ಸೋಮವಾರ, ಏಪ್ರಿಲ್ 28, 2025
HomeBreakingನಾನು ಸಿಎಂ ಸ್ಥಾನದ ಆಕಾಂಕ್ಷಿ….! ಸಿಎಂ ಆಗೋ ಅರ್ಹತೆ ನನಗೂ ಇದೆ….! ಕೈಶಾಸಕನ ಹೊಸವರಸೆ…!

ನಾನು ಸಿಎಂ ಸ್ಥಾನದ ಆಕಾಂಕ್ಷಿ….! ಸಿಎಂ ಆಗೋ ಅರ್ಹತೆ ನನಗೂ ಇದೆ….! ಕೈಶಾಸಕನ ಹೊಸವರಸೆ…!

- Advertisement -

ಮೈಸೂರು: ಬೈ ಎಲೆಕ್ಷನ್ ನಲ್ಲಿ ಕಾಂಗ್ರೆಸ್ ಗೆಲ್ಲತ್ತೋ ಬಿಡತ್ತೋ ಆದರೆ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನದ ಆಕಾಂಕ್ಷಿಗಳು ಎಷ್ಟು ಜನ ಇದ್ದಾರೆ ಎಂಬ ಲೆಕ್ಕಾಚಾರ ಮಾತ್ರ ಜನತೆಗೆ ಸ್ಪಷ್ಟವಾಗತೊಡಗಿದೆ. ಡಿಕೆಶಿ ಹಾಗೂ ಸಿದ್ಧರಾಮಯ್ಯ ಸಿಎಂ ರೇಸ್ ನಲ್ಲಿರೋದು ಅವರ ಬೆಂಬಲಿಗರ ಕಚ್ಚಾಟದಿಂದ ಬೆಳಕಿಗೆ ಬರ್ತಿರೋ ಬೆನ್ನಲ್ಲೇ, ಶಾಸಕ ತನ್ವೀರ್ ಶೇಠ್ ನಾನು ಕೂಡ ಸಿಎಂ ಸ್ಥಾನದ ಆಕಾಂಕ್ಷಿಯೇ ಎಂದಿದ್ದಾರೆ.

ಮೈಸೂರಿನಲ್ಲಿ  ಮಾಧ್ಯಮಗಳ ಜೊತೆ ಮಾತನಾಡಿದ ಶಾಸಕ ತನ್ವೀರ್ ಶೇಠ್,ನಾನು ಸಿಎಂ ಆಗುವ ಅರ್ಹತೆ ಇಟ್ಟುಕೊಂಡಿದ್ದೇನೆ. ಸಿಎಂ ಆಗೋಕೆ ಕಾಂಗ್ರೆಸ್ ನಲ್ಲಿ ಅಂಕಿ-ಸಂಖ್ಯೆ ಮುಖ್ಯ  ಅನ್ನೋದು ಎಲ್ಲರಿಗೂ ಗೊತ್ತಿರೋ ವಿಚಾರ. ಹೀಗಾಗಿ ಸಂಖ್ಯೆ ಇದ್ದರೇ ನಾನು ಸಿಎಂ ಆಗಬಹುದು ಎನ್ನುವ ಮೂಲಕ ಕೈಪಾಳಯದಲ್ಲಿ ಶಾಸಕ ಸಂಖ್ಯೆಯ ಲೆಕ್ಕಾಚಾರ ಮುಖ್ಯ ಎನ್ನುವ ಗುಟ್ಟು ಬಿಟ್ಟುಕೊಟ್ಟಿದ್ದಾರೆ.

ಯಾರು ಸಿಎಂ ಆಗ್ತಾರೆ ಅನ್ನೋದು ಮುಖ್ಯವಲ್ಲ. ಕಾಂಗ್ರೆಸ್ ಅಧಿಕಾರಕ್ಕೆ ಬರೋದು ಮುಖ್ಯ. ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರೋದ್ರಲ್ಲಿ ಯಾವುದೇ ಅನುಮಾನವಿಲ್ಲ. ಅಧಿಕಾರಕ್ಕೆ ಬಂದಾಗ ಅಂಕಿ-ಅಂಶ ಆಧರಿಸಿ ಹೈಕಮಾಂಡ್ ನಿರ್ಣಯಕೈಗೊಳ್ಳುತ್ತದೆ. ಆ ನಿರ್ಣಯಕ್ಕೆ ನಾನು ಬದ್ಧ. ಆದರೆ ನಾನು ಸಿಎಂ ಸ್ಥಾನದ ಆಕಾಂಕ್ಷಿಯೇ ಎಂದಿದ್ದಾರೆ.

ಪ್ರಜಾಪ್ರಭುತ್ವದಲ್ಲಿ ಸಿಎಂ ಆಗೋದಿಕ್ಕೆ ಅಂಕಿ-ಅಂಶವೇ ಮುಖ್ಯ ಎನ್ನುವ ಮಾತನ್ನು ತನ್ವೀರ್ ಶೇಠ್ ಹಲವು ಭಾರಿ ಪುನರುಚ್ಛರಿಸುವ ಮೂಲಕ ಕಾಂಗ್ರೆಸ್ ನಲ್ಲಿ ಸಿಎಂ ಸ್ಥಾನಕ್ಕೆ ಏರಲು ಬಯಸುವವರು ಶಾಸಕರ ಸಂಖ್ಯೆಯನ್ನು ಒಗ್ಗೂಡಿಸಿಕೊಳ್ಳಬೇಕು ಎಂಬ ಮುನ್ಸೂಚನೆ ನೀಡಿದ್ದು, ಆ ಮೂಲಕ 2023 ರ ಚುನಾವಣೆ ವೇಳೆಗೆ ಯಾರು ಶಾಸಕರ ಬೆಂಬಲ ಪಡೆಯುತ್ತಾರೋ ಅವರೇ ಸಿಎಂ ಸ್ಥಾನಕ್ಕೆ ಏರಬಹುದು ಎಂಬರ್ಥದಲ್ಲಿ ಮಾತನಾಡಿದ್ದಾರೆ.

ಕಾಂಗ್ರೆಸ್ ನಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ಧರಾಮಯ್ಯ ಹಾಗೂ ಉತ್ತರ ಕರ್ನಾಟಕ ಭಾಗದ ನಾಯಕ ಸತೀಶ್ ಜಾರಕಿಹೊಳಿ ಸಿಎಂ ಸ್ಥಾನದ ಮೇಲೆ ಕಣ್ಣಿಟ್ಟಿರೋದು ಎಲ್ಲರಿಗೂ ತಿಳಿದ ಸಂಗತಿ. ಆದರೇ ಇತ್ತೀಚಿಗೆ ಕಾಂಗ್ರೆಸ್ ನಲ್ಲಿ ಪ್ರತಿಯೊಬ್ಬರು ಸಿಎಂ ಕುರ್ಚಿಯ ಮೇಲೆ ಕರವಸ್ತ್ರ ಹಾಕುವ ಸರ್ಕಸ್ ಆರಂಭಿಸಿದ್ದು, ಚುನಾವಣೆಯಲ್ಲಿ ಒಂದೊಮ್ಮೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೇ, ಸಚಿವ ಸ್ಥಾನಕ್ಕಿಂತ ಸಿಎಂ ಸ್ಥಾನಕ್ಕೆ ಆಕಾಂಕ್ಷಿಗಳ ಪಟ್ಟಿ ನಿರ್ಮಾಣವಾದರೂ ಅಚ್ಚರಿ ಏನಿಲ್ಲ.

RELATED ARTICLES

Most Popular