ಸಾಮಾನ್ಯವಾಗಿ ಮಕ್ಕಳು ಜನಿಸಿದ ಸಂದರ್ಭದಲ್ಲಿ ತಾಯಿಯಾದವಳು ಮಗುವಿಗೆ ಹಾಲುಣಿಸೋದು ಮಾಮೂಲು. ತಾಯಿಯ ಹಾಲು ಅಮೃತಕ್ಕಿಂತಲೂ ಮಿಗಿಲು. ಇಲ್ಲೊಬ್ಬಳು ತಾಯಿ ತನ್ನ ಎದೆಹಾಲು ಮಾರಿ ಲಕ್ಷ ಲಕ್ಷ ಸಂಪಾದನೆ ಮಾಡುತ್ತಿದ್ದಾಳೆ. ಅಷ್ಟಕ್ಕೂ ಈ ತಾಯಿಯ ಎದೆಹಾಲಿಗೆ ಅಷ್ಟೊಂದು ಬೇಡಿಕೆಯಾಕೆ ಅನ್ನೋ ಕುತೂಹಲನಾ ಹಾಗಾದ್ರೆ ಈ ಸ್ಟೋರಿ ಓದಿ.

ಸೈಪ್ರಸ್ ದೇಶದ ನಿವಾಸಿಯಾಗಿರೋ ರಾಫೆಲಾ ಲ್ಯಾಂಪ್ರೊ ಎಂಬಾಕೆಗೆ ಗಂಡು ಮಗುವಾಗಿತ್ತು. ಎಲ್ಲಾ ಮಹಿಳೆಯರಂತೆ ತನ್ನ ಮಗುವಿಗೂ ಲ್ಯಾಂಪ್ರೋ ಎದೆಹಾಲು ನೀಡುತ್ತಿದ್ದಳು. ಆದ್ರೆ ಮಗುವಿನ ಅಗತ್ಯಕ್ಕಿಂತ ಹೆಚ್ಚು ಹಾಲು ಉತ್ಪತ್ತಿಯಾಗುತ್ತಿತ್ತು. ಹುಟ್ಟಿದ ಕೂಡಲೇ ಮಕ್ಕಳಿಗೆ ಎದೆಹಾಲು ಲಭಿಸದೇ ಇದ್ರೆ ಮಕ್ಕಳ ಬೆಳವಣಿಕೆ ಕುಂಠಿತವಾಗುತ್ತೆ ಅನ್ನೋದನ್ನು ಅರಿತುಕೊಂಡಿದ್ದ ರಾಫೆಲ್ ಲ್ಯಾಂಪ್ರೋ ತನ್ನಲ್ಲಿ ಹೆಚ್ಚುವರಿಯಾಗಿ ಉತ್ಪತ್ತಿಯಾಗುತ್ತಿದ್ದ ಎದೆ ಹಾಲನ್ನು ಹಾಳು ಮಾಡಬಾರದು ಅಂತಾ ನಿರ್ಧರಿಸಿ ಹಾಲಿನ ಕೊರತೆ ಎದುರಿಸೋ ಮಕ್ಕಳಿಗೆ ತನ್ನ ಎದೆಹಾಲನ್ನು ಕೊಡುವುದಕ್ಕೆ ಶುರುವಿಟ್ಟುಕೊಂಡಿದ್ದಳು.

ನಿತ್ಯವೂ ಈಕೆಯ ಮನೆಗೆ ಬಂದು ತಾಯಂದಿರು ಎದೆಹಾಲನ್ನು ಕೊಂಡೊಯ್ದು ಮಕ್ಕಳಿಗೆ ಕುಡಿಸುತ್ತಿದ್ದರು. ಈ ನಡುವಲ್ಲೇ ಬಾಡಿಬಿಲ್ಡರ್ ಗಳಿಂದ ರಾಫೆಲ್ ಲ್ಯಾಂಪ್ರೋ ಎದೆಹಾಲಿಗೆ ಬೇಡಿಕೆ ಬಂದಿತ್ತು. ತಾಯಂದಿರ ಎದೆಹಾಲಿನಲ್ಲಿ ಅತೀ ಹೆಚ್ಚು ಪೌಷ್ಟಿಕಾಂಶವಿರೋದ್ರಿಂದಾಗಿ ಮಸಲ್ಸ್ ಬೆಳೆಯಲು ಹೆಚ್ಚು ಸಹಕಾರಿಯಾಗುತ್ತಂತೆ.

ಹೀಗಾಗಿಯೇ ಬಾಡಿಬಿಲ್ಡರ್ ಗಳು ರಾಫೆಲ್ ಲ್ಯಾಪ್ರೋ ಎದೆಹಾಲಿಗೆ ಮುಗಿ ಬೀಳೋದಕ್ಕೆ ಶುರುವಿಟ್ಟುಕೊಡಿದ್ರು. ದುಬಾರಿ ಹಣಕೊಟ್ಟು ಈಕೆಯ ಎದೆ ಹಾಲನ್ನು ಖರೀದಿಸುವುದಕ್ಕೆ ಶುರುಮಾಡಿದ್ದಾರೆ.

ಮಗುವಿನ ಅಗತ್ಯಕ್ಕಿಂತ ಹೆಚ್ಚುವರಿಯಾಗಿ ಸಿಗೋ ಹಾಲನ್ನು ಮಾರಾಟ ಮಾಡಿದ್ದಾಳೆ ಲ್ಯಾಪ್ರೋ. ಇದುವರೆಗೂ ಸುಮಾರು 500 ಲೀಟರ್ ಎದೆಹಾಲನ್ನು ಮಾರಾಟ ಮಾಡಿರೋ ರಾಫೆಲ್ ಲ್ಯಾಪ್ರೋ ಸುಮಾರು 4 ರಿಂದ 5 ಲಕ್ಷ ರೂಪಾಯಿ ಸಂಪಾದನೆ ಮಾಡಿದ್ದಾಳೆ. ಪತ್ನಿಯ ಕೆಲಸಕ್ಕೆ ಪತಿ ಕೂಡ ಸಾಥ್ ನೀಡಿದ್ದಾರೆ.