ನಟಿಯರಿಗೆ ಅಶ್ಲೀಲ ಸಂದೇಶ ಕಳಿಸೋದು ಕೆಲವರಿಗೆ ಹುಚ್ಚು ಹವ್ಯಾಸ. ಆದರೆ ಇಲ್ಲೊಬ್ಬ ಕಾಲೇಜ್ ಪ್ರಾಧ್ಯಾಪಕ ನಟಿ , ನಿರೂಪಕಿ ಹಾಗೂ ಗಾಯಕಿಯಾಗಿ ಗುರುತಿಸಿಕೊಂಡ ಸೌಂದರ್ಯ ಬಾಲ ನಂದಕುಮಾರ್ ಗೆ ಅಶ್ಲೀಲ ಮೆಸೆಜ್ ಕಳಿಸಿ ಸುದ್ದಿಯಾಗಿದ್ದಾನೆ.

ಬಾಲಿವುಡ್ ಸೇರಿದಂತೆ ಎಲ್ಲಾ ಸಿನಿಮಾ ರಂಗದಲ್ಲೂ ಮೀಟೂ ಭಾರಿ ಸದ್ದು ಮಾಡಿತ್ತು. ಇದೀಗ ನಟಿ,ನಿರೂಪಕಿ,ಗಾಯಕಿ ಸೌಂದರ್ಯ ಬಾಲ ನಂದಕುಮಾರ್ ಕೂಡ ತಮಗಾದ ಅಂತಹುದೇ ಅನುಭವವೊಂದನ್ನು ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ.

ಕಾಲೇಜು ಪ್ರಾಧ್ಯಾಪಕರೊಬ್ಬರು ತಮಗೆ ಇನ್ ಸ್ಟಾಗ್ರಾಂನಲ್ಲಿ ಕಳುಹಿಸಿದ ಮೆಸೆಜ್ ನ್ನು ಸೌಂದರ್ಯ ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ನೀನು ನನ್ನೊಂದಿಗೆ ಮಲಗುತ್ತೀಯಾ? ನೀನು ನನ್ನೊಂದಿಗೆ ಮಲಗಿದ್ರೇ ಏನು ಬೇಕಾದರೂ ಕೊಡ್ತಿನಿ ಅನ್ನೋ ಮೆಸೆಜ್ ರವಾನಿಸಿದ್ದಾನಂತೆ ಕಾಮಿ ಪ್ರೊಫೆಸರ್ .

ಹೀಗೆ ಕೆಟ್ಟದಾಗಿ ಮೆಸೆಜ್ ಮಾಡಿರುವ ಪ್ರೊಫೆಸರ್ ವಿರುದ್ಧ ಸಮರ ಸಾರಿರುವ ಸೌಂದರ್ಯ ಈಗಾಗಲೇ ಆ ಪ್ರಾಧ್ಯಾಪಕನ ವರ್ತನೆ ಕುರಿತು ಕಾಲೇಜು ಆಡಳಿತ ಮಂಡಳಿಗೆ ದೂರು ನೀಡಿದ್ದಾರಂತೆ.

ಅಷ್ಟೇ ಅಲ್ಲ ಆತನ ವಿರುದ್ಧ ಕಾನೂನು ಹೋರಾಟ ಮಾಡುವುದಾಗಿಯೂ ಎಚ್ಚರಿಸಿದ್ದಾರೆ.

ಈ ಹಿಂದೆಯೂ ಸಾಕಷ್ಟು ನಟಿಮಣಿಯರು ಈ ರೀತಿ ಅಶ್ಲೀಲ ಮೆಸೆಜ್ ಹಾಗೂ ಲೈಂಗಿಕ ಸಂಪರ್ಕಕ್ಕೆ ಆಹ್ವಾನಿಸುವ ಮೆಸೆಜ್ ಗಳನ್ನು ಸ್ವೀಕರಿಸಿ ಸುದ್ದಿಯಾಗಿದ್ದಾರೆ.

ಅಭಿಮಾನದ ಹೆಸರಿನಲ್ಲಿ ಇಂಥಹ ಅತಿರೇಕಗಳು ಆಗಾಗ ವರದಿಯಾಗುತ್ತಲೇ ಇರುತ್ತವೆ.
