ತಮಿಳುನಾಡಿನ ಪಾಲಿಗೆ ಅಮ್ಮನೇ ಆಗಿದ್ದ ತಲೈವಿ ಜಯಲಲಿತಾ ಜೀವನಕತೆ ಆಧಾರಿತ ಸಿನಿಮಾ ತಲೈವಿ ರಿಲೀಸ್ ಗೆ ಕೊರೋನಾ ಎರಡನೆ ಅಲೆ ಅಡ್ಡಿಯಾಗಿದೆ. ಏಪ್ರಿಲ್ 23 ರಂದು ಚಿತ್ರ ರಿಲೀಸ್ ಗೆ ಸಿದ್ಧವಾಗಿ ಟ್ರೇಲರ್ ಲಾಂಚ್ ಮಾಡಿದ್ದ ಚಿತ್ರತಂಡ ಸಿನಿಮಾ ರಿಲೀಸ್ ಮುಂದೂಡಿದೆ.

ತಮಿಳುನಾಡಿನ ಮಾಜಿ ಮುಖ್ಯಮಂತ್ರಿ ಹಾಗೂ ನಟಿ ಜಯಲಲಿತಾ ಜೀವನಾಧಾರಿತ ಸಿನಿಮಾದಲ್ಲಿ ಬಾಲಿವುಡ್ ನಟಿ ಕಂಗನಾ ರನಾವುತ್ ಜಯಲಲಿತಾ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈಗಾಗಲೇ ಚಿತ್ರದ ಟ್ರೇಲರ್ ಲಾಂಚ್ ಆಗಿದ್ದು, ಜನರು ಮೆಚ್ಚಿದ್ದಾರೆ. ಅಷ್ಟೇ ಅಲ್ಲ ಸಿನಿಮಾ ರಿಲೀಸ್ ಗೂ ಕಾದಿದ್ದಾರೆ.

ಏಪ್ರಿಲ್ 23 ರಂದು ತಮಿಳು,ತೆಲುಗು ಹಾಗೂ ಹಿಂದಿಯಲ್ಲಿ ಏಕಕಾಲಕ್ಕೆ ರಿಲೀಸ್ ಮಾಡಲು ಸಿದ್ಧತೆ ನಡೆದಿತ್ತು. ಆದರೆ ಕೊರೋನಾ ಎರಡನೇ ಅಲೆಯ ಹಿನ್ನೆಲೆಯಲ್ಲಿ ಜನರು ಥಿಯೇಟರ್ ಗಳಿಗೆ ಬರೋದು ಅನುಮಾನ ಎಂಬಂತಾಗಿರೋದರಿಂದ ತಲೈವಿ ಚಿತ್ರ ಬಿಡುಗಡೆಯನ್ನು ಮುಂದೂಡಿರುವುದಾಗಿ ಸಿನಿಮಾದ ನಿರ್ಮಾಣ ಸಂಸ್ಥೆ ಜೀ ಸ್ಟುಡಿಯೋಸ್ ಟ್ವೀಟ್ ಮಾಡಿದೆ.
ಚಿತ್ರಬಿಡುಗಡೆಗೆ ಸಿದ್ಧವಾಗಿದೆ. ಆದರೆ ನಮಗೆ ಜನರ ಸುರಕ್ಷತೆ ಮುಖ್ಯ. ಹೀಗಾಗಿ ಜನರ ಸುರಕ್ಷತೆಯ ದೃಷ್ಟಿಯಿಂದ ಸಿನಿಮಾ ರಿಲೀಸ್ ಮುಂದೂಡಲಾಗಿದೆ ಎಂದು ಸಿನಿಮಾ ತಂಡ ಹೇಳಿದೆ.

ವಿಜಯ್ ನಿರ್ದೇಶನದ ತಲೈವಿ ಸಿನಿಮಾವನ್ನು ಕೆ.ವಿ.ವಿಜಯೇಂದ್ರ್ ಪ್ರಸಾದ್ ರಚಿಸಿದ್ದು, ಅರವಿಂದ ಸ್ವಾಮಿ, ಮಧುಪ್ರಕಾಶ್ ರಾಜ್, ಜಿಶ್ಯುಸೇನ್ ಗುಪ್ತಾ ಸೇರಿದಂತೆ ಹಲವು ಕಲಾವಿದರು ನಟಿಸಿದ್ದಾರೆ. ಸಿನಿಮಾ ಈ ಚಿತ್ರಕ್ಕಾಗಿ ಬರೋಬ್ಬರಿ 20 ಕೆಜಿ ತೂಕ ಏರಿಸಿಕೊಂಡು ಗೆಟಪ್ ಬದಲಾಯಿಸಿಕೊಂಡಿದ್ದಾಗಿ ಕೆಲ ದಿನಗಳ ಹಿಂದೆಯಷ್ಟೇ ಹೇಳಿಕೊಂಡಿದ್ದರು.