ಬೆಂಗಳೂರು : 21 ವರ್ಷದ ಯುವಕರಿನೆ ಕೊರೊನಾ ಸೋಂಕು ಧೃಡವಾದ ಬೆನ್ನಲ್ಲೇ ಸಾರಿಗೆ ಇಲಾಖೆ ಟ್ವಿಟರ್‌ನಲ್ಲಿ ಟ್ವೀಟ್ ಮಾಡಿದ್ದಾರೆ. ಬೆಂಗಳೂರಿನಿಂದ ಮಂಗಳೂರಿಗೆ ಸಂಜೆ 4.30 ಕ್ಕೆ ಸಾರಿಗೆ ಬಸ್‌ನಲ್ಲಿ (ಕೆಎ.19.ಎಫ್.3329) ಪ್ರಯಾಣ ಬೆಳೆಸಿದ ಯುವಕನಿಗೆ ಸೋಂಕು ಕಾಣಿಸಿಕೊಂಡಿದೆ.

ಹೀಗಾಗಿ ಆ ಬಸ್‌ನಲ್ಲಿ ಸಂಚಾರ ಮಾಡಿದ ಎಲ್ಲಾ ಪ್ರಯಾಣಿಕರು ತಕ್ಷಣವೇ ಹತ್ತಿರದ ಜಿಲ್ಲಾಸ್ಪತ್ರೆಗೆ ತೆರಳಿ ತಪಾಸಣೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿದ್ದಾರೆ.
ಇನ್ನು ದಾವಣಗೆರೆಯಲ್ಲು ಓರ್ವನಿಗೆ ಸೋಂಕು ಕಾಣಿಸಿಕೊಂಡ ಹಿನ್ನೆಲೆ ಟ್ವೀಟ್ ಮಾಡಿರುವ ಕೆಎಸ್‌ಆರ್‌ಟಿಸಿ ಸಂಸ್ಥೆ ಮಾರ್ಚ್ 18 ರಂದು ಬೆಳಗ್ಗೆ 10 ಗಂಟೆಗೆ ಮೆಜೆಸ್ಟಿಕ್‌ನಿಂದ ರಾಜಹಂಸ ಬಸ್ ಮೂಲಕ ದಾವಣಗೆರೆಗೆ ತಲುಪಿದ್ದಾರೆ. ಅದೇ ಬಸ್‌ನಲ್ಲಿ ಪ್ರಯಾಣ ಮಾಡಿರಬಹುದಾದ ಪ್ರಯಾಣಿಕರು ಸಹಾಯವಾಣಿ 104, 080-46848600,66692000 ಸಂಪರ್ಕಿಸಿ ಎಂದು ಸೂಚಿಸಲಾಗಿದೆ.