ಅದೃಷ್ಟ ಕೈಕೊಟ್ರೆ ನೀವು ಮಾಡೋ ಪ್ರಯತ್ನವೇ ನಿಮ್ಮ ಜೀವಕ್ಕೆ ಮಾರಕ ಆಗಬಹುದು. ಈ ಮಾತು ಬ್ರೆಜಿಲ್ ನ ಖೈದಿಯೊಬ್ಬನ ಪಾಲಿಗೆ ಅಕ್ಷರಷಃ ನಿಜವಾಗಿದೆ. ಕಳ್ಳತನದ ಆರೋಪದ ಮೇರೆಗೆ ಜೈಲು ಸೇರಿದ್ದ ಕಳ್ಳ ಜೈಲಿನಿಂದ ಪರಾರಿಯಾಗಲು ಯತ್ನಿಸಿ ಜೈಲಿನ ಗೋಡೆಗೆ ಸಿಲುಕಿಕೊಂಡು ಬರೋಬ್ಬರಿ ಮೂರು ಗಂಟೆ ನೇತಾಡಿ ಪ್ರಾಣ ಉಳಿಸಿ ಸಾರ್ ಅಂತಾ ಪ್ರಾಣಭೀಕ್ಷೆ ಕೇಳಿದ್ದಾನೆ.

ಬ್ರೆಜಿಲ್ ನ ಬಾಲ್ನೇರಿಯಾ ನಗರದಲ್ಲಿ ಕಳ್ಳತನ ಮಾಡಿದ್ದ ಆರೋಪದ ಮೇರೆಗೆ 18 ವಯಸ್ಸಿನ ಯುವಕನೊರ್ವನನ್ನು ಜೈಲಿಗೆ ಅಟ್ಟಲಾಗಿತ್ತು. ಗುರುವಾರ ರಾತ್ರಿ ಪೊಲೀಸರು ಜೈಲಿಗೆ ಹಾಕ್ತಿದ್ದಂತೆ ಆಕ್ಟಿವ್ ಆದ ಯುವಕ ಜೈಲಿನಿಂದ ತಪ್ಪಿಸಿಕೊಳ್ಳೋ ಪ್ಲ್ಯಾನ್ ಮಾಡಿದ್ದ.
ಅದಕ್ಕಾಗಿ ಜೈಲಿನ ಗೋಡೆಯನ್ನೇ ಆಶ್ರಯಿಸಿದ ಕಳ್ಳ ಗೋಡೆಯಲ್ಲಿದ್ದ ಚಿಕ್ಕ ರಂಧ್ರದ ಮೂಲಕ ಜೈಲಿನಿಂದ ಪಾರಾಗಲು ಸರ್ಕಸ್ ಮಾಡಿದ್ದಾನೆ. ಆದರೆ ಅರ್ಧ ದೇಹ ಹೋಗ್ತಿದ್ದಂತೆ ಮುಂದಕ್ಕೆ ಹೋಗಲಾಗದೇ ಹಿಂದಕ್ಕೂ ಬರಲಾಗದೇ ಒದ್ದಾಡಿದ್ದಾನೆ.
ಇನ್ನೇನು ಜೀವ ಗೋಡೆಯಲ್ಲೇ ಹೋಗುತ್ತೆ ಅನ್ನೋದು ಗೊತ್ತಾಗ್ತಿದ್ದಂತೆ ಆ ಯುವಕ ಪೊಲೀಸರನ್ನೇ ಸಹಾಯಕ್ಕೆ ಕೂಗಿ ಕರೆದಿದ್ದು, ಪ್ರಾಣ ಭಿಕ್ಷೆ ನೀಡಿ ಸಾರ್ ಎಂದು ಗೋಗೆರದಿದ್ದಾನೆ. ಕಳ್ಳನ ಎಸ್ಕೇಫ್ ಸರ್ಕಸ್ ಕಂಡು ಕಂಗಾಲಾದ ಪೊಲೀಸರು ಅಗ್ನಿಶಾಮಕ ದಳದ ಸಹಾಯದಿಂದ ಸತತ 3 ಗಂಟೆ ಕಾರ್ಯಾಚರಣೆ ನಡೆಸಿ ಆ ಕಳ್ಳತನದ ಆರೋಪಿಯ ಜೀವ ರಕ್ಷಿಸಿದ್ದಾರೆ.
ಅಷ್ಟೇ ಅಲ್ಲ ರಂಧ್ರದಲ್ಲೇ ಪಾರಾಗೋಕೆ ಯತ್ನಿಸಿದ ಈ ಕಳ್ಳ ಇನ್ನೆಂಥ ಕ್ರಿಮಿನಲ್ ಇರಬಹುದು ಅನ್ನೋದನ್ನು ಮನಗಂಡು ಆತನನ್ನು ಇನ್ನಷ್ಟು ಭದ್ರತೆ ಹೆಚ್ಚಿಸಿ ಬೇರೆ ಜೈಲಿಗೆ ರವಾನಿಸಿದ್ದಾರೆ.