ಜೀವನದಲ್ಲಿ ಒಂದು ಮದುವೆ ಆಗಬೇಕು ಅಂದ್ರೆ ನೀವೆ ಲಕ್ಷಾಂತರ ರೂಪಾಯಿ ಖರ್ಚು ಮಾಡಬೇಕು. ಆದರೆ ಇಲ್ಲಿ ನೀವು ಮದುವೆ ಯಾಗೋಕೆ ಸಿದ್ಧವಿದ್ರೇ ಹುಡುಗಿ ಕೊಟ್ಟು ಜೊತೆಗೆ ಪ್ರತಿತಿಂಗಳು 3 ಲಕ್ಷ ರೂಪಾಯಿ ಹಣ ಕೊಡ್ತಾರೆ. ಮತ್ಯಾಕೆ ತಡ ನಾನು ಸಿದ್ಧ ಅಂತಿರೋ ಹುಡುಗರೇ ಈ ಸುದ್ದಿಯ ಅಸಲಿಯತ್ತು ನಾವು ಹೇಳ್ತಿವಿ ಕೇಳಿ.

ಐಸ್ಲ್ಯಾಂಡ್ ರಾಷ್ಟ್ರದಲ್ಲಿ ಮಹಿಳೆಯರ ಅನುಪಾತದಲ್ಲಿ ಪುರುಷರ ಸಂಖ್ಯೆ ತೀರಾ ಕಡಿಮೆ ಇದೆ. ಹೀಗಾಗಿ ಇಲ್ಲಿನ ಹೆಣ್ಣುಮಕ್ಕಳನ್ನು ಮದುವೆಯಾಗೋ ಪುರುಷರಿಗೆ ಪ್ರತಿತಿಂಗಳು ಸರ್ಕಾರ 3 ಲಕ್ಷದ 22 ಸಾವಿರ ಸಹಾಯಧನ ನೀಡಲಿದೆ ಅನ್ನೋ ಸೋಷಿಯಲ್ ಮೀಡಿಯಾದಲ್ಲಿ ಬಹುವರ್ಷಗಳಿಂದ ಹರಿದಾಡುತ್ತಿದೆ.

ಹೀಗೆ ಪ್ರತಿತಿಂಗಳು ಸರ್ಕಾರದಿಂದ ಲಕ್ಷಗಟ್ಟಲೇ ಪ್ರೋತ್ಸಾಹಧನ ಪಡೆದುಕೊಳ್ಳೋಕೆ ನೀವು ಮಾಡಬೇಕಾಗಿರೋದು ಇಷ್ಟೇ ಐಸ್ಲ್ಯಾಂಡ್ ಹುಡುಗಿಯನ್ನು ಮದುವೆಯಾಗಿ ಅಲ್ಲಿಯೇ ನೆಲೆಸೋಕೆ ಸಿದ್ಧವಿರ ಬೇಕು. ಬಹುವರ್ಷಗಳಿಂದ ಆಗಾಗ ಇಂತಹದೊಂದು ಸುದ್ದಿ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಲೇ ಇದೆ.

ಆದರೆ ಈ ಸ್ಟೋರಿ ಕೇವಲ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಫೇಕ್ ನ್ಯೂಸ್ ಅಷ್ಟೇ. ನಿಜವಾಗಿಯೂ ಇಂತಹ ಯಾವುದೇ ಯೋಜನೆ ನಮ್ಮಲ್ಲಿಲ್ಲ ಅಂತ ಐಸ್ಲ್ಯಾಂಡ್ ಸರ್ಕಾರ ಈಗಾಗಲೇ ಹಲವು ಸಲ ಸ್ಪಷ್ಟಪಡಿಸಿದೆ.

ಒಂದು ಕಾಲದಲ್ಲಿ ಐಸ್ಲ್ಯಾಂಡ್ ನ ಪುರುಷ ಮತ್ತು ಮಹಿಳೆಯರ ಅನುಪಾತದಲ್ಲಿ ವ್ಯತ್ಯಾಸವಿತ್ತು. 1000 ಕ್ಕೆ 1007 ಪುರುಷರಿದ್ದರು. ಆದರೆ ಈಗ ಈ ಅನುಪಾತದಲ್ಲಿ ಏರಿಕೆಯಾಗಿದ್ದು ಜನಗಣತಿ ಆಧಾರದ ಮೇಲೆ 1000 ಮಹಿಳೆಯರಿಗೆ 1129 ಪುರುಷರಿದ್ದಾರೆ.

ಹೀಗಾಗಿ ತಮ್ಮ ದೇಶದ ಯುವತಿಯರನ್ನು ಮದುವೆಯಾಗೋ ಪುರುಷರಿಗೆ ಪ್ರೋತ್ಸಾಹಧನ ನೀಡುವಂತಹ ಯಾವುದೇ ಯೋಜನೆ ನಮ್ಮಲ್ಲಿಲ್ಲ. ಇಂಥ ಸುಳ್ಳು ಸುದ್ದಿಗಳಿಗೆ ಯಾರೂ ಕಿವಿಗೊಡಬೇಡಿ ಎಂದು ಐಸ್ಲ್ಯಾಂಡ್ ಸರ್ಕಾರ ಎಚ್ಚರಿಸಿದೆ.

ಆದರೂ ಸೋಷಿಯಲ್ ಮೀಡಿಯಾದಲ್ಲಿ ಮಾತ್ರ ಇಲ್ಲಿಯ ಹುಡುಗಿಯರನ್ನು ಮದುವೆಯಾದ್ರೇ ಹೆಂಡ್ತಿ ಜೊತೆ ತಿಂಗಳ 3 ಲಕ್ಷ ಸಂಬಳನೂ ಫ್ರೀ ಎಂಬ ಸುದ್ದಿ ಹರಿದಾಡುತ್ತಲೇ ಇದೆ.