ಸೋಮವಾರ, ಏಪ್ರಿಲ್ 28, 2025
HomeBreakingBigg Boss:ಬಿಗ್ ಬಾಸ್ ಪ್ರಿಯರಿಗೆ ಸಿಹಿಸುದ್ದಿ….! ಮತ್ತೆ ಶುರುವಾಗಲಿ ದೊಡ್ಮನೆ ಆಟ….!!

Bigg Boss:ಬಿಗ್ ಬಾಸ್ ಪ್ರಿಯರಿಗೆ ಸಿಹಿಸುದ್ದಿ….! ಮತ್ತೆ ಶುರುವಾಗಲಿ ದೊಡ್ಮನೆ ಆಟ….!!

- Advertisement -

ಕೊರೋನಾ ಎರಡನೇ ಅಲೆಯಿಂದ ಸ್ಥಗಿತಗೊಂಡಿದ್ದ ಕನ್ನಡದ  ಅತಿದೊಡ್ಡ ರಿಯಾಲಿಟಿ ಶೋ ಬಿಗ್ ಬಾಸ್ ಪ್ರೇಕ್ಷಕರಿಗೆ ಸಿಹಿಸುದ್ದಿ ನೀಡಿದೆ. ಮತ್ತೆ ಒಂಟಿ ಮನೆಯಲ್ಲಿ ತುಂಟಾಟಗಳು ಶುರುವಾಗಲಿದ್ದು, 12 ಸ್ಪರ್ಧಿಗಳ ಜೊತೆ ಮತ್ತೆ ರಿಯಾಲಿಟಿ ಶೋ ಮುಂದುವರೆಸಲು ವಾಹಿನಿ ನಿರ್ಧರಿಸಿದೆ.

ಕೊರೋನಾ ಎರಡನೇ ಅಲೆಯಿಂದ  ಲಾಕ್ ಡೌನ್ ಜಾರಿಯಾಗುತ್ತಿದ್ದಂತೆ  ಮನೋರಂಜನಾ ಕ್ಷೇತ್ರದ ಎಲ್ಲ ಚಟುವಟಿಕೆಗಳು ಸ್ಥಗತಿಗೊಂಡಿದ್ದವು. ಹೀಗಾಗಿ ಬಿಗ್ ಬಾಸ್ ಶೋವನ್ನು ಅರ್ಧದಲ್ಲಿಯೇ ನಿಲ್ಲಿಸಿ ಎಲ್ಲ ಸ್ಪರ್ಧಿಗಳನ್ನು ಮನೆಗೆ ಕಳುಹಿಸಲಾಗಿತ್ತು.

ಇದೀಗ ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಕೊರೋನಾ ಪಾಸಿಟಿವಿಟಿ ರೇಟ್ ಕುಗ್ಗಿರೋದರಿಂದ ಸರ್ಕಾರ ನಿಧಾನಕ್ಕೆ ಅನ್ ಲಾಕ್ ಪ್ರಕ್ರಿಯೆ ಆರಂಭಿಸುತ್ತಿದೆ. ಹೀಗಾಗಿ ಮತ್ತೆ ದೊಡ್ಮನೆ ಆಟವನ್ನು ಬಿಟ್ಟಲ್ಲಿಂದಲೇ ಆರಂಭಿಸಲು ಕಲರ್ಸ್ ಕನ್ನಡ ವಾಹಿನಿ ನಿರ್ಧರಿಸಿದೆ.

https://m.facebook.com/story.php?story_fbid=10224498550552474&id=1268853856

ಈ ಬಗ್ಗೆ ವಾಹಿನಿ ಮುಖ್ಯಸ್ಥ ಪರಮೇಶ್ವರ್ ಗುಂಡ್ಕಲ್ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ನೀಡಿದ್ದು, ಊರು ಸೇರಿದಾಗಲೇ ದಾರಿ ಮುಗಿಯುವುದು. ಮನೆ ಸೇರಿದಾಗಲೇ ಹಾದಿಯಲ್ಲಿ ಕಷ್ಟಪಟ್ಟಿದ್ದು ಸಾರ್ಥಕ ಅನ್ನಿಸೋದು. ಅರ್ಧದಲ್ಲಿಯೇ ನಿಲ್ಲಿಸಿದ್ದ  ಪ್ರಯಾಣವನ್ನು ಈಗ ಪುನಃ  ಅದೇ 12 ಜನರೊಂದಿಗೆ  ಶುರು ಮಾಡುವ ಸಮಯ ಎಂದಿದ್ದಾರೆ.

ಅಲ್ಲದೇ  ಇಷ್ಟು ವರ್ಷಗಳ ಕಾಲ  ಜಗತ್ತಿನ ಬೇರೆ ಬೇರೆ ದೇಶಗಳಲ್ಲಿ ನಡೆದ  ಯಾವ ಬಿಗ್ ಬಾಸ್ ಶೋದಲ್ಲೂ  ಎರಡನೇ ಇನ್ನಿಂಗ್ಸ್ ಆಡುವ  ಅವಕಾಶ ಯಾರಿಗೂ ಸಿಕ್ಕಿಲ್ಲ.  ಕನ್ನಡದ 12 ಕಂಟೆಸ್ಟೆಂಟ್ ಗಳಿಗೆ ಅಂತಹದೊಂದು ಅವಕಾಶ ಸಿಕ್ಕಿದೆ ಎಂಬ ವಿವರಣೆ ನೀಡಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಸಧ್ಯದಲ್ಲೇ ಬಿಗ್ ಬಾಸ್ ಶೋ ಟೆಲಿಕಾಸ್ಟ್ ಆರಂಭಗೊಳ್ಳಲಿದ್ದು, ಇದಕ್ಕಾಗಿ ಬಿಗ್ ಬಾಸ್ ಶೋದಲ್ಲಿ ದೊಡ್ಮನೆ ಸೇರೋ 12 ಕಂಟೆಸ್ಟೆಂಟ್ ಗಳನ್ನು ಈಗಾಗಲೇ ಕ್ವಾರಂಟೈನ್ ಗೆ ಕಳುಹಿಸಲಾಗಿದೆ ಎನ್ನಲಾಗುತ್ತಿದೆ.

ಕಳೆದ ಭಾರಿ ಬಿಗ್ ಬಾಸ್ ಶೋ ಸ್ಥಗಿತಗೊಳ್ಳೋ ಕೆಲವು ಕೆಲವು ವಾರಗಳ ಮೊದಲು ನಟ ಸುದೀಪ್ ಕೊರೋನಾಕ್ಕೆ ತುತ್ತಾಗಿದ್ದು, ಮನೆಯಲ್ಲೇ ಕ್ವಾರಂಟೈನ್ ಆಗಿ ಚೇತರಿಸಿಕೊಂಡಿದ್ದರು. ಹೀಗಾಗಿ ಎರಡು ವಾರಗಳ ಕಾಲ ಶೋ ನಿರೂಪಣೆ ಕೂಡ ಮಾಡಿರಲಿಲ್ಲ.

ಎಲ್ಲರೂ ವಿಜೇತರು ಎಂಬ ಮಾತಿನೊಂದಿಗೆ ಅರ್ಧಕ್ಕೆ ನಿಂತಿದ್ದ ಬಿಗ್ ಬಾಸ್ ಇದೀಗ ಮತ್ತೆ ಆರಂಭವಾಗುತ್ತಿದ್ದು, ಬಿಗ್ ಬಾಸ್ ಕನ್ನಡ 8 ನೇ ಆವೃತ್ತಿಯನ್ನು ಗೆಲ್ಲುವರ್ಯಾರು ಎಂಬ  ಕುತೂಹಲ ಮೂಡಿದೆ.

RELATED ARTICLES

Most Popular