ಸೋಮವಾರ, ಏಪ್ರಿಲ್ 28, 2025
HomeBreakingಈ ಸಂತೆಯಲ್ಲಿ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ…! ಇದು ಆಚರಣೆಯಲ್ಲಿರೋ ಅಮಾನವೀಯ ಸತ್ಯ…!!

ಈ ಸಂತೆಯಲ್ಲಿ ಹೆಂಡತಿಯರು ಬಾಡಿಗೆಗೆ ಸಿಗುತ್ತಾರೆ…! ಇದು ಆಚರಣೆಯಲ್ಲಿರೋ ಅಮಾನವೀಯ ಸತ್ಯ…!!

- Advertisement -

ಮಧ್ಯಪ್ರದೇಶ: ತನ್ನ ಸಂಸ್ಕೃತಿ,ಸಂಸ್ಕಾರ,ಆಚರಣೆ ಹಾಗೂ ಸಂಪ್ರದಾಯ,ಮಾನವೀಯ ಮೌಲ್ಯಗಳಿಂದಲೇ ವಿಶ್ವದಲ್ಲಿ ತಲೆ ಎತ್ತಿ ನಿಂತ ರಾಷ್ಟ್ರ ಭಾರತ. ಮಹಿಳೆಯರನ್ನು ದೇವತೆಗಳ ಸ್ವರೂಪವೆಂದು ಗೌರವಿಸುವ ಈ ನೆಲದಲ್ಲೂ ಮಹಿಳೆಯರನ್ನು ವಸ್ತುವಿನಂತೆ ಬಳಸುವ ಅನಿಷ್ಠ ಪದ್ಧತಿ ಇದೆ ಎಂದರೇ ನೀವು ನಂಬಲೇ ಬೇಕು. ಹೌದು ಈ ಸಂತೆಯಲ್ಲಿ ಹೆಂಡತಿಯರನ್ನು ತರಕಾರಿಯಂತೆ ಮಾರಲಾಗುತ್ತದೆ.

ಮಧ್ಯಪ್ರದೇಶದ  ಶಿವಪುರಿ ಜಿಲ್ಲೆಯಲ್ಲಿ ಇಂತಹದೊಂದು ಅಮಾನವೀಯ ಆಚರಣೆ ಜಾರಿಯಲ್ಲಿದೆ. ಇಲ್ಲಿ ಹೆಣ್ಣುಮಕ್ಕಳ ಸಂಖ್ಯೆ ಗಂಡುಮಕ್ಕಳ ಸಂಖ್ಯೆಗಿಂತ ಕಡಿಮೆ ಇದೆ. ಹೀಗಾಗಿ ಮೇಲ್ಜಾತಿ ಯುವಕರು ಹಾಗೂ ಜಮೀನುದಾರರಿಗಾಗಿ ಇಲ್ಲಿನ ಕೆಳವರ್ಗದ ಜನರು ತಮ್ಮ ಹೆಂಡತಿಯನ್ನು ಬಾಡಿಗೆಗೆ ನೀಡುತ್ತಾರೆ.

ಅಕ್ಷರಷಃ ಸಂತೆಯಲ್ಲಿ ತರಕಾರಿ ಮಾರಿದಂತೆ ನಡೆಯುವ  ಈ ಅಮಾನವೀಯ ಪ್ರಕ್ರಿಯೆ ಶತಮಾನಗಳಿಂದ ಜಾರಿಯಲ್ಲಿದೆ. ಇಲ್ಲಿನ ಗಂಡಸರು ತಮ್ಮ ಹೆಂಡತಿಯನ್ನು ಮಾರುಕಟ್ಟೆಗೆ ಕರೆದೊಯ್ದು ನಿಲ್ಲಿಸುತ್ತಾರೆ. ಅಲ್ಲಿ ಆಕೆಯ ವಯಸ್ಸು,ಅಂದದ ಆಧಾರದ ಮೇಲೆ ಆಕೆಗೆ ಬೆಲೆ ನಿಗದಿ ಮಾಡಲಾಗುತ್ತದೆ.

ಬಳಿಕ 10,100 ರೂಪಾಯಿ ಬಾಂಡ್ ಪೇಪರ್ ಮೇಲೆ ಸಹಿ ಹಾಕಿ ಹೆಣ್ಣುಮಗಳನ್ನು ಕಳಿಸಿಕೊಡಲಾಗುತ್ತದೆ. ಎಷ್ಟು ಜಾಸ್ತಿ ಹಣ ಕೊಡುತ್ತಾರೋ ಅಷ್ಟು ಧೀರ್ಘಕಾಲ ಹೆಂಡತಿಯರು ಪರರ ಸ್ವತ್ತಾಗಿ ಉಳಿಯುತ್ತಾರೆ.

ಧಡೀಚಾಪ್ರಥಾ ಎಂದು ಕರೆಯಲಾಗುವ  ಈ ಆಚರಣೆ ಕೇವಲ ಮಧ್ಯಪ್ರದೇಶದ ಶಿವಪುರಿ ಜಿಲ್ಲೆ ಮಾತ್ರವಲ್ಲದೇ, ಗುಜರಾತ್ ನ ಕೆಲವು ಕಡೆಗಳಲ್ಲಿಯೂ ಆಚರಣೆಯಲ್ಲಿದೆ.

500 ರೂಪಾಯಿಯಿಂದ ಆರಂಭಿಸಿ 80 ಸಾವಿರ ರೂಪಾಯಿವರೆಗಿನ ಹಣಕ್ಕಾಗಿ ಇಂಥಹ ಅಮಾನವೀಯ ಆಚರಣೆ ನಡೆಯುತ್ತದೆ. ಹೆಣ್ಣುಮಕ್ಕಳಿಗೆ ಇಷ್ಟವಿಲ್ಲದಿದ್ದರೂ ಗಂಡನ ಆಣತಿಯಂತೆ ಹೋಗಲೇಬೇಕು.

https://kannada.newsnext.live/corona-treatment-plasma-treatment-drops-centralgovernment-icmr/

ಲಿಂಗಾನುಪಾತದಲ್ಲಿನ ವ್ಯತ್ಯಾಸ ಹಾಗೂ ಅನಕ್ಷರತೆ,ಬಡತನ ಈ ಪದ್ಧತಿ ಆಚರಣೆಗೆ ಮೂಲಕಾರಣ. ಕುಟುಂಬದ ಹಸಿವನ್ನು ನೀಗಿಸಲು ಹೆಣ್ಣುಮಕ್ಕಳು ಇಂತಹದೊಂದು ಆಚರಣೆಗೆ ಒಗ್ಗಿಕೊಳ್ಳಬೇಕೆಂದು ಅಲ್ಲಿನ ಸಮಾಜ ನೀರಿಕ್ಷಿಸುತ್ತದೆ.

https://kannada.newsnext.live/corona-patient-out-come-home-criminal-case-udupi-dc/

ಇಂತಹದೊಂದು ಕ್ರೂರ,ಹಿಂಸಾತ್ಮಕ ಪದ್ಧತಿ ಆಚರಣೆಯಲ್ಲಿರುವುದು ಎಲ್ಲರಿಗೂ ಗೊತ್ತಿದ್ದರೂ ಯಾವುದೇ ಕ್ರಮವಾಗಿಲ್ಲ. ಕಾರಣ ಯಾರೂ ಕೂಡ  ಈ ಪದ್ಧತಿ ವಿರುದ್ಧ ದೂರು ನೀಡಲು ಮುಂದೇ ಬರುವುದಿಲ್ಲ.

RELATED ARTICLES

Most Popular