ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಜನರು ಮನೆಯಲ್ಲಿಯೇ ಬಂಧಿಯಾಗಿದ್ದಾರೆ. ಮನೆಯಿಂದ ಹೊರಬರಬೇಕಾದ್ರೆ ಮಾಸ್ಕ್ ಕಡ್ಡಾಯ. ಕೆಲವು ಕಡೆ ಮಾಸ್ಕ್ ಇಲ್ಲದಿದ್ರೆ, ಅಗತ್ಯ ವಸ್ತುಗಳನ್ನು ನೀಡಲು ಹಿಂದೇಟು ಹಾಕಲಾಗ್ತಿದೆ.

ಪೊಲೀಸರು ಮಾಸ್ಕ್ ಧರಿದವರಿಗೆ ಲಾಠಿ ರುಚಿ ತೋರಿಸುತ್ತಿದ್ದಾರೆ. ಆದ್ರೆ ಮಾಸ್ಕ್ ಎಲ್ಲರಿಗೂ ಕಡ್ಡಾಯವಲ್ಲ. ಆದರೆ ಮಾಸ್ಕ್ ಯಾರು ಕಡ್ಡಾಯವಾಗಿ ಧರಿಸಬೇಕು, ಯಾರಿಗೆ ಮಾಸ್ಕ್ ಧರಿಸುವುದರಿಂದ ವಿನಾಯಿತಿ ನೀಡಲಾಗುತ್ತಿದೆ ಅಂತಾ ಆರೋಗ್ಯ ಇಲಾಖೆ ಸ್ಪಷ್ಟನೆ ನೀಡಿದೆ.

ಕೊರೊನಾ ಸೋಂಕು ಕಾಣಿಸಿಕೊಳ್ಳುತ್ತಿದ್ದಂತೆಯೇ ಮಾಸ್ಕ್ ಗೆ ಬಹುಬೇಡಿಕೆ ಬಂದಿತ್ತು. ಮೆಡಿಕಲ್ ಶಾಪ್ ಗಳಲ್ಲಿ ಮಾಸ್ಕ್ ಕೇಳಿದ್ರೆ ನೋ ಸ್ಟಾಕ್ ಅಂತಿದ್ದಾರೆ. ಆದರೆ ತುರ್ತು ಸಂದರ್ಭದಲ್ಲಿ ಮನೆಯಿಂದ ಹೊರಬರಬೇಕಾದ್ರೆ ಮಾಸ್ಕ್ ಕಡ್ಡಾಯ ಅನ್ನುತ್ತಿದ್ದಾರೆ ಪೊಲೀಸರು. ಇನ್ನೂ ಹಲವು ಕಡೆಗಳ ಸೂಪರ್ ಮಾರ್ಕೆಟ್, ದಿನಸಿ ಅಂಗಡಿ, ಪೆಟ್ರೋಲ್ ಬಂಕ್ ಗಳಲ್ಲಿ ಮಾಸ್ಕ್ ಇಲ್ಲದವರಿಗೆ ಪ್ರವೇಶ ನಿರಾಕರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲೀಗ ಸ್ಪಷ್ಟನೆ ನೀಡಿದೆ.
ಯಾರು ಮಾಸ್ಕ್ ಧರಿಸಬೇಕು ?
ಕೊರೊನಾ ಸೋಂಕು ಹರಡುವ ಹಿನ್ನೆಲೆಯಲ್ಲಿ ಶೀತ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡುಬಂದ ವ್ಯಕ್ತಿಗಳು ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಶಂಕಿತ ಕೊರೊನಾ ರೋಗಿ ಅಥವಾ ದೃಢಪಟ್ಟ ಕೊರೊನಾ ರೋಗಿ ಮಾಸ್ಕ್ ಧರಿಸಲೇಬೇಕು.

ಇಂತಹ ಲಕ್ಷಣಗಳನ್ನು ಹೊಂದಿರುವ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಸಹ ಮಾಸ್ಕ್ ಧರಿಸಬೇಕು. ಅದ್ರಲ್ಲೂ ರೋಗಿಗಳಿಗೆ ಚಿಕಿತ್ಸೆ ನೀಡುವ ವೈದ್ಯಕೀಯ ಸಿಬ್ಬಂದಿ ಎನ್95 ಮಾಸ್ಕ್ ಹಾಗೂ ಉಳಿದವರು ಟ್ರಿಪಲ್ ಲೇಯರ್ ಸರ್ಜಿಕಲ್ ಮಾಸ್ಕ್ ಧರಿಸಿದರೆ ಸಾಕು ಎಂದು ಆರೋಗ್ಯ ಇಲಾಖೆ ತಿಳಿಸಿದೆ.