ಸೋಮವಾರ, ಏಪ್ರಿಲ್ 28, 2025
HomeBreakingಜೂನ್ ಬಳಿಕ ದೇಶಕ್ಕೆ ಕೊರೋನಾದಿಂದ ಬಿಡುಗಡೆ…! ಪ್ರಧಾನಿ ಮೋದಿ ಗ್ರಹಬಲದ ಮೇಲೆ ಭವಿಷ್ಯ ನುಡಿದ ಜೋರ್ತಿವಿಜ್ಞಾನಿ…!!

ಜೂನ್ ಬಳಿಕ ದೇಶಕ್ಕೆ ಕೊರೋನಾದಿಂದ ಬಿಡುಗಡೆ…! ಪ್ರಧಾನಿ ಮೋದಿ ಗ್ರಹಬಲದ ಮೇಲೆ ಭವಿಷ್ಯ ನುಡಿದ ಜೋರ್ತಿವಿಜ್ಞಾನಿ…!!

- Advertisement -

ಕಳೆದ ಎರಡು ವರ್ಷಗಳಿಂದ ಜನಜೀವನವನ್ನು,ಮಾನವ ಸಂಕುಲವನ್ನೇ ಕಾಡಿದ ಕೊರೋನಾ ವ್ಯಾಧಿ ದೂರವಾಗೋ ಕಾಲ ಸನ್ನಿಹಿತವಾಗಿದೆ. ಜೂನ್ ಬಳಿಕ  ದೇಶಕ್ಕೆ ಕೊರೋನಾ ಸಂಕಷ್ಟ ಹಾಗೂ ಮೋದಿಗೆ ಅಪಪ್ರಚಾರದ ಕಾಟ ಎರಡೂ ದೂರಾಗಲಿದೆ ಎಂದು ಜ್ಯೋರ್ತಿವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ ಭವಿಷ್ಯ ನುಡಿದಿದ್ದಾರೆ.

ಮೋದಿಯವರ ಜಾತಕವನ್ನು ವಿಶ್ಲೇಷಿಸಿ ಜ್ಯೋರ್ತಿವಿಜ್ಞಾನಿ ಪ್ರಕಾಶ್ ಅಮ್ಮಣ್ಣಾಯ್, ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್ ಹಾಕಿದ್ದು, ಅದರಲ್ಲಿ 2019 ಜೂನ್ ರಿಂದ ಮೋದಿಯವರ ಗ್ರಹಗತಿ ಬದಲಾಗಿದ್ದು, ಅವರ ಜಾತಕದ ಗ್ರಹಯೋಗ, ದೇಶಕ್ಕೆ ಕಾಡಿದ ಸಂಕಷ್ಟ ಹಾಗೂ ಮೋದಿಯವರಿಗೆ ಎದುರಾದ ಅಪಪ್ರಚಾರದ ಬಗ್ಗೆಯೂ ಉಲ್ಲೇಖಿಸಿದ್ದಾರೆ.

ಮೋದಿಯವರ ಜಾತಕದ ಪ್ರಕಾರ ಇದೇ ಜೂನ್ ನಂತರ ಮತ್ತೆ  ಮೌನಮುರಿದು ಜನರಿಗೆ ಸಂತೃಪ್ತಿ ನೀಡಲಿದ್ದಾರೆ. 2019 ರ ಜೂನ್ ನಿಂದ ಮೋದಿಯವರ ಜಾತಕದಲ್ಲಿ  ಚಂದ್ರದೆಸೆಯಲ್ಲಿ ಶುಕ್ರಭುಕ್ತಿ ನಡೆಯುತ್ತಿದೆ. ಶುಕ್ರನು ಖರದ್ರೇಕ್ಕಾಣಾಧಿಪತ್ಯ ಅಂದ್ರೆ ಮರಣ ಸಮಾನ ಯೋಗ ಹೊಂದಿದ ಗ್ರಹ.  ಅಲ್ಲದೇ ಶುಕ್ರನ ಚತುರ್ಥದಲ್ಲಿ  ಕುಜನಿದ್ದು ಶುಕ್ರನ ಬಲ ಹರಣ ಮಾಡಿದ್ದ.

https://m.facebook.com/story.php?story_fbid=3000963030188955&id=100008258629158

https://kannada.newsnext.live/oxygen-tragedy-chamarajanagar-dc-ravi-transfer-sathish-new-dc/

ಅಂದ್ರೆ ಲಾಜಿಕ್ ಇಷ್ಟೇ, ಶುಕ್ರ ಅಲಂಕಾರಕಾರಕ. ಕುಜ ಪ್ರತಾಪಿ. ನಮಗೆ ಕಾಣುತ್ತಿರುವ  ದೇಶದ ಪ್ರಗತಿಯ  ಅಲಂಕಾರಕ್ಕೆ  ಒಂದೆಡೆ ಕೊರೋನಾ ಹಾಗೂ  ಇನ್ನೊಂದೆಡೆ ವಿರೋಧಿಗಳ ಅಪಪ್ರಚಾರ ಭಂಗ ತಂದಿದೆ. ಹೀಗಾಗಿ ಪ್ರಧಾನಿ ಮೌನ ವಹಿಸಿದ್ದರು ಎಂದಿರುವ ಪ್ರಕಾಶ್ ಅಮ್ಮಣ್ಣಾಯ ಸಂಪೂರ್ಣ ವಿವರಣೆ ನೀಡಿದ್ದಾರೆ. ಅಲ್ಲದೇ ಇದಕ್ಕಾಗಿಯೇ ತಾವು ಸುಬ್ರಹ್ಮಣ್ಯನ ದರ್ಶನ ಶುಭದಾಯಕ ಎಂದಿದ್ದು ಎಂಬುದನನ್ನು ಉಲ್ಲೇಖಿಸಿದ್ದಾರೆ.

https://kannada.newsnext.live/karnataka-udupi-shiroor-mutt-aniruddhasaralattaya-successor/

2021 ರ ಜೂನ್ ನಂತರ  ದೇಶಧ ಪ್ರಧಾನ ನಾಯಕನಿಗೆ ಬಲ ಬಂದರೆ ದೇಶಕ್ಕೆ ಕ್ಷೇಮವಾಗುವ ಸಾಧ್ಯತೆ ಇದೆ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಈ ಹಿಂದೆಯೂ ಸಾಕಷ್ಟು ಭಾರಿ ಪ್ರಕಾಶ್ ಅಮ್ಮಣ್ಣಾಯ್ ನಿಖರ ಭವಿಷ್ಯ ನುಡಿದು ಗಮನ ಸೆಳೆದಿದ್ದರು. ‘

https://kannada.newsnext.live/decreased-testing-invitation-for-wave-3-in-the-state-dr-giridhara-babu/

ಈಗಲೂ ಆರ್ಭಟಿಸುತ್ತಿರುವ ಕೊರೋನಾ ಜೂನ್ ಬಳಿಕ ಕೊನೆಯಾಗಲಿದೆ ಎನ್ನುವ ಮೂಲಕ ಜನರಿಗೆ ಸಮಾಧಾನ ಹಾಗೂ ನೆಮ್ಮದಿಯ ಸಂಗತಿಯನ್ನು ಹಂಚಿಕೊಂಡಿದ್ದಾರೆ.

RELATED ARTICLES

Most Popular