ನವದೆಹಲಿ:ಎಲ್ಲ ವರ್ಷಗಳಂತೇ ಈ ವರ್ಷವೂ ಅಂತ್ಯದಲ್ಲಿದೆ. 2021 ರ ಆರಂಭಕ್ಕೆ ದಿನ ಗಣನೆ ನಡೆದಿರುವ ಬೆನ್ನಲ್ಲೇ, ವಿಶ್ವದ ಅತಿದೊಡ್ಡ ಸರ್ಚ್ ಇಂಜಿನ್ ಈ ವರ್ಷದ ಅತಿ ಹೆಚ್ಚು ಸರ್ಚ್ ಗಳನ್ನು ಪಟ್ಟಿ ಮಾಡಿ ಬಿಡುಗಡೆಗೊಳಿಸಿದ್ದು, ನೀರಿಕ್ಷೆಯಂತೆ ಕೊರೋನಾ ಅಗ್ರಸ್ಥಾನದಲ್ಲಿದ್ದರೂ ಇನ್ನಷ್ಟು ಇಂಟ್ರಸ್ಟಿಂಗ್ ಸಂಗತಿಗಳು ಈ ಲಿಸ್ಟ್ ನಲ್ಲಿವೆ.

೨೦೨೦ ಎಲ್ಲ ವರ್ಷಗಳಂತೆ ಕಳೆಯಲಿಲ್ಲ. ಬಹುತೇಕರು ವರ್ಷದ ಬಹುಭಾಗವನ್ನು ಮನೆಯಲ್ಲೇ ಕಳೆದಿದ್ದಾರೆ. ಇಂಥ ಹೊತ್ತಿನಲ್ಲಿ ಜನರ ಅನುಮಾನ ಹಾಗೂ ವಿಚಾರಣೆಗೆ ಕಿವಿಯಾಗಿದ್ದು, ಕಣ್ಣಾಗಿದ್ದು ಸರ್ಚ್ ಇಂಜಿನ್ ಗೂಗಲ್. ಈಗ ವರ್ಷಾಂತಕ್ಕೆ ವಿಶ್ವದಾದ್ಯಂತ ಅತಿ ಹೆಚ್ಚು ಹುಡುಕಲ್ಪಟ್ಟ ಸಂಗತಿಗಳು ಯಾವುದು ಎಂಬ ಪಟ್ಟಿಯನ್ನು ಗೂಗಲ್ ಬಿಡುಗಡೆಗೊಳಿಸಿದೆ.

ಭಾರತದಲ್ಲಿ ಈ ಪಟ್ಟಿಯಲ್ಲಿ ಕೊರೋನಾ ವೈರಸ್ ಅಗ್ರ ಪಟ್ಟಿಯಲ್ಲಿದ್ದರೇ, ನಂತರದ ಸ್ಥಾನವನ್ನು ಕ್ರಮವಾಗಿ, ಅಮೇರಿಕದ ಅಧ್ಯಕ್ಷೀಯ ಚುನಾವಣೆ, ಪ್ರಧಾನಮಂತ್ರಿ ಕಿಸಾನ್ ಯೋಜನಾ, ಬಿಹಾರ ಚುನಾವಣೆ ಫಲಿತಾಂಶ, ದೆಹಲಿ ಚುನಾವಣಾ ಫಲಿತಾಂಶ, ದಿಲ್ ಬೇಚಾರಾ, ಜೋ ಬೈಡನ್, ಲೀಪ್ ಡೇ ಹಾಗೂ ಅರ್ನಬ್ ಗೋಸ್ವಾಮಿ ಪಡೆದುಕೊಂಡಿದ್ದಾರೆ.

ಇನ್ನು ೧೦ ಪ್ರಸಿದ್ಧ ವ್ಯಕ್ತಿಗಳನ್ನು ಗಮನಿಸೋದಾದರೇ, ಜೋ ಬೈಡನ್, ಅರ್ನಬ್ ಗೋಸ್ವಾಮಿ,ಕನಿಕಾ ಕಪೂರ್,ಕಿಮ್ ಜಾಂಗ್ ಯುನ್, ಅಮಿತಾಬ್ ಬಚ್ಚನ್,ರಶೀದ್ ಖಾನ್,ರಿಯಾ ಚಕ್ರವರ್ತಿ,ಕಮಲಾಹ್ಯಾರೀಸ್,ಅಂಕಿತ ಲೋಖಂಡೆ,ಕಂಗನಾ ರನಾವತ್ ಸ್ಥಾನ ಪಡೆದಿದ್ದಾರೆ.

ಅದರಲ್ಲೂ ನಟಿಮಣಿಯರ ಲಿಸ್ಟ್ ನಲ್ಲಿ ಕನಿಕಾ ಕಪೂರ್, ಕಂಗನಾ ಇವರೆಲ್ಲ ಪೂನಂಪಾಂಡೆ ಹಾಗೂ ಸನ್ನಿ ಲಿಯೋನ್ ಗಿಂತ ಹೆಚ್ಚಿನ ಸರ್ಚ್ ಗೊಳಗಾಗುವ ಮೂಲಕ ಸಾಧನೆ ಎಸಗಿದ್ದಾರೆ.

ಇನ್ನು ಗೂಗಲ್ ಅತಿ ಹೆಚ್ಚು ಬಾರಿ ಉತ್ತರಿಸಿದ ಪ್ರಶ್ನೆ ಕೊರೋನಾ ಎಂದರೇನು ? ಎಂಬುದಾಗಿದ್ದು, ಇದನ್ನು ಹೊರತುಪಡಿಸಿ, ಫ್ಲಾಸ್ಮಾ ಥೆರಫಿ ಎಂದರೇನು ? ಕೋವಿಡ್ -19 ಎಂದರೇನು ? ಹಂಟಾ ವೈರಸ್ ಎಂದರೇನು? ಕೋವಿಡ್ ತಡೆಯಲು ಕೈಗೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮವೇನು ಎಂಬ ಅಂಶಗಳು ಅತಿಹೆಚ್ಚು ಬಾರಿ ಪ್ರಶ್ನಿಸಲ್ಪಟ್ಟಿವೆ.

ಇನ್ನು ಲಾಕ್ ಡೌನ್ ನಿಂದಾಗಿ ಮನೆಯಲ್ಲೇ ಉಳಿದಿದ್ದ ಜನರು, ತಮ್ಮ ಹತ್ತಿರದ ಕೋವಿಡ್ ಪರೀಕ್ಷಾ ಕೇಂದ್ರ, ಲಿಕ್ಕರ್ ಶಾಪ್, ದಿನಸಿ ಅಂಗಡಿ,ಜಿಮ್, ಲ್ಯಾಪ್ ಟ್ಯಾಪ್ ಶಾಪ್, ಬ್ರಾಡ್ ಬ್ಯಾಂಡ್ ಕನೆಕ್ಷನ್ ಶಾಪ್ ,ಪರ್ನಿಚರ್ ಶಾಪ್, ಮೆಡಿಕಲ್ ಶಾಪ್ ಗಳನ್ನು ಹುಡುಕಿದ್ದಾರೆ.

ಒಟ್ಟಿನಲ್ಲಿ 2020 ರಲ್ಲಿ ಜನರು ಎಂಜಾಯ್ ಮೆಂಟ್ ಅಥವಾ ಫನ್ನಿ ಸಂಗತಿಗಳಿಗಿಂತ ಗಂಭೀರವಾದ ವಿಚಾರಗಳನ್ನೇ ಹುಡುಕುತ್ತ ವರ್ಷ ಕಳೆದಿದ್ದು, ಗೂಗಲ್ ತನ್ನ ಹಿಸ್ಟರಿ ಪ್ರಕಟಿಸಿ ವರ್ಷ ಹೇಗಿತ್ತು ಎಂಬುದಕ್ಕೆ ಪ್ರತ್ಯಕ್ಷ ಸಾಕ್ಷಿ ಒದಗಿಸಿದೆ.