ಕನ್ನಡ ಕಿರುತೆರೆ ಲೋಕದಲ್ಲಿ ಸದ್ಯ ಮನೆಮಾತಾಗಿರು ಧಾರಾವಾಹಿ ಜೊತೆ ಜೊತೆಯಲಿ. ವಿಭಿನ್ನ ಕಥಾಹಂದರ ಹಾಗೂ ಕಲಾವಿದರ ಕಾರಣಕ್ಕೆ ಫೇಮಸ್ ಆಗಿದ್ಧ ಧಾರಾವಾಹಿಯಲ್ಲಿ ಕೊಂಚ ಅತಿ ಎನ್ನಿಸುವ ದೃಶ್ಯಗಳನ್ನು ಬಿತ್ತರಿಸಲಾಗಿರೋದು ಇದೀಗ ಪ್ರೇಕ್ಷಕ ವರ್ಗದ ಇರಿಸುಮುರಿಸಿಗೆ ಕಾರಣವಾಗಿದೆ.

ಅನು ಮತ್ತು ಆರ್ಯವರ್ಧನ್ ಲವ್ ಸ್ಟೋರಿಯ ಸುತ್ತ ಜೊತೆ ಜೊತೆಯಲಿ ಧಾರಾವಾಹಿಯ ಎಪಿಸೋಡಗಳು ಸಾಗುತ್ತಿದ್ದು, ಸಧ್ಯ 200 ಎಪಿಸೋಡ್ ಮುಗಿಸಿದ ಧಾರಾವಾಹಿಗೆ ಜನರು ಮೆಚ್ಚಿಕೊಂಡಿದ್ದಾರೆ.

ಆದರೆ ಕಳೆದ ವಾರ ಅನು ಆರ್ಯ ರೋಮ್ಯಾನ್ಸ್ ಎಪಿಸೋಡ್ ಗಳ ಪ್ರಸಾರದ ವೇಳೆ ಅನು ಪಾತ್ರಧಾರಿ ಮೇಘಾ ಶೆಟ್ಟಿ ಬಾತ್ ರೂಂನಲ್ಲಿ ಟವೆಲ್ ಸುತ್ತಿಕೊಂಡ ಅವತಾರದಲ್ಲಿ ಕಾಣಿಸಿಕೊಂಡಿದ್ದು, ಪ್ರೇಕ್ಷಕರ ಇರಿಸುಮುರಿಸಿಗೆ ಕಾರಣವಾಗಿದೆ.

ಶಾರದಾದೇವಿ ಫಾರ್ಮ ಹೌಸ್ ನಲ್ಲಿ ವಿಹರಿಸುತ್ತಿರೋ ಅನು ಆರ್ಯನ ನಡುವೆ ನಡೆಯೋ ಪ್ರೇಮ ಸಲ್ಲಾಪದ ವೇಳೆ ಇದೊಂದು ದೃಶ್ಯ ತುರುಕಲಾಗಿದ್ದು, ಪ್ರೇಕ್ಷಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಟೀ ಮಾಡಲು ಹೋದ ಆರ್ಯ ಅನು ಬಟ್ಟೆ ಮೇಲೆ ಚಾ ಚೆಲ್ಲಿದ್ದು, ಇದನ್ನು ಬದಲಾಯಿಸಲು ಹೋದ ಮೇಘಾ ಟವೆಲ್ ಸುತ್ತಿಕೊಂಡು ಕ್ಯಾಮರಾಗೆ ಪೋಸ್ ನೀಡುವಂತೆ ದೃಶ್ಯ ಬಳಸಲಾಗಿದೆ.

ಸಿನಿಮಾದಲ್ಲಿರುವಂತೆ ಸೀರಿಯಲ್ ನಲ್ಲೂ ಇಂತಹ ಅಶ್ಲೀಲ ದೃಶ್ಯಗಳನ್ನು ಧಾರಾವಾಹಿಗೂ ತರುವ ಅಗತ್ಯವಿತ್ತೆ. ಕೇವಲ ಟವೆಲ್ ಸುತ್ತಿಕೊಂಡು ಪೋಸು ನೀಡಿದ ಮೇಘಾ ಶೆಟ್ಟಿ ಇದು ಸರಿನಾ ಎಂದೆಲ್ಲ ಸೋಷಿಯಲ್ ಮೀಡಿಯಾದಲ್ಲಿ ಜನ ಕಮೆಂಟ್ ಮಾಡ್ತಿದ್ದಾರೆ.

ಧಾರಾವಾಹಿ ಹೆಣ್ಣುಮಕ್ಕಳು ಮನೆಯಲ್ಲಿ ಕುಳಿತು ನೋಡೋವಂತಹ ಕಾರ್ಯಕ್ರಮ ಅದರಲ್ಲಿ ಇಂತಹ ದೃಶ್ಯಗಳು ಎಷ್ಟು ಸರಿ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಅನು ಸಿರಿಮನೆ ಏನಮ್ಮಾ ನಿನ್ನ ಅವತಾರ ಅಂತ ಹಲವರು ಮೇಘಾ ಕಾಲೆಳೆದಿದ್ದಾರೆ.