ಭಾನುವಾರ, ಏಪ್ರಿಲ್ 27, 2025
HomeBreakingಬಾಲಿವುಡ್ ಗೆ ಬಂದ್ಲು ಜ್ಯೂನಿಯರ್ ಶ್ರೀದೇವಿ….! ಜಾಹ್ನವಿ ಬಳಿಕ ಈಗ ಖುಷಿ ಸರದಿ…!!

ಬಾಲಿವುಡ್ ಗೆ ಬಂದ್ಲು ಜ್ಯೂನಿಯರ್ ಶ್ರೀದೇವಿ….! ಜಾಹ್ನವಿ ಬಳಿಕ ಈಗ ಖುಷಿ ಸರದಿ…!!

- Advertisement -

ಲೇಡಿ ಸೂಪರ್ ಸ್ಟಾರ್ ಎಂದೇ ಕರೆಸಿಕೊಂಡ ತನ್ನ ಸೌಂದರ್ಯ ಹಾಗೂ ನಟನೆಯಿಂದ ಬಹುಭಾಷೆಯಲ್ಲಿ ಮಿಂಚಿದ ನಟಿ ಶ್ರೀದೇವಿ ಬಳಿಕ ಈಗ ಪುತ್ರಿಯರ ಸರದಿ. ಜಾಹ್ನವಿ ಬಳಿಕ ಶ್ರೀದೇವಿ ದ್ವಿತೀಯ ಪುತ್ರಿ ಖುಷಿ ಕೂಡ ಮಾಯಾಲೋಕಕ್ಕೆ ಎಂಟ್ರಿ ಕೊಡುವ ಸೂಚನೆ ನೀಡಿದ್ದಾರೆ.

300 ಕ್ಕೂ ಹೆಚ್ಚು ಚಿತ್ರಗಳಲ್ಲಿ ಮನಸೆಳೆಯುವ ಪಾತ್ರ, ನೃತ್ಯದ ಮೂಲಕ ಯುವಕರ ಹೃದಯ ಬಡಿತ ಹೆಚ್ಚಿಸಿದ ಶ್ರೀ ದೇವಿ ಕಲಾಸೇವೆ ಮಕ್ಕಳ ಮೂಲಕ ಮುಂದುವರೆಯುವ ಲಕ್ಷಣವಿದೆ. ಹಿರಿಯ ಪುತ್ರಿ ಜಾಹ್ನವಿ ಕಪೂರ್ ಬಳಿಕ ಈಗ ಎರಡನೇ ಪುತ್ರಿಯೂ ಬಾಲಿವುಡ್ ಎಂಟ್ರಿ ಗೆ ಸಿದ್ಧವಾಗಿದ್ದಾಳೆ.

20 ವರ್ಷದ ಖುಷಿ ಕಪೂರ್ ಸದ್ಯ ಮಾಡೆಲಿಂಗ್ ನಲ್ಲಿ ಬ್ಯುಸಿಯಾಗಿದ್ದು ಸಧ್ಯದಲ್ಲೇ ಫೇಮಸ್ ಫಿಲ್ಮಮೇಕರ್ ಬ್ಯಾನರ್ ಅಡಿಯಲ್ಲಿ ಬಾಲಿವುಡ್ ಗೆ ಅಡಿ ಇಡಲಿದ್ದಾರೆ ಎನ್ನಲಾಗಿದೆ. ತಾಯಿಯನ್ನು ಮೀರಿಸುವ ಸೌಂದರ್ಯದ ಖನಿಯಾಗಿರುವ ಖುಷಿ ನ್ಯೂಯಾರ್ಕ್ ನಲ್ಲಿ ಫಿಲ್ಮ್ ಮೇಕಿಂಗ್ ಕುರಿತು ಅಧ್ಯಯನ ನಡೆಸಿದ್ದು ಸಿನಿಮಾ ಕ್ಷೇತ್ರದ ಬಗ್ಗೆ ಆಸಕ್ತಿ ಹೊಂದಿದ್ದಾರೆ.

ಖುಷಿ ಬಾಲಿವುಡ್ ಎಂಟ್ರಿಯನ್ನು ತಂದೆ ಬೋನಿ ಕಪೂರ್ ಖಚಿತಪಡಿಸಿದ್ದಾರೆ. ಇಂಗ್ಲೀಷ್ ಮಾಧ್ಯಮವೊಂದಕ್ಕೆ ಇಂಟರವ್ಯೂ ನೀಡುವ ವೇಳೆ ಸಧ್ಯದಲ್ಲೇ ಖುಷಿ ಕೂಡ ಅಕ್ಕನಂತೆ ಬಾಲಿವುಡ್ ಗೆ ಬರಲಿದ್ದಾರೆ ಎಂದಿದ್ದಾರೆ. ಆದರೆ ಯಾವ ಸಿನಿಮಾ, ಯಾವ ಬ್ಯಾನರ್ ಅಡಿಯಲ್ಲಿ ಲಾಂಚ್ ಆಗಲಿದ್ದಾರೆ ಎಂಬ ಮಾಹಿತಿಯನ್ನು ಅವರು ಬಿಟ್ಟು ಕೊಟ್ಟಿಲ್ಲ.

ಒಟ್ಟಿನಲ್ಲಿ ಶ್ರೀದೇವಿ ಅಭಿಮಾನಿಗಳಿಗೆ ಅಗಲಿದ ನೆಚ್ಚಿನ ನಟಿಯನ್ನು ಮಕ್ಕಳಲ್ಲಿ ಕಾಣುವ ಅವಕಾಶ ಸಿಕ್ಕಿದಂತಾಗಿದ್ದು ಖುಷಿ ಸಿನಿಮಾರಂಗಕ್ಕೆ ಪ್ರವೇಶಿಸುವ ಸಂಗತಿ ತಿಳಿದು ಖುಷಿಯಾಗಿದ್ದಾರೆ.

RELATED ARTICLES

Most Popular