fridge cleaning tips : ಹೆಚ್ಚಾಗಿ ಉಳಿದ ತಂಗಳು, ತರಕಾರಿ, ಹಣ್ಣು, ಹಾಲು, ಮೊಸರು ಹೀಗೆ ಯಾವುದೇ ಆಹಾರ ಪದಾರ್ಥಗಳನ್ನು ಹಾಳಾಗದಂತೆ ತಡೆಯುವುದು ಫ್ರಿಡ್ಜ್ನ ಕೆಲಸವಾಗಿದೆ. ಆದರೆ ಈ ಆಹಾರ ಪದಾರ್ಥಗಳನ್ನು ಫ್ರಿಡ್ಜ್ನಲ್ಲಿ ಇಟ್ಟ ಪರಿಣಾಮ ಅನೇಕ ಬಾರಿ ಹಳದಿ ಕಲೆಗಳು ಕಾಣಿಸಿಕೊಳ್ಳುವುದುಂಟು. ಈ ಕಲೆಗಳನ್ನು ಸಮಯಕ್ಕೆ ಸರಿಯಾಗಿ ತೆಗೆದು ಹಾಕದೇ ಇದ್ದರೆ ಬಳಿಕ ಅದನ್ನು ತೆಗೆಯುವುದು ತುಂಬಾನೇ ಕಷ್ಟವಾಗಿಬಿಡುತ್ತದೆ. ಇದರಿಂದ ಫ್ರಿಡ್ಜ್ನಿಂದ ಕೆಟ್ಟ ವಾಸನೆ ಬರಲು ಆರಂಭವಾಗುತ್ತದೆ.
ಹೀಗಾಗಿ ನೀವು ಕಾಲ ಕಾಲಕ್ಕೆ ಸರಿಯಾಗಿ ಫ್ರಿಡ್ಜ್ನ್ನು ಸ್ವಚ್ಛಗೊಳಿಸುತ್ತಾ ಇರಬೇಕು. ನಿಮ್ಮ ಮನೆಯ ಫ್ರಿಡ್ಜ್ನಲ್ಲಿಯೂ ಇಂತಹ ಹಳದಿ ಕಲೆಗಳು ಕಾಣಿಸಿಕೊಂಡಿದ್ದರೆ ನೀವು ಅದನ್ನು ತೊಡೆದು ಹಾಕಲು ಇಲ್ಲೊಂದಿಷ್ಟು ಸಿಂಪಲ್ ಟಿಪ್ಸ್ಗಳಿವೆ ನೋಡಿ :
ಫ್ರಿಡ್ಜ್ನ್ನು ಸ್ವಚ್ಛಗೊಳಿಸುವ ಮುನ್ನ ನೀವು ಮೊದಲು ಫ್ರಿಡ್ಜ್ನ ಒಳಗಡೆ ಇರುವ ಎಲ್ಲಾ ವಸ್ತುಗಳನ್ನು ಹೊರಗೆ ತೆಗೆಯಿರಿ. ಮೊದಲು ಫ್ರೀಜರ್ನ್ನು ಡಿಫ್ರಾಸ್ಟ್ ಮಾಡಿ. ಈಗ ಫ್ರಿಡ್ಜ್ನಲ್ಲಿರುವ ಎಲ್ಲಾ ಐಸ್ಗಳು ಕರಗುತ್ತದೆ. ನಂತರ ಬಿಸಿ ನೀರಿಗೆ ಸ್ವಲ್ಪ ಡಿರ್ಟಜೆಂಟ್ ಹಾಗೂ ಕೆಲವು ಹನಿ ನಿಂಬೆ ಹಣ್ಣಿನ ರಸವನ್ನು ಹಾಕಿ ಚೆನ್ನಾಗಿ ಮಿಶ್ರಣ ಮಾಡಿ. ಇದೀಗ ಈ ನೀರಿನಲ್ಲಿ ಬಟ್ಟೆಯನ್ನು ಹಿಂಡಿಕೊಂಡು ಸಂಪೂರ್ಣ ಫ್ರಿಡ್ಜ್ ಸ್ವಚ್ಛಗೊಳಿಸಿ.
ಇದನ್ನು ಬಿಟ್ಟು ನೀವು 1 ಕಪ್ ವಿನೇಗರ್ಗೆ 1/4 ಕಪ್ ಅಡಿಗೆ ಸೋಡಾವನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ. ಬಳಿಕ ಒದ್ದೆ ಬಟ್ಟೆಯಿಂದ ನೀರನ್ನು ಅದ್ದಿಕೊಳ್ಳುವ ಮೂಲಕ ಫ್ರಿಡ್ಜ್ನ್ನು ಸ್ವಚ್ಛಗೊಳಿಸಿ. ಇದಾದ ಬಳಿಕ ಕೆಲ ಕಾಲ ಫ್ರಿಡ್ಜ್ನ್ನು ಒಣಗಲು ಬಿಡಿ. ಬಳಿಕ ನೀವು ಫ್ರಿಡ್ಜ್ನ್ನು ಬಳಕೆ ಮಾಡಬಹುದಾಗಿದೆ.
ಇದನ್ನು ಓದಿ : Swami Vivekananda Jayanti controversy : ಬಾರಕೂರಲ್ಲಿ ವಿವೇಕಾನಂದ ಜಯಂತಿ ಆಚರಣೆಗೆ ಉಪನ್ಯಾಸಕಿ ವಿರೋಧ : ಪೊಲೀಸರಿಗೆ ದೂರು
ಇದನ್ನೂ ಓದಿ : success in business: ವ್ಯವಹಾರದಲ್ಲಿ ಪ್ರಗತಿಗಾಗಿ ಕಚೇರಿಯಲ್ಲಿ ತಂದಿಡಿ ಈ ವಿಶೇಷ ವಸ್ತು
ಇದನ್ನೂ ಓದಿ : ಚರ್ಮದ ಮೇಲೆ 21 ಗಂಟೆಗಳ ಕಾಲ ಜೀವಂತವಿರುತ್ತದೆ ಓಮಿಕ್ರಾನ್ : ಅಧ್ಯಯನ
kitchen hacks amazing fridge cleaning tips to remove yellow spots in few minutes tips to clean refrigerator