ಕುವೈತ್ : ಚೀನಾ ದೇಶದಲ್ಲಿ ಮರಣ ಮೃದಂಗ ಬಾರಿಸುತ್ತಿರೋ ಕೊರೋನಾ ವೈರಸ್ ಇದೀಗ ಗಲ್ಪ್ ರಾಷ್ಟ್ರ ಕುವೈತ್ ಗೂ ಕಾಲಿಟ್ಟಿದೆ. ಕುವೈತ್ ಗೆ ಬಂದಿಳಿದ ಮೂವರಿಗೆ ಕೊರೊನಾ ವೈರಸ್ ಪತ್ತೆಯಾಗಿರೋದನ್ನು ಆರೋಗ್ಯ ಇಲಾಖೆ ದೃಢಪಡಿಸಿದೆ.

ಕುವೈತ್ ಗೆ ಇರಾನ್ ನಿಂದ ಬಂದಿದ್ದ ಮೂವರು ಪ್ರಯಾಣಿಕರಿಗೆ ಕೊರೊನಾ ವೈರಸ್ ಇರೋದು ಪತ್ತೆಯಾಗಿದೆ. ಈ ಪೈಕಿ 53 ವರ್ಷದ ಕುವೈತ್ ಪ್ರಜೆ, 61 ವರ್ಷದ ಸೌದಿ ಪ್ರಜೆ ಹಾಗೂ ಇನ್ನೋರ್ವ 21 ವರ್ಷದ ಯುವಕನಿಗೆ ಕೊರೊನಾ ರೋಗ ಲಕ್ಷಣ ಇರೋದನ್ನು ಕುವೈತ್ ಆರೋಗ್ಯ ಇಲಾಖೆ ಖಚಿತ ಪಡಿಸಿದೆ. ಮೂವರನ್ನು ಖಾಸಗಿ ಹೋಟೆಲ್ ನಲ್ಲಿ ಇರಿಸಲಾಗಿದ್ದು, ಸೂಕ್ತ ಚಿಕಿತ್ಸೆಯನ್ನು ನೀಡಲಾಗುತ್ತಿದೆ.

ಕುವೈತ್ ರಾಷ್ಟ್ರದಲ್ಲಿ ಕೋವಿದ್ 19 ಸೋಂಕು ಪತ್ತೆಯಾಗಿರೋ ಹಿನ್ನೆಲೆಯಲ್ಲಿ ಕಟ್ಟೆಚ್ಚರವಹಿಸಲಾಗುತ್ತಿದೆ. ವಿಮಾನ ನಿಲ್ದಾಣದಲ್ಲಿ ಬಂದಿಳಿಯುವ ಎಲ್ಲಾ ಪ್ರಯಾಣಿಕರನ್ನು ತಪಾಸಣೆಗೆ ಒಳಪಡಿಸಲಾಗುತ್ತಿದೆ. ಕುವೈತ್ ಅಧಿಕಾರಿಗಳು ಮತ್ತು ಆರೋಗ್ಯ ಸಚಿವಾಲಯವು ವಿಶ್ವ ಆರೋಗ್ಯ ಸಂಸ್ಥೆ ಅಂಗೀಕರಿಸಿದ ವೈಜ್ಞಾನಿಕ ಮತ್ತು ಪ್ರಮಾಣಿತ ಶಿಫಾರಸ್ಸು ಮತ್ತು ಮಾರ್ಗ ಸೂಚಿಗಳ ಮೂಲಕ ಅಗತ್ಯ ಮುನ್ನೆಚ್ಚರಿಕೆಯ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ.