ಭಾನುವಾರ, ಏಪ್ರಿಲ್ 27, 2025
HomeBreakingಸಾವಿಗೆ ಕಾರಣವಾಯ್ತಾ ಆ ಒಂದು ಅವಮಾನ ..! ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಡೆತ್ ನೋಟ್ ನಲ್ಲೇನಿದೆ ?

ಸಾವಿಗೆ ಕಾರಣವಾಯ್ತಾ ಆ ಒಂದು ಅವಮಾನ ..! ಉಪಸಭಾಪತಿ ಎಸ್.ಎಲ್.ಧರ್ಮೇಗೌಡರ ಡೆತ್ ನೋಟ್ ನಲ್ಲೇನಿದೆ ?

- Advertisement -

ಚಿಕ್ಕಮಗಳೂರು : ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರ ಆತ್ಮಹತ್ಯೆ ಪ್ರಕರಣಕ್ಕೆ ರಾಜ್ಯವನ್ನೇ ತಲ್ಲಣಗೊಳಿಸಿದೆ. ವಿಧಾನ ಪರಿಷತ್ ನಲ್ಲಿ ನಡೆದ ಆ ಒಂದು ಅವಮಾನ ಇಂದು ಧರ್ಮೇಗೌಡರನ್ನು ಬಲಿಪಡೆಯಿಯೇ ? ಅನ್ನೋ ಅನುಮಾನ ಎಲ್ಲರನ್ನೂ ಕಾಡುತ್ತಿದ್ದು, ತನ್ನ ಡೆತ್ ನೋಟ್ ನಲ್ಲಿಯೇ ಅದೇ ವಿಚಾರವನ್ನು ಪ್ರಸ್ತಾಪಿಸಿದ್ದಾರೆನ್ನಲಾಗುತ್ತಿದೆ.

ವಿಧಾನ ಪರಿಷತ್ ಅಧಿವೇಶನದಲ್ಲಿ ಸಭಾಪತಿ ಪೀಠದಲ್ಲಿ ಉಪಸಭಾಪತಿ ಎಸ್.ಎಲ್.ಧರ್ಮೇಗೌಡ ಅವರು ಕುಳಿತುಕೊಳ್ಳುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದರು. ಮಾತ್ರವಲ್ಲ ಧರ್ಮೇಗೌಡರನ್ನು ಎಳೆದಾಡಿದ್ದರು. ಇದು ಧರ್ಮೇಗೌಡರಿಗೆ ತೀವ್ರ ಮುಜುಗರವನ್ನುಂಟು ಮಾಡಿತ್ತು. ಇದೇ ನೋವಿನಲ್ಲಿಯೇ ಆ ಒಂದು ಕೆಟ್ಟ ನಿರ್ಧಾರಕ್ಕೆ ಬಂದ್ರಾ ಅನ್ನೋ ಅನುಮಾನ ಕಾಡುತ್ತಿದೆ.
ಮಾಜಿಪ್ರಧಾನಿ ಎಚ್.ಡಿ.ದೇವೇಗೌಡರಿಗೆ ಅತ್ಯಾಪ್ತರಾಗಿದ್ದ ಮಾಜಿ ಶಾಸಕ ದಿವಂಗತ ಎಸ್.ಆರ್.ಲಕ್ಷ್ಮಯ್ಯ ಅವರ ಪುತ್ರರಾಗಿದ್ದ ಉಪಸಭಾಪತಿ ಧರ್ಮೇಗೌಡ ಅವರು, ಜಿ.ಪಂ.ಸದಸ್ಯರಾಗಿ, ಶಾಸಕರಾಗಿ , ಡಿ.ಸಿ.ಸಿ ಬ್ಯಾಂಕ್ ನ ನಿರ್ದೇಶಕ ರಾಗಿ, ವಿಧಾನ ಪರಿಷತ್ ಸದಸ್ಯರಾಗಿ, ವಿಧಾನಪರಿಷತ್ ಉಪ ಸಭಾಪತಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಸಹಕಾರ ಕ್ಷೇತ್ರದಲ್ಲಿಯೂ ಅಮೋಘ ಸಾಧನೆಯನ್ನು ಮಾಡುವ ಮೂಲಕ ಸಹಕಾರಿ ಯತ್ನ ಪ್ರಶಸ್ತಿಗೂ ಭಾಜನರಾಗಿದ್ದರು.

ನಿನ್ನೆ ಸಂಜೆ 4 ಗಂಟೆಯ ಸುಮಾರಿಗೆ ರೈಲ್ವೇ ಟ್ರ್ಯಾಕ್ ಬಳಿಗೆ ಬಂದಿದ್ದ ಧರ್ಮೇಗೌಡರನ್ನು ಸ್ಥಳೀಯರ ಕಂಡು ಮಾತನಾಡಿದ್ದಾರೆ. ಸ್ವಲ್ಪ ಸಮಯದ ನಂತರ ಧರ್ಮೇಗೌಡರು ಅಲ್ಲಿಂದ ವಾಪಾಸಗಿದ್ದರು. ಆದರೆ ಸಂಜೆ 6 ಗಂಟೆಯ ಸುಮಾರಿಗೆ ಮತ್ತೆ. ಸ್ಯಾಂಟ್ರೋ ಕಾರಿನಲ್ಲಿ ತೆರಳಿದ ಧರ್ಮೇಗೌಡ ಕಡೂರಿನ ಗುಣಸಾಗರದ ಬಳಿ ಬಂದ ಶತಾಬ್ದಿ ಎಕ್ಸ್ಪ್ರೆಸ್ ರೈಲಿಗೆ ತಲೆ ಕೊಟ್ಟು ಸಾವನ್ನಪ್ಪಿದ್ದಾರೆ. ಆದರೆ ರಾತ್ರಿಯದರೂ ಕೂಡ ಧರ್ಮೇಗೌಡರು ಬಾರದಿರುವುದರಿಂದಾಗಿ ಆತಂಕಗೊಂಡ ಸಿಬ್ಬಂದಿ ಮೊಬೈಲ್ ಗೆ ಕರೆ ಮಾಡಿದ ಸಂದರ್ಭದಲ್ಲಿ ಸ್ವಿಚ್ ಆಫ್ ಆಗಿತ್ತು. ಇದರಿಂದವಿಚಲಿತರಾಗಿ ಹುಡುಕಾಟ ಆರಂಭಿಸಿದ್ದರು.

ರಾತ್ರಿ ಒಂದು ಗಂಟೆ ಸುಮಾರಿಗೆ ಗುಣಸಾಗರದ ಹತ್ತಿರದ ರೈಲ್ವೇ ಹಳಿಯ ಹತ್ತಿರ ದೇಹ ಮೂರು ತುಂಡಾದ ಸ್ಥಿತಿಯಲ್ಲಿ ಛಿದ್ರ ವಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಪತ್ನಿ ಮಮತ,ಮಗ ಸೋನಾಲ್,ಮಗಳು,ಸಾಲೋ ನಿ,ವಿಧಾನ ಪರಿಷತ್ ಸದಸ್ಯ ಎಸ್.ಎಲ್ ಭೋಜೇಗೌಡ ಸೇರಿದಂತೆ ಅಪರ ಬಂಧು ಬಳಗವನ್ನು ಬಿಟ್ಟು ಅಗಲಿದ್ದಾರೆ. ಧರ್ಮೇಗೌಡ ಅವರ ಮೃತ ದೇಹದ ಮರಣೋತ್ತರ ಪರೀಕ್ಷೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ನಡೆಯಲಿದೆ. ನಂತರ ಹುಟ್ಟೂರಾಗಿರುವ ಸಖರಾಯಪಟ್ಟಣದಲ್ಲಿ ಅಂತ್ಯಕ್ರೀಯೆ ನಡೆಯಲಿದೆ ಎನ್ನಲಾಗುತ್ತಿದೆ. ಉಪಸಭಾಪತಿ ಧರ್ಮೇಗೌಡ ಅವರ ನಿಧನಕ್ಕೆ ನಾಡಿನ ಗಣ್ಯರು ಕಂಬನಿ ಮಿಡಿದಿದ್ದಾರೆ.

ಧರ್ಮೇಗೌಡರನ್ನು ಘಾಸಿಗೊಳಿಸಿತ್ತಾ ಪರಿಷತ್ ಗಲಾಟೆ…!
ಇತ್ತೀಚೆಗೆ ವಿಧಾನ ಪರಿಷತ್ ನಲ್ಲಿ ಜರುಗಿದ ಘಟನೆಯಿಂದ ಖಿನ್ನರಾಗಿದ್ದರೆಂದು ಹೇಳಲಾಗುತ್ತಿದೆ. ಜೊತೆಗೆ ಚಿಕ್ಕಮಗಳೂರು ಡಿ.ಸಿ.ಸಿ ಬ್ಯಾಂಕ್ ನ ಚುನಾವಣೆಯಲ್ಲಿನ ಸೋಲು ಸಹ ಅವರನ್ನು ಕಂಗೆಡಿಸಿತ್ತು. ಚಿಕ್ಕಮಗಳೂರು ಜಿಲ್ಲೆಯಲ್ಲಿ ನಡೆದ ಹಲವು ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದ ಧರ್ಮೇಗೌಡರು ಇದೇ ವಿಚಾರನ್ನೂ ಉಲ್ಲೇಖ ಮಾಡಿದ್ದರು.

ಡೆತ್ ನೋಟ್ ನಲ್ಲೇನಿದೆ ..?
ಚಿಕ್ಕಮಗಳೂರು ನಗರದಲ್ಲಿ ನಡೆದಿದ್ದ ಯುವಜನೋತ್ಸವ ಕಾರ್ಯಕ್ರಮದಲ್ಲಿ ಲವಲವಿಕೆಯಿಂದ ಪಾಲ್ಗೊಂಡಿದ್ದ ಧರ್ಮೇಗೌಡರು, ಸಂಜೆ ನಾಲ್ಕು ಗಂಟೆಯ ನಂತರದಲ್ಲಿ ಮನನೊಂದಂತೆ ಕಂಡುಬಂದಿದ್ದರು. ಕಾರ್ಯಕ್ರಮದ ನಂತರದಲ್ಲಿ ಧರ್ಮೆಗೌಡರು ಸಖರಾಯಪಟ್ಟಣದ ತಮ್ಮ ತೋಟದ ಮನೆಗೆ ತೆರಳಿ ಅಲ್ಲಿಂದ ಬಾಣವಾರಕ್ಕೆ ತೆರಳಿ ಡೆತ್ ನೋಟನ್ನು ಸಿದ್ದಪಡಿಸಿಕೊಂಡಿದ್ದರು. ಡೆತ್ ನೋಟ್ ನಲ್ಲಿ ವಿಧಾನ ಪರಿಷತ್ ನಲ್ಲಿ ನಡೆದ ಘಟನೆಯನ್ನು ಉಲ್ಲೇಖಿಸಿದ್ದಾರೆ. ಅಲ್ಲದೇ ಅರ್ಧಕ್ಕೆ ನಿಂತಿರುವ ಮನೆಯನ್ನು ಪೂರ್ಣಗೊಳಿಸುವಂತೆ. ಅದಕ್ಕೆ ಬೇಕಾದ ಹಣಕಾಸು ವಿಚಾರಗಳ ಕುರಿತು ಮಾಹಿತಿ ನೀಡಿ ತಮ್ಮ ಈ ಕೃತ್ಯವನ್ನು ಕ್ಷಮಿಸುವಂತೆ ಪತ್ನಿ ಹಾಗೂ ಮಕ್ಕಳಲ್ಲಿ ಕೋರಿದ್ದಾರೆ.

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular