ಸೋಮವಾರ, ಏಪ್ರಿಲ್ 28, 2025
HomeBreakingಕಾಂಗ್ರೆಸ್ ನಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ…! ಕೈ ಬಿಟ್ಟು ಕಮಲ ಹಿಡಿದ ಖಷ್ಬೂ ಆರೋಪ..!!

ಕಾಂಗ್ರೆಸ್ ನಲ್ಲಿ ಪ್ರಾಮಾಣಿಕರಿಗೆ ಬೆಲೆ ಇಲ್ಲ…! ಕೈ ಬಿಟ್ಟು ಕಮಲ ಹಿಡಿದ ಖಷ್ಬೂ ಆರೋಪ..!!

- Advertisement -

ನವದೆಹಲಿ: ಕಾಂಗ್ರೆಸ್ ನಲ್ಲಿ ಪ್ರಾಮಾಣಿಕವಾಗಿ ದುಡಿಯುವವರಿಗೆ ಬೆಲೆ ಇಲ್ಲ. ಪಕ್ಷದ ಉನ್ನತ ಸ್ಥಾನದಲ್ಲಿ ಕುಳಿತವರಿಗೆ  ವಾಸ್ತವದ ಅರಿವಿಲ್ಲ ಎಂಬ ಆರೋಪದೊಂದಿಗೆ ಮಾದಕ ಚೆಲುವೆ ಖ್ಯಾತಿಯ ನಟಿ ಹಾಗೂ ಎಐಸಿಸಿ ವಕ್ತಾರೆ ಖಷ್ಬೂ ಕೈ ಸಂಘಕ್ಕೆ ವಿದಾಯ ಹೇಳಿದ್ದು, ಕಮಲ ಪಾಳಯದತ್ತ ಹೆಜ್ಜೆ ಹಾಕಿದ್ದಾರೆ.

ನಟಿ ಹಾಗೂ ವಕ್ತಾರೆ ಖುಷಬೂ ಬಿಜೆಪಿ ಸೇರ್ಪಡೆಯ ಮಾತುಕತೆ ಚುರುಕುಗೊಳಿಸುತ್ತಿದ್ದಂತೆ ಕಾಂಗ್ರೆಸ್ ಹೈಕಮಾಂಡ್ ಅವರನ್ನು ಏಐಸಿಸಿ ವಕ್ತಾರ ಸ್ಥಾನದಿಂದ ಕೈಬಿಟ್ಟಿತ್ತು. ಇದರ ಬೆನ್ನಲ್ಲೇ ಖಷ್ಬೂ ಕಾಂಗ್ರೆಸ್ ನ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ.

ಈ ಮಧ್ಯೆ ಕಾಂಗ್ರೆಸ್ ಗೆ ರಾಜೀನಾಮೆ ಸಲ್ಲಿಸಿರುವ ಖಷ್ಬೂ ತಮ್ಮ ಪತ್ರದಲ್ಲಿ ಕಾಂಗ್ರೆಸ್ ಪಕ್ಷದಲ್ಲಿರುವ ಅಸಮಾನತೆ ಹಾಗೂ ವೈರುಧ್ಯಗಳ ಕುರಿತು ಆರೋಪ ಮಾಡಿದ್ದು, ಕಾಂಗ್ರೆಸ್ ನಲ್ಲಿ ಪ್ರಾಮಾಣಿಕವಾಗಿ ಪಕ್ಷಕ್ಕಾಗಿ ದುಡಿಯುವವರಿಗೆ ಬೆಲೆ ಇಲ್ಲ. ಅಲ್ಲಿ ನಿಷ್ಠೆಯಿಂದ ದುಡಿಯುವವರನ್ನು ತುಳಿಯಲಾಗುತ್ತದೆ. ನಾನು ಯಾವುದೇ ಹುದ್ದೆ ಅಥವಾ ಆರ್ಥಿಕ ಸಬಲತೆಯ ಆಸೆಯಿಂದ ಕಾಂಗ್ರೆಸ್ ಸೇರ್ಪಡೆಯಾಗಿರಲಿಲ್ಲ. ಆದರೆ ಕಾಂಗ್ರೆಸ್ ನಲ್ಲಿ ನನಗೆ ನೀರಿಕ್ಷಿತ  ಬೆಂಬಲ ಸಿಗಲಿಲ್ಲ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನ ಉನ್ನತ ಸ್ಥಾನದಲ್ಲಿರುವವರಿಗೆ ಪಕ್ಷದ ಗ್ರೌಂಡ ರಿಯಾಲಿಟಿ ಗೊತ್ತಿಲ್ಲ. ಅದನ್ನು ಅರಿತು ಕೆಲಸ ಮಾಡುವ ನನ್ನಂಥ ಗ್ರೌಂಡ್ ವರ್ಕರ್ ಗೆ ಬೆಲೆ ಇಲ್ಲ. ಹೀಗಾಗಿ ಮನನೊಂದು ಪಕ್ಷ ತೊರೆಯುತ್ತಿರುವುದಾಗಿ ಖಷ್ಬೂ ಪತ್ರದಲ್ಲಿ ಉಲ್ಲೇಖಿಸಿದ್ದಾರೆ. 2014 ಲೋಕಸಭಾ ಚುನಾವಣೆ ಬಳಿಕ ಖಷ್ಬೂ ಕಾಂಗ್ರೆಸ್ ಸೇರ್ಪಡೆಗೊಂಡಿದ್ದರು.

ಆದರೆ ಖುಷಬೂ ಆರೋಪಕ್ಕಾಗಲಿ ಅಥವಾ ರಾಜೀನಾಮೆಗಾಗಲಿ ಕಾಂಗ್ರೆಸ್ ನಾಯಕರು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಸಾಕಷ್ಟು ಕನಸುಗಳೊಂದಿಗೆ ಖಷ್ಬೂ ಬಿಜೆಪಿಯತ್ತ ಮುಖಮಾಡಿದ್ದು, ಎಷ್ಟು ಪಕ್ಷದಲ್ಲಿ ಉಳಿಯುತ್ತಾರೆ ಎಂಬುದು ಸಧ್ಯದ ಕುತೂಹಲ. ತಮಿಳುನಾಡಿನಲ್ಲಿ ಇತ್ತೀಚಗಷ್ಟೇ ಬಿಜೆಪಿಗೆ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ ಕೂಡ ಸೇರ್ಪಡೆಯಾಗಿದ್ದು, ಈಗ ಖಷ್ಬೂ ಕೂಡ ಕಮಲ ಪಾಳಯಕ್ಕೆ ಎಂಟ್ರಿಕೊಟ್ಟಿದ್ದಾರೆ.

RELATED ARTICLES

Most Popular