ದೆಹಲಿ: ವಿರಾಟ್ ಕೊಹ್ಲಿ ಪಡೆ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ಗೆ ಸಿದ್ಧತೆ ನಡೆಸುತ್ತಿದ್ದರೇ ಇತ್ತ ಇಂದಿನಿಂದ ಮಹಿಳಾ ಟೆಸ್ಟ್ ಪಂದ್ಯಾವಳಿ ಆರಂಭಗೊಂಡಿದೆ. ಮಿಥಾಲಿರಾಜ್ ನೇತೃತ್ವದಲ್ಲಿ ಭಾರತದ ಮಹಿಳಾ ತಂಡ ಟೆಸ್ಟ್ ಪಂದ್ಯದ ಕಣಕ್ಕಳಿದಿದೆ.

7 ವರ್ಷಗಳ ಬಳಿಕ ಭಾರತೀಯ ಮಹಿಳಾ ಕ್ರಿಕೆಟ್ ಟೀಂ ಟೆಸ್ಟ್ ಪಂದ್ಯಾವಳಿಯಾಡಲು ಸಿದ್ಧವಾಗಿದ್ದು, ಬುಧವಾರ ಮಧ್ಯಾಹ್ನ 3.30ಕ್ಕೆ ಟೆಸ್ಟ್ ಆರಂಭವಾಗಲಿದೆ. 2014 ರ ನಂತರ ಇದೇ ಮೊದಲ ಬಾರಿಗೆ ಮತ್ತೆ ಇಂಡಿಯನ್ ವುಮನ್ಸ್ ಕ್ರಿಕೆಟ್ ಟೀಂ ಟೆಸ್ಟ್ ಮ್ಯಾಚ್ ಆಡುತ್ತಿದೆ.

ಭಾರತದ ಮಹಿಳಾ ತಂಡ ಇಂದು ಆರಂಭವಾಗೋ ಪಂದ್ಯದಲ್ಲಿ ಇಂಗ್ಲೆಂಡ್ ನ್ನು ಎದುರಿಸಲಿದ್ದು, ಭರ್ಜರಿ ಸಿದ್ಧತೆ ನಡೆಸಿದೆ. ಕೊನೆಯದಾಗಿ ಭಾರತದ ಮಹಿಳಾ ಕ್ರಿಕೆಟರಗಳು, ದಕ್ಷಿಣ ಆಫ್ರಿಕಾ ತಂಡದ ವಿರುದ್ಧ ಮೈಸೂರಿನಲ್ಲಿ ಪಂದ್ಯವಾಡಿದ್ದರು.

ಇಂದು ಟೆಸ್ಟ್ ಗೆ ಸಿದ್ಧವಾಗಿರೋ ಭಾರತೀಯ ಟೀಂನಲ್ಲಿ ಮಿಥಾಲಿ ರಾಜ್(ನಾಯಕಿ). ಸ್ಮೃತಿ ಮಂದಾನ್, ಹರಪ್ರೀತ್ ಕೌರ್, ಪುನಮ್ ರಾವತ್, ಪ್ರಿಯಾ ಪುನಿಯಾ, ದೀಪ್ತಿ ಶರ್ಮಾ, ಜೆಮಿಮಾ ರೋಡ್ರಿಗಸ್, ಶಫಾಲಿ ವರ್ಮಾ, ಸ್ನೇಹ ರಾಣಾ, ತಾನಿಯಾ ಭಾಟಿಯಾ,ಇಂದ್ರಾಣಿ ಗೋಸ್ ಜಮ್, ಶಿಖಾ ಪಾಂಡೆ, ಪೂಜಾ ವಸ್ತ್ರಕರ್, ಅರುಂಧತಿ ರೆಡ್ಡಿ, ಪೂನಂ ಯಾದವ್, ಏಕ್ತಾ ಬಿಶ್ತ್, ರಾಧಾ ಯಾದವ್ ಟೀಂನಲ್ಲಿದ್ದಾರೆ.

ಇಂಗ್ಲೆಂಡ್ ತಂಡದಲ್ಲಿ ಹೀದರ್ ನೈಟ್ (ನಾಯಕಿ) ಎಮಿಲಿ ಅಲಾರ್ಟ್, ಟಮ್ಮಿ ಬ್ಯೂಮಾಂಟ್, ಕ್ಯಾಥರಿನ್ ಬ್ರಂಟ್, ಕ್ರೇಟ್ ಕ್ರಾಸ್, ಫ್ರೇಯಾ ಡೇವಿಸ್ ಸೋಫಿಯಾ ಡಂಕ್ಲೆ,ಸೋಫಿ ಎಕ್ಲೆಸ್ಟೋನ್,ಜಾರ್ಜಿಯಾ ಎಲ್ವಿಸ್,ಟ್ಯಾಶ್ ಫಾರಂಟ್, ಸಾರಾ ಗ್ಲೇನ್, ಆಮಿ ಜೋನ್ಸ್, ನ್ಯಾಟ್ ಸ್ಕವರ್, ಅನ್ಯಾ ಶ್ರಬ್ಸೋಲ್, ಮ್ಯಾಡಿ ವಿಲಿಯರ್ಸ್,ಫ್ರಾನ್ ವಿಲ್ಸನ್,ಲಾರೆನ್ ವಿನ್ಫಿಲ್ಡ್ ಹಿಲ್ ಆಡಲಿದ್ದಾರೆ.