ಕೋಟ : ಕಸಕ್ಕೆ ಬೆಂಕಿಹಾಕುವ ವೇಳೆಯಲ್ಲಿ ವೃದ್ದೆಯೋರ್ವರು ಬೆಂಕಿಗೆ ಆಹುತಿಯಾಗಿರುವ ಘಟನೆ ಉಡುಪಿ ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಕೋಟದ ಮಣೂರಿನಲ್ಲಿ ನಡೆದಿದೆ.
ಮಣೂರು ಜಟ್ಟಿಗೇಶ್ವರ ದೇವಸ್ಥಾನ ಸಮೀಪದ ನಿವಾಸಿ ಬಾಗಿ (68ವರ್ಷ) ಎಂಬವರೇ ಸಾವನ್ನಪ್ಪಿದ ದುರ್ದೈವಿ. ತಮ್ಮ ಮನೆಯಲ್ಲಿ ಅಕ್ಕಪಕ್ಕದ ಕಸಗಟ್ಟಿಗಳನ್ನು ಒಗ್ಗೂಡಿಸಿ ಬೆಂಕಿ ಹಾಕುವ ಸಂದರ್ಭದಲ್ಲಿ ಸೀರೆಗೆ ಬೆಂಕಿ ತಾಗಿಕೊಂಡಿತ್ತು. ಈ ವೇಳೆಯಲ್ಲಿ ಬಾಗಿ ಅವರಿಗೆ ತಲೆ ಸುತ್ತು ಬಂದು ಬೆಂಕಿಯ ರಾಶಿಗೆ ಬಿದ್ದಿದ್ದಾರೆ.
ಇದನ್ನು ಗಮನಿಸಿದ ಸ್ಥಳೀಯರು ಕೂಡಲೇ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಈ ಕುರಿತು ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.