
ನವದೆಹಲಿ: ಭಾರತದಾದ್ಯಂತ ಯುವಜನತೆಯನ್ನು ಮೊಬೈಲ್ ಗೆ ಅಂಟಿಕೊಂಡು ಕೂರುವಂತೆ ಮಾಡಿದ್ದ ಪಬ್ ಜೀ ಗೇಮ್ ಬ್ಯಾನ್ ಆಗ್ತಿದ್ದಂತೆ ಪೋಷಕರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದರು. ಆದರೇ ಇದೀಗ ಮತ್ತೆ ಹೋದೇಯಾ ಪಿಶಾಚಿ ಅಂದ್ರೇ ಬಂದೇ ಗವಾಕ್ಷಿಲೀ ಅನ್ನೋ ಹಾಗೆ ಮತ್ತೆ ಹೊಸ ರೂಪದಲ್ಲಿ ಪಬ್ ಜೀ ಗೇಮ್ ಅಖಾಡಕ್ಕಿಳಿಯಲು ಸಿದ್ಧವಾಗಿದೆ.

ಚೀನಾ ಗಡಿತಂಟೆಗೆ ತಕ್ಕ ಉತ್ತರ ನೀಡಲು ಮುಂದಾಗಿದ್ದ ಭಾರತ ಚೀನಾದ ಆಪ್ ಗಳ ಮೇಲೆ ನಿಷೇಧ ಹೇರಿತ್ತು. ಈ ವೇಳೆ ವಯಸ್ಸಿನ ಬೇಧವಿಲ್ಲದೇ ಜನರನ್ನು ಮೊಬೈಲ್ ಗೆ ಅಡಿಕ್ಟ್ ಮಾಡಿ ಅನಾಹುತಗಳಿಗೆ ಕಾರಣವಾಗಿದ್ದ ಪಬ್ ಜೀ ಗೇಮ್ ನ್ನು ಬ್ಯಾನ್ ಮಾಡಲಾಗಿತ್ತು.

ಆದರೆ ಪಬ್ ಜೀ ಬ್ಯಾನ್ ಆದ ಕೆಲವೇ ತಿಂಗಳಿನಲ್ಲಿ ಗೇಮ್ ಹೊಸ ರೂಪದಲ್ಲಿ ಇಂಡಿಯಾಕ್ಕೆ ಕಾಲಿಡಲು ಸಿದ್ಧವಾಗಿದ್ದು, ಪಬ್ ಜಿ ಇಂಡಿಯಾ ಹೆಸರಿನಲ್ಲಿ ಗೇಮ್ ಸಿದ್ಧಪಡಿಸಲಾಗಿದೆ. ಇದಕ್ಕಾಗಿ ಪಬ್ ಜಿ ಕಾರ್ಪೋರೇಷನ್ ಬರೋಬ್ಬರಿ 100 ಕೋಟಿ ರೂಪಾಯಿ ಬಂಡವಾಳ ಹೂಡಲು ಸಿದ್ಧವಾಗಿದೆ.

ಕೇವಲ ಗೇಮ್ ಮಾತ್ರವಲ್ಲದೇ ಪಬ್ ಜೀ ಇಂಡಿಯಾ ಈ ಭಾರಿ ಗೇಮ್ ಗೆ ಸಂಬಂಧಿಸಿದ ಈವೆಂಟ್ ಗಳನ್ನು ನಡೆಸಲು ಸಹ ನಿರ್ಧರಿಸಿದೆಯಂತೆ. ಅಲ್ಲದೇ ಆಟಗಾರರ ಪ್ರವೈಸಿ ಕಾಪಾಡಲು ರೆಗ್ಯುಲರ್ ಅಡಿಟ್, ಸ್ಟೋರೇಜ್ ವೇರಿಫಿಕೇಶನ್ ಹಾಗೂ ಪ್ಲೇಯರ್ ಗಳ ಸ್ನೇಹಿ ಗೇಮ್ ಸಿಸ್ಟಮ್ ರೂಪಿಸಲು ಚಿಂತನೆ ನಡೆದಿದೆಯಂತೆ.

ಎಲ್ಲಾ ಸಿದ್ಧತೆಗಳೊಂದಿಗೆ ಸಧ್ಯದಲ್ಲೇ ಪಬ್ ಜೀ ಭಾರತದ ಮೊಬೈಲ್ ಜಗತ್ತಿಗೆ ಕಾಲಿರಿಸಲಿದ್ದು, ಮತ್ತೆ ಮಕ್ಕಳು,ಯುವಜನತೆ ಮೊಬೈಲ್ ಗೆ ಅಂಟಿಕೊಂಡು ಕೂರುವ ದಿನ ದೂರವಿಲ್ಲ.