತ್ತದೆ. ಅಷ್ಟೇ ಅಲ್ಲದೇ ಬಾಯಿ ರುಚಿ ಕೂಡ ಹೆಚ್ಚಿಸುತ್ತದೆ. ರೋಗ ನಿರೋಧಕ ಶಕ್ತಿಯನ್ನೂ ಕೂಡ ಹೆಚ್ಚಿಸುತ್ತದೆ.

ದೊಡ್ಡ ಪತ್ರ ಎಲೆ :
ಮಕ್ಕಳಲ್ಲಿ ಹೆಚ್ಚಾಗಿ ಕಾಡುವ ಕೆಮ್ಮು ಹಾಗೂ ಕಫಕ್ಕೆ ದೊಡ್ಡ ಪತ್ರ ಎಲೆಯ ರಾಮಬಾಣ. ಅದರಲ್ಲೂ ತುಂಬಾ ಚಿಕ್ಕ ಮಕ್ಕಳಿಗೆ ಇದು ತುಂಬಾ ಪ್ರಯೋಜನಕಾರಿ ಎನ್ನಬಹುದು. ಈ ಎಲೆಯನ್ನು ಬಿಸಿ ಮಾಡಿ ಸ್ವಲ್ಪ ಬಣ್ಣ ಬದಲಾಗುವರೆಗೂ ಬಿಸಿ ಮಾಡಿಕೊಂಡು ಚಿಕ್ಕ ಮಕ್ಕಳಿಗೆ ಟೋಪಿ ಹಾಕುವ ನೆತ್ತಿಯ ಮೇಲೆ ಇಟ್ಟರೆ ಮೂಗು ಕಟ್ಟುವುದು ಕಫ ಹಾಗೂ ಕೆಮ್ಮುನಿಂದ ಮುಕ್ತಿ ನೀಡುತ್ತದೆ. ಇನ್ನು ಸ್ವಲ್ಪ ದೊಡ್ಡ ಮಕ್ಕಳಿಗೆ ಇದರ ರಸ ತೆಗೆದು ಕುಡಿಸುವುದರಿಂದ ಕೆಮ್ಮು ಹಾಗೂ ಕಫ ದೂರವಾಗುತ್ತದೆ.

ಇದನ್ನೂ ಓದಿ : Drinking Water in Monsoon : ಮಳೆಗಾಲದಲ್ಲಿ ಕುಡಿಯುವ ನೀರಿನ ಬಗ್ಗೆ ಇರಲಿ ಗಮನ

ಇದನ್ನೂ ಓದಿ : Ayurvedic Monsoon Diet : ಮಳೆಗಾಲದಲ್ಲಿ ಈ ರೀತಿ ಜೀವನಶೈಲಿ ಅನುಸರಿಸಿ, ಆರೋಗ್ಯವನ್ನು ಕಾಪಾಡಿಕೊಳ್ಳಿ

ನಿಮ್ಮ ಪ್ರದೇಶದಲ್ಲಿ ಸಣ್ಣ ಕೊಚ್ಚೆಗುಂಡಿಗಳ ರೂಪದಲ್ಲಿ ನಿಂತ ನೀರು ವಿವಿಧ ಸೋಂಕುಗಳನ್ನು ಹರಡುವ ಅಪಾಯಕಾರಿ ಸೊಳ್ಳೆಗಳ ಸಂತಾನೋತ್ಪತ್ತಿಗೆ ಕಾರಣವಾಗಬಹುದು. ಮಾನ್ಸೂನ್ ಅನ್ನು ಪೂರ್ಣವಾಗಿ ಆನಂದಿಸುತ್ತಿರುವಾಗ ನಿಮ್ಮ ಕುಟುಂಬವನ್ನು ಸುರಕ್ಷಿತವಾಗಿರಿಸಲು ಕೆಲವು ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುವುದು ಅವಶ್ಯಕ.

Home Remedies for Monsoon: This home remedy is a panacea for cold, cough and fever during monsoon

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular