ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಹೊಸ ಮಾರ್ಗಸೂಚಿಯನ್ಮು ಪ್ರಕಟಿಸಿದೆ. ಶಾಲಾ, ಕಾಲೇಜುಗಳನ್ನು ಬಂದ್ ಮಾಡಲಾಗಿದ್ದು, ರಾಜ್ಯದಾದ್ಯಂತ ನೈಟ್ ಕರ್ಪ್ಯೂ ಜಾರಿ ಮಾಡಲಾಗಿದ್ದು, ನಾಳೆ ರಾತ್ರಿಯಿಂದಲೇ ನೈಟ್ ಕರ್ಪ್ಯೂ ಜಾರಿಗೆ ಬರಲಿದೆ.
ರಾಜ್ಯಾದ್ಯಂತ ರಾತ್ರಿ 9 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ಜಾರಿ ಮಾಡಲಾಗಿದ್ದು, ಮೇ 3 ರವರೆಗೆ ಈ ಅದೇಶ ಜಾರಿಯಲ್ಲಿರಲಿದೆ. ಅಲ್ಲದೇ ರಾತ್ರಿ ವೇಳೆಯಲ್ಲಿ ವಾಹನ ಸಂಚಾರಕ್ಕೆ ಸಂಪೂರ್ಣವಾಗಿ ಬ್ರೇಕ್ ಹಾಕಲಾಗಿದೆ.
ಮಾದ್ಯಮಗಳಲ್ಲಿ ಮಾರ್ಗಸೂಚಿ ಪ್ರಕಟವಾಗಿದೆ ಎಂಬ ವರದಿ ಬಿತ್ತರವಾಗುತ್ತಿದ್ದಂತೆಯೇ ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಗಳು ಸ್ಪಷ್ಟನೆಯನ್ನು ಕೊಟ್ಟಿದ್ದು, ಯಾವುದೇ ಮಾರ್ಗಸೂಚಿಯನ್ನ ರಾಜ್ಯ ಸರಕಾರ ಪ್ರಕಟಿಸಿಲ್ಲ ಎಂದು ತಿಳಿಸಿದ್ದಾರೆ.
ನಾಳೆ ರಾಜ್ಯಪಾಲರ ಜೊತೆಗೆ ಸರ್ಪಪಕ್ಷಗಳ ಸಭೆ ನಡೆಯಲಿದ್ದು, ಸಭೆಯ ನಂತರದಲ್ಲಿ ಮುಖ್ಯಮಂತ್ರಿ ಗಳು ಗೈಡ್ ಲೈನ್ಸ್ ಪ್ರಕಟಿಸಲಿ ದ್ದಾರೆ ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರು ತಿಳಿಸಿದ್ದಾರೆ. ಆದರೆ ನಾಳೆಯ ಸಭೆಯ ನಂತರ ಇದೇ ಮಾರ್ಗಸೂಚಿ ಪ್ರಕಟವಾಗುತ್ತಾ ಅನ್ನೋದನ್ನು ಕಾದುನೋಡ ಬೇಕಾಗಿದೆ.