
ಕೊಚ್ಚಿನ್ : ಕರ್ನಾಟಕ ಮತ್ತು ಕೇರಳ ರಾಜ್ಯಗಳ ನಡುವೆ ಪ್ರಯಾಣ ಮತ್ತು ಸರಕು ಸಾಗಾಣಿಕೆಗೆ ಅನುಕೂಲವಾಗುವಂತೆ ಗಡಿಯಲ್ಲಿನ ನಾಲ್ಕು ರಸ್ತೆಗಳನ್ನು ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಕಾಸರಗೋಡು ಜಿಲ್ಲಾಡಳಿತಕ್ಕೆ ನಿರ್ದೇಶನ ನೀಡಿದೆ.

ಕರ್ನಾಟಕ ಹಾಗೂ ಕೇರಳ ನಡುವಿನ 12 ಅಂತರ್ ರಾಜ್ಯ ರಸ್ತೆಗಳ ಮೂಲಕ ಅಂತರ್ ರಾಜ್ಯ ಪ್ರಯಾಣದ ನಿಷೇಧವನ್ನು ತೆರವುಗೊಳಿಸುವಂತೆ ಕೋರಿ ಬಿಜೆಪಿ ಮುಖಂಡ ಹಾಗೂ ಕಾಸರಗೋಡು ಜಿಲ್ಲಾ ಪಂಚಾಯತ್ ಸದಸ್ಯ ಶ್ರೀಕಾಂತ್ ಅವನರು ಕೇರಳ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು. ಈ ಕುರಿತು ವಿಚಾರಣೆ ನಡೆಸಿರುವ ಮುಖ್ಯ ನ್ಯಾಯಮೂರ್ತಿ ಎಸ್.ಮಣಿಕುಮಾರ್ ಮತ್ತು ನ್ಯಾಯಮೂರ್ತಿ ಶಾಜಿ ಪಿ ಚಾಲಿ ಅವರನ್ನೊಳಗೊಂಡ ವಿಭಾಗೀಯ ಪೀಠ ಈ ಆದೇಶ ಹೊರಡಿಸಿದೆ.

ಎರಡು ರಾಜ್ಯಗಳ ನಡುವೆ ಪ್ರಯಾಣಿಸಲು ಎನ್‌ಎಚ್ -47 ಮಾತ್ರವೇ ಮುಕ್ತವಾಗಿದೆ ಎಂದು ರಾಜ್ಯ ಸರ್ಕಾರ ತಿಳಿಸಿದೆ. ಕರ್ನಾಟಕಕ್ಕೆ ಹೋಗುವ ಇತರ ನಾಲ್ಕು ರಾಜ್ಯ ಹೆದ್ದಾರಿಗಳಾದ ಜಾಲ್ಸೂರು, ಪಾಣಿತ್ತೂರು, ಮಾಣಿಮೂಲೆ, ಪೆರ್ಲ ಗಡಿಗಳಲ್ಲಿ ವಿಧಿಸಲಾಗಿರುವ ಸಂಚಾರ ನಿಷೇಧವನ್ನು ಗುರುವಾರದಿಂದ ತೆರವುಗೊಳಿಸುವಂತೆ ಕೇರಳ ಹೈಕೋರ್ಟ್ ಸೂಚಿಸಿದೆ.

ಇನ್ನು ಕೇಂದ್ರ ಸರಕಾರ ಕೇಂದ್ರದ ಅನ್ ಲಾಕ್ ಮಾರ್ಗಸೂಚಿಗಳನ್ನು ಉಲ್ಲಂಘಿಸಿ ಈ ಆದೇಶ ಹೊರಡಿಸಲಾಗಿದೆ ಎಂದು ಶ್ರೀಕಾಂತ್ ಅವರ ಸಲಹೆಗಾರ ವಿ ಸಜಿತ್ ಕುಮಾರ್ ಅರ್ಜಿ ಸಲ್ಲಿಸಿದ್ದರು.

ವಾಹನಗಳ ಸಂಚಾರದ ನಿಷೇಧವು ಜಿಲ್ಲೆಯ ಜನರಿಗೆ ತೊಂದರೆಗಳನ್ನು ಸೃಷ್ಟಿಸುತ್ತಿತ್ತು ತೊಂದರೆಗೆ ಗುರಿಯಾಗುವ ಪ್ರದೇಶಗಳನ್ನು ಗುರುತಿಸಲಾಗಿದೆಯೆ ಎಂದು ಜಿಲ್ಲೆಯ ಅಧಿಕಾರಿಗಳು ಖಚಿತಪಡಿಸಿಕೊಳ್ಳ ಬೇಕು ಮತ್ತು ಅಂತಹ ಅನಾಹುತಗಳನ್ನು ತಡೆಗಟ್ಟುವ ಕ್ರಮಗಳನ್ನು ಜಿಲ್ಲಾ ಮತ್ತು ಸ್ಥಳೀಯ ಅಧಿಕಾರಿಗಳು ತೆಗೆದುಕೊಳ್ಳಬೇಕಾಗಿದೆ ಎಂದು ಸರ್ಕಾರದ ಪರ ಅರ್ಜಿದಾರರು ಹೇಳಿದರು.

ರಾಜ್ಯದ ಗಡಿ ದಾತಲು ಇಚ್ಚಿಸುವವರು ಪಾಸ್ ಪಡೆಯಬೇಕು. ಕೇಂದ್ರದ ಮಾರ್ಗಸೂಚಿಗಳಿಗೆ ವಿರುದ್ಧವಾಗಿ ಸಂಚಾರ ನಡೆಸುವುದಕ್ಕೆ ಗೆ ನಿರ್ಬಂಧಗಳಿವೆ ಎಂದು ಇದರ ಅರ್ಥವಲ್ಲ. ಆಗಸ್ಟ್ 25 ರಂದು ದಕ್ಷಿಣ ಕನ್ನಡದಲ್ಲಿ 247 ಮತ್ತು ಹತ್ತಿರದ ಕಾಸರಗೋಡಿನಲ್ಲಿ 99 ಕೋವಿಡ್ ಪ್ರಕರಣ ವರದಿಯಾಗಿವೆ ಎಂದು ರಾಜ್ಯ ಸರ್ಕಾರ ತಿಳಿಸಿತ್ತು. ವಾದ ವಿವಾದ ಆಲಿಸಿದ ಹೈಕೋರ್ಟ್ ಇದೀಗ ಮಹತ್ವದ ಆದೇಶವನ್ನು ಹೊರಡಿಸಿದೆ.