ಸೋಮವಾರ, ಏಪ್ರಿಲ್ 28, 2025
HomeBreakingHdk-Rockline:ಎಚ್ಡಿಕೆ ಕ್ಷಮೆಕೇಳುವ ಪ್ರಶ್ನೆಯೇ ಇಲ್ಲ….! ರಾಕ್ ಲೈನ್ ವೆಂಕಟೇಶ್ ತಿರುಗೇಟು…!!

Hdk-Rockline:ಎಚ್ಡಿಕೆ ಕ್ಷಮೆಕೇಳುವ ಪ್ರಶ್ನೆಯೇ ಇಲ್ಲ….! ರಾಕ್ ಲೈನ್ ವೆಂಕಟೇಶ್ ತಿರುಗೇಟು…!!

- Advertisement -

ಮಂಡ್ಯ ಸಂಸದೆ ಹಾಗೂ ಮಾಜಿ ಸಿಎಂ ಎಚ್ಡಿಕೆ ನಡುವಿನ ವಾಗ್ಯುದ್ಧ  ತಾರಕ ಸ್ವರೂಪಕ್ಕೇರಿದೆ. ಸಂಸದೆ ಬೆಂಬಲಕ್ಕೆ ನಿಂತ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್  ಎಚ್ಡಿಕೆ ವಿರುದ್ಧ  ತಿರುಗಿ ಬಿದ್ದಿದ್ದರೇ,ಕುಮಾರಸ್ವಾಮಿ ಅಭಿಮಾನಿಗಳು ರಾಕ್ ಲೈನ್ ಗೆ ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ.

ಮಾಜಿಸಿಎಂ ಕುಮಾರಸ್ವಾಮಿ ದಿ.ನಟ ಅಂಬರೀಷ್ ವಿರುದ್ಧ ನೀಡಿದ ಹೇಳಿಕೆಗಳಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕೆಂಡಾಮಂಡಲರಾಗಿದ್ದು, ಎಚ್ಡಿಕೆ ಅಂಬರೀಷ್ ಬಗ್ಗೆ ಮಾತನಾಡುವಾಗ ತಾವೇನು ಮಾತನಾಡುತ್ತಿದ್ದಾರೆ ಎಂಬ ಅರಿವಿರಲಿ ಎಂದು ಎಚ್ಚರಿಸಿದ್ದಾರೆ.

ಅಲ್ಲದೇ ನಾನು ಎಚ್ಡಿಕೆಯವರ ಬಗ್ಗೆಯಾಗಲಿ ಯಾವುದೇ ಅವಹೇಳನಕಾರಿ ಹೇಳಿಕೆ ನೀಡಿಲ್ಲ. ಅಥವಾ ರಾಜಕೀಯ ಮಾತನಾಡಿಲ್ಲ. ಹೀಗಾಗಿ ಕ್ಷಮೆ ಕೇಳುವ ಪ್ರಶ್ನೆಯೇ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಅಂಬರೀಶ್ ಸ್ಮಾರಕ ನಿರ್ಮಾಣದ ವಿಚಾರದಲ್ಲಿ ಎಚ್ಡಿಕೆ ನಡೆದುಕೊಂಡ ರೀತಿಯನ್ನು ನಾವು ಚುನಾವಣೆ ವೇಳೆಯಲ್ಲಿ ಎಲ್ಲೂ ಪ್ರಸ್ತಾಪಿಸಿಲ್ಲ. ನಮಗೆ ಆ ಸಂಗತಿಯನ್ನು ರಾಜಕೀಯಕ್ಕೆ ಬಳಸಿಕೊಳ್ಳುವ ದುರುದ್ದೇಶ ಇರಲಿಲ್ಲ.

ಹೀಗಾಗಿ ನಾನಾಗಲಿ, ನಟ ದೊಡ್ಡಣ್ಣನವರಾಗಲಿ ಈ ಸಂಗತಿಯನ್ನು ಎಲ್ಲೂ ಪ್ರಸ್ತಾಪಿಸಿಲ್ಲ. ಈಗ ಕುಮಾರಸ್ವಾಮಿಯವರು ಅಂಬರೀಶ್ ಹೆಸರನ್ನು ಸುಮಲತಾ ಅವರ ವಿರುದ್ಧ ಬಳಸುತ್ತಿರುವುದರಿಂದ ಅನಿವಾರ್ಯವಾಗಿ ಈ ಸಂಗತಿ ಹೇಳಬೇಕಾಯಿತು.


ನನಗೆ ರಾಜಕೀಯಕ್ಕೆ ಬರುವ ಆಸೆಯಿಲ್ಲ. ಆದರೆ ಅಂಬರೀಷ್ ಅವರ ವಿಚಾರಕ್ಕೆ ಬಂದ್ರೇ, ಸುಮಲತಾ ಅವರನ್ನು ಟಾರ್ಗೆಟ್ ಮಾಡಿದರೇ ಕುಟುಂಬವಾಗಿ ನಾವೆಲ್ಲ ಅವರೊಂದಿಗೆ ಇದ್ದೇವೆ ಎಂದು ಗುಡುಗಿದ್ದಾರೆ.

ನನ್ನ ಮನೆಮುಂದೇ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಆದರೆ ಈ ಪ್ರತಿಭಟನೆಗೆ ಪ್ರೇರಣೆ ನೀಡಿದವರು ಎಸಿ ರೂಮಿನಲ್ಲಿ ಹಾಯಾಗಿ ಮಲಗಿದ್ದಾರೆ ಎಂದು ಪರೋಕ್ಷವಾಗಿ ಕುಮಾರಸ್ವಾಮಿ ವಿರುದ್ಧ ಕುಟುಕಿದ್ದಾರೆ.

ದೇವೆಗೌಡರ ಕುಟುಂಬದ ಸಾಮರಸ್ಯ ಒಡೆಯುವ ಪ್ರಯತ್ನ ನಮ್ಮದಲ್ಲ. ನನಗೆ ದೇವೆಗೌಡರ ಎಲ್ಲ ಮಕ್ಕಳು, ಸೊಸೆಯಂದಿರ ಪರಿಚಯವೂ ಇದೆ. ಆತ್ಮೀಯತೆ ಇದೆ. ನಾವ್ಯಾರನ್ನು ಒಡೆಯಲು ಹೋಗಿಲ್ಲ ಎಂದು ತಿರುಗೇಟು ನೀಡಿದ್ದಾರೆ.

ಒಟ್ಟಿನಲ್ಲಿ ಕುಮಾರಸ್ವಾಮ-ಸುಮಲತಾ ನಡುವಿನ ಸಮರ ಜೋರಾಗಿದ್ದು, ಎಚ್ಡಿಕೆ ಹಾಗೂ ಸುಮಲತಾ ಪರ ಬ್ಯಾಟಿಂಗ್ ಮಾಡೋಕೆ ಇನ್ನಷ್ಟು ಜನರು ಜೊತೆಯಾಗಿ ಸಮರಕ್ಕೆ ಬಲ ತುಂಬಿದ್ದಾರೆ.

RELATED ARTICLES

Most Popular