ಬೆಂಗಳೂರು: ಈಗಾಗಲೇ ಸಾಕಷ್ಟು ಭಾರಿ ಸುದ್ದಿಯಾದ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕಾಂಗ್ರೆಸ್ ಸೇರ್ಪಡೆ ವಿಚಾರ ನತ್ರೆ ಮತ್ತೆ ಜೀವ ಪಡೆದುಕೊಂಡಿದ್ದು,ನಿನ್ನೆ ತಡರಾತ್ರಿ ಶರತ್ ಕೆಪಿಸಿಸಿ ಅಧ್ಯಕ್ಷರ ಮನೆಗೆ ತೆರಳಿ ಭೇಟಿಮಾಡಿದ್ದಾರೆ.

ನಿನ್ನೆ ರಾತ್ರಿ ಹೊಸಕೋಟೆ ಪಕ್ಷೇತರ ಶಾಸಕ ಶರತ್ ಬಚ್ಚೇಗೌಡ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸಕ್ಕೆ ಭೇಟಿ ನೀಡಿದ್ದು ಅರ್ಧಗಂಟೆಗೂ ಅಧಿಕಕಾಲ ಮಹತ್ವದ ಮಾತು ಕತೆ ನಡೆಸಿದ್ದಾರೆ .ಈ ಭೇಟಿ ರಾಜಕೀಯ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದ್ದು ಶರತ್ ಕಾಂಗ್ರೆಸ್ ಸೇರ್ಪಡೆ ವಿಚಾರ ಮತ್ತೆ ಮುನ್ನಲೆಗೆ ಬಂದಿದೆ.

ಹೊಸಕೋಟೆ ಭಾಗದಲ್ಲಿ ಬಿಜೆಪಿ ಕಟ್ಟಿ ಬೆಳೆಸುವಲ್ಲಿ ಶ್ರಮಿಸಿದ್ದ ಶರತ್ ಉಪಚುನಾವಣೆ ಟಿಕೇಟ್ ಆಕಾಂಕ್ಷಿಯಾಗಿದ್ದರು. ಆದರೆ ಬದಲಾದ ರಾಜಕೀಯ ಸನ್ನಿವೇಶದಲ್ಲಿ ಬಿಜೆಪಿ ಎಂಟಿಬಿ ಬೆಂಬಲಿಸಿದ್ದರಿಂದ ಪಕ್ಷದಿಂದ ಹೊರಬಂದ ಶರತ್ ಪಕ್ಷೇತರರಾಗಿ ಸ್ಪರ್ಧಿಸಿ ಗೆಲುವು ಸಾಧಿಸಿದರು.

ಬಳಿಕ ಬಿಜೆಪಿ ಸೇರ್ಪಡೆಗೆ ಶರತ್ ಸಿದ್ಧವಿದ್ದರೂ ಬಿಜೆಪಿಯ ಕೆಲ ಹಿರಿಯ ಒಕ್ಕಲಿಗ ನಾಯಕರು ತಮಗೆ ಪ್ರತಿಸ್ಪರ್ಧಿಯಾಗಬಹುದೆಂಬ ಕಾರಣಕ್ಕೆ ಶರತ್ ದೂರವಿಟ್ಟಿದ್ದರು. ಹೀಗಾಗಿ ಅನಿವಾರ್ಯವಾಗಿ ಶರತ್ ಕಾಂಗ್ರೆಸ್ ಬಾಗಿಲು ಬಡಿದಿದ್ದರು. ಆದರೇ ಕಾಂಗ್ರೆಸ್ ನಲ್ಲಿ ಶರತ್ ಗೆ ಹಿರಿಯ ನಾಯಕರು ಮುಕ್ತ ಸ್ವಾಗತ ಕೋರಿದರೂ ಸ್ಥಳೀಯ ಹೊಸಕೋಟೆ ಭಾಗದ ನಾಯಕರು, ಸ್ಥಳೀಯ ಜನಪ್ರತಿನಿಧಿಗಳು ತೀವ್ರ ವಿರೋಧ ವ್ಯಕ್ತಪಡಿಸಿದರು. ಹೀಗಾಗಿ ದಸರಾ ವೇಳೆ ನಡೆಯಬೇಕಾದ ಶರತ್ ಕಾಂಗ್ರೆಸ್ ಸೇರ್ಪಡೆ ರದ್ದಾಯಿತು.
https://m.facebook.com/story.php?story_fbid=2920214484865418&id=1438724319681116
ಆದರೇ ಈಗ ಮತ್ತೊಮ್ಮೆ ರಾಜಕೀಯ ಸ್ಥಿತಿ ಬದಲಾಗಿದೆ. ಗ್ರಾಮ ಪಂಚಾಯತ್ ಚುನಾವಣೆಯಲ್ಲಿ ಕಾಂಗ್ರೆಸ್ ಬೆಂಬಲಕ್ಕೆ ನಿಂತಿರುವ ಶರತ್ ಬಚ್ಚೇಗೌಡ, ಸ್ಥಳೀಯ ಗ್ರಾಮ ಪಂಚಾಯತ್ ನಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಗೆಲುವಿಗೆ ರಣತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ.

ಅಲ್ಲದೇ ಸ್ಥಳೀಯ ಕಾಂಗ್ರೆಸ್ ನಾಯಕರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಗ್ರಾಮ ಪಂಚಾಯತ್ ಚುನಾವಣೆಯ ಸಿದ್ಧತೆಯಲ್ಲಿ ತೊಡಗಿದ್ದು, ಸ್ಥಳೀಯರ ಮುನಿಸು ಮುಗಿದು ಶರತ್ ಕಾಂಗ್ರೆಸ್ ಸೇರ್ಪಡೆ ಎಲ್ಲರೂ ಒಪ್ಪಿಗೆ ಸೂಚಿಸಿದ್ದಾರೆ ಎನ್ನಲಾಗಿದೆ.ಇದೇ ವಿಚಾರಕ್ಕೆ ನಿನ್ನೆ ಶರತ್ ಡಿಕೆಶಿ ಭೇಟಿ ಮಾಡಿದ್ದು, ಜನವರಿ ತಿಂಗಳಿನ ಸಂಕ್ರಾತಿ ವೇಳೆ ಶರತ್ ತಮ್ಮ ಬೆಂಬಲಿಗರ ಜೊತೆ ಕಾಂಗ್ರೆಸ್ ಪಾಳಯಕ್ಕೆ ಸೇರಲಿದ್ದಾರೆ.

ನಿನ್ನೆ ಈ ಕುರಿತು ಅಂತಿಮ ಹಂತದ ಮಾತುಕತೆ ನಡೆದಿದ್ದು ಡಿಕೆಶಿ ಕೂಡ ಶರತ್ ಸೇರ್ಪಡೆಗೆ ಎಲ್ಲ ಸಿದ್ಧತೆಯಲ್ಲಿದ್ದಾರೆ ಎನ್ನಲಾಗಿದೆ .ಈ ಮಾತುಕತೆ ವೇಳೆ ಮಾಜಿ ಸಚಿವ ಹಾಗೂ ಕಾಂಗ್ರೆಸ್ ನಾಯಕ ಕೃಷ್ಣಭೈರೇಗೌಡ ಕೂಡ ಹಾಜರಿದ್ದರು.