ಸಾಲು ಸಾಲು ಸೋಲಿನ‌ ನೋವು…! ಜೆಡಿಎಸ್ ನಿಂದ ದೂರ ಸರಿಯಲು ಕುಮಾರಸ್ವಾಮಿ ನಿರ್ಧಾರ…?!

ಬೆಂಗಳೂರು: ಕಳೆದ ವಿಧಾನಸಭೆ ಚುನಾವಣೆ ಬಳಿಕ ಪಕ್ಷಕ್ಕೆ ಖುಲಾಯಿಸಿದ ಅದೃಷ್ಟದಿಂದ‌ ಜೆಡಿಎಸ್ ಮತ್ತೊಮ್ಮೆ ಮೈತ್ರಿಯ ನೆರಳಿನಲ್ಲಿ ಅಧಿಕಾರ‌ ಅನುಭವಿಸಿತು. ಆದರೆ ಈ ಅದೃಷ್ಟದಾಟ ಕೊಂಚ‌ ಸಮಯಕ್ಕೆ ಮುಗಿದು ದುರಾದೃಷ್ಟ ಬೆನ್ನತ್ತಿದಂತಾಗಿ‌ಪಕ್ಷ ಸಾಲು -ಸಾಲು ಸೋಲುಂಡು ಕಂಗಲಾಗಿದೆ. ಹೀಗಾಗಿ ಪಕ್ಷದ ಜವಾಬ್ದಾರಿಯಿಂದ ದೂರ ಉಳಿಯಲು ಕುಮಾರಸ್ವಾಮಿ ನಿರ್ಧರಿಸಿದ್ದಾರೆ.

ಕುಮಾರಸ್ವಾಮಿಯವರೇ ಜೆಡಿಎಸ್ ತೊರೆದರೇ ಪಕ್ಷದ ಭವಿಷ್ಯವೇನು ಎಂದು ಯೋಚಿಸುತ್ತಿದ್ದೀರಾ. ಜೆಡಿಎಸ್ ಬ ಹುದ್ದೆ ತೊರೆಯುವ‌ ಚಿಂತನೆಯಲ್ಲಿರೋದು ಎಚ್.ಡಿ.ಕುಮಾರಸ್ವಾಮಿಯವರಲ್ಲ. ಜೆಡಿಎಸ್‌ ರಾಜ್ಯಾಧ್ಯಕ್ಷ ಹಾಗೂ ಶಾಸಕ ಎಚ್.ಕೆ.ಕುಮಾರ ಸ್ವಾಮಿ.

ಸಕಲೇಶಪುರ ದ‌ ಶಾಸಕರು ಹಾಗೂ ‌ಜೆಡಿಎಸ್ ರಾಜ್ಯಾಧ್ಯಕ್ಷ ರು ಆಗಿರುವ ಎಚ್.ಕೆ.ಕುಮಾರಸ್ವಾಮಿ ಉಪಚುನಾವಣೆ ಸೋಲಿನ ಹೊಣೆ ಹೊತ್ತು ತಮ್ಮ ರಾಜ್ಯಾಧ್ಯಕ್ಷ ‌ಪದವಿಗೆ ರಾಜೀನಾಮೆ‌ ನೀಡಲು ಸಿದ್ಧ ವಾಗಿದ್ದಾರೆ ಎನ್ನಲಾಗಿದೆ.

ರಾಜ್ಯಾಧ್ಯಕ್ಷ ಸ್ಥಾನದ ಹೊಣೆಗಾರಿಕೆ‌ ಹಾಗೂ ಜವಾಬ್ದಾರಿ ‌ನಿರ್ವಹಿಸುವಲ್ಲಿ‌ ನಾನು ವಿಫಲನಾಗಿದ್ದೇ ನೆ. ಉಪಚುನಾವಣೆಯಲ್ಲಿ ಜೆಡಿಎಸ್ ತನ್ನದೇ ಆಗಿದ್ದ ಶಿರಾ ಕ್ಷೇತ್ರವನ್ನು ಕಳೆದುಕೊಂಡಿದೆ.

ಗ್ರಾಮ ಪಂಚಾಯತ್ ಹಾಗೂ ಮಸ್ಕಿ ಉಪಚುನಾವಣೆ ಗಳು ಎದುರಿನಲ್ಲಿವೆ. ಹೀಗಾಗಿ ನನ್ನ ಸ್ಥಾನಕ್ಕೆ ನಾನು ರಾಜೀನಾಮೆ ನೀಡುತ್ತೇನೆ. ತಳಮಟ್ಟದಿಂದ ಪಕ್ಷ‌ ಸಂಘಟಿಸುವ ಕೆಲಸದಲ್ಲಿ ತೊಡಗಿಕೊಳ್ಳುತ್ತೇನೆ ಎಂದು ಎಚ್.ಕೆ.ಕುಮಾರಸ್ವಾಮಿ ವರಿಷ್ಟರಿಗೆ‌ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಸಧ್ಯ ಸಕಲೇಶಪುರ ಶಾಸಕರಾಗಿರುವ ಎಚ್.ಕೆ.ಕುಮಾರಸ್ವಾಮಿ ಎಚ್.ವಿಶ್ವನಾಥ ರಾಜೀನಾಮೆಯಿಂದ ತೆರವಾಗಿದ್ದ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವರಿಷ್ಟರಿಂದ ನೇಮಿಸಲ್ಪಟ್ಟಿದ್ದರು.ಆದರೇ ಈಗ ಕುಮಾರಸ್ವಾಮಿ ಸ್ಥಾನ ತೊರೆಯಲು ಮುಂದಾಗಿದ್ದಾರೆ. ೨೦೧೮ ವಿಧಾನಸಭೆ ಚುನಾವಣೆಯಲ್ಲಿ ಕೆಲವೇ ಸ್ಥಾನ ಪಡೆದಿದ್ದ ಜೆಡಿಎಸ್ ಕಾಂಗ್ರೆಸ್ ಜೊತೆಗೂಡಿ ಸರ್ಕಾರ ರಚನೆ ಮಾಡಿತ್ತು. ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದರು.

ಆ ಬಳಿಕ ಎಚ್ ಡಿಕೆ ಜೆಡಿಎಸ್ ರಾಜ್ಯಾಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ಈ ವೇಳೆ ಜೆಡಿಎಸ್ ನ ಹಿರಿಯ ಶಾಸಕ ಎಚ್.ವಿಶ್ವನಾಥ್ ಗೆ ಪಟ್ಟ ಕಟ್ಟಲಾಗಿತ್ತು.ಆದರೆ ಸಚಿವ ಸ್ಥಾನಕ್ಕೆ ಮುನಿಸಿಕೊಂಡ ಎಚ್ ವಿಶ್ವನಾಥ್‌ ರಾಜ್ಯಾಧ್ಯಕ್ಷ ಸ್ಥಾನ ಹಾಗೂ ಪಕ್ಷವನ್ನು ತೊರೆದಿದ್ದರು. ಆ ಬಳಿಕ ರಾಜ್ಯಾಧ್ಯಕ್ಷ ಸ್ಥಾನ ‌ಎಚ್.ಕೆ.ಕುಮಾರಸ್ವಾಮಿ ಪಾಲಾಗಿತ್ತು.

ಈ ಕುಮಾರಸ್ವಾಮಿ ರಾಜೀನಾಮೆಯಿಂದ ಮತ್ತೆ ಜೆಡಿಎಸ್ ರಾಜ್ಯಾಧ್ಯಕ್ಷ ರ ನೇಮಕ ಮಾಡಬೇಕಾದ ಸ್ಥಿತಿ ಎದುರಾಗಿದ್ದು, ಕಾರ್ಯಕರ್ತರ ಒತ್ತಾಯದ ನೆಪ ಇಟ್ಟುಕೊಂಡು ಮತ್ತೆ‌ ಕುಮಾರಸ್ವಾಮಿಯವರೇ ಪಕ್ಷದ ರಾಜ್ಯಾಧ್ಯಕ್ಷರ‌ ಗದ್ದುಗೆ ಏರೋ ‌ಲಕ್ಷಣವಿದೆ

Comments are closed.