ಭಾನುವಾರ, ಜೂನ್ 15, 2025
HomeBreakingಸೆಲೂನ್ ಓಪನ್ ಮಾಡೋದಕ್ಕೆ ಹೊಸ ಸೂತ್ರ : ಕಡ್ಡಾಯವಾಗಿ ಪಾಲಿಸಲೇ ಬೇಕಿದೆ 14 ಮಾರ್ಗಸೂಚಿ

ಸೆಲೂನ್ ಓಪನ್ ಮಾಡೋದಕ್ಕೆ ಹೊಸ ಸೂತ್ರ : ಕಡ್ಡಾಯವಾಗಿ ಪಾಲಿಸಲೇ ಬೇಕಿದೆ 14 ಮಾರ್ಗಸೂಚಿ

- Advertisement -

ಬೆಂಗಳೂರು : ಕೊರೊನಾ ವೈರಸ್ ಸೋಂಕಿನ ಹಿನ್ನೆಲೆಯಲ್ಲಿ ಬಂದ್ ಆಗಿದ್ದ ಸೆಲೂನ್ ತೆರೆಯೋದಕ್ಕೆ ರಾಜ್ಯ ಸರಕಾರ ಅನುಮತಿಯನ್ನು ನೀಡಿದೆ. ಆದರೆ ಸೆಲೂನ್ ಗಳು ಕಡ್ಡಾಯವಾಗಿ ರಾಜ್ಯ ಸರಕಾರದ ಮಾರ್ಗಸೂಚಿಗಳನ್ನು ಪಾಲಿಸಬೇಕಿದೆ. ಕೊರೊನಾ ಸೋಂಕು ಹರಡದಂತೆ ಮುನ್ನೆಚ್ಚರಿಕೆ ವಹಿಸುವ ಸಲುವಾಗಿ ರಾಜ್ಯ ಸರಕಾರ 14 ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿದೆ.

ಅನಾರೋಗ್ಯ ಪೀಡಿತರಿಗೆ ನಿರ್ಬಂಧ
ಜ್ವರ, ಕೆಮ್ಮು, ನೆಗಡಿ, ಉಸಿರಾಟ ಸಮಸ್ಯೆ ಸೇರಿದಂತೆ ಆರೋಗ್ಯ ಸಮಸ್ಯೆಯಿರುವ ಗ್ರಾಹಕರಿಗೆ ಸೆಲೂನ್ ಮಾಲೀಕರು ಕಡ್ಡಾಯವಾಗಿ ನಿರ್ಬಂಧ ಹೇರಲೇ ಬೇಕು.
ಗ್ರಾಹಕರಿಗೆ ಮಾಸ್ಕ್ ಕಡ್ಡಾಯ
ಕೊರೊನಾ ಸೋಂಕು ಹರಡದಂತೆ ತಡೆಯವ ನಿಟ್ಟಿನಲ್ಲಿ ಪ್ರತೀಯೊಬ್ಬರು ಕೂಡ ಮಾಸ್ಕ್ ಧರಿಸಿರಲೇ ಬೇಕು. ಮಾಸ್ಕ್ ಹಾಕದೇ ಬರುವ ಗ್ರಾಹಕರ ಪ್ರವೇಶಕ್ಕೆ ಅನುಮತಿ ನೀಡುವಂತಿಲ್ಲ.

ಕ್ಷೌರಿಕರಿಗೆ ಗ್ಲೌಸ್, ಏಪ್ರನ್, ಮಾಸ್ಕ್
ಕೇವಲ ಗ್ರಾಹಕರಿಗೆ ಮಾತ್ರವಲ್ಲ ಕ್ಷೌರಿಕರು ಕೂಡ ಹೇರ್ ಕಟ್ ಮಾಡುವಾಗ ಕಡ್ಡಾಯವಾಗಿ ಎರಡೂ ಕೈಗಳಿಗೆ ಗ್ಲೌಸ್, ತಲೆಗೆ ಟೋಪಿ, ಏಪ್ರನ್ ಹಾಗೂ ಮಾಸ್ಕ್ ಧರಿಸಿರಲೇಬೇಕು.
ಸ್ಯಾಲಿಟೈಸ್ ಕಡ್ಡಾಯ
ಪ್ರತೀಯೊಂದು ಸೆಲೂನ್ ಮುಂಭಾಗದಲ್ಲಿ ಸ್ಯಾನಿಟೈಸರ್ ಇಟ್ಟಿರಬೇಕು. ಹೇರ್ ಕಟ್ ಮಾಡಿದ ಸಿಬ್ಬಂದಿ ಪ್ರತೀ ಸಲವೂ ಕೈಗಳನ್ನು ಸ್ಯಾನಿಟೈಸ್ ಮಾಡಬೇಕು.
ಹೊಸ ಟವಲ್ ಬಳಕೆ
ಸೆಲೂನ್ ಗೆ ಬರುವ ಪ್ರತಿ ಗ್ರಾಹಕನಿಗೂ ಬೇರೆಯದೇ ಟವೆಲ್/ಪೇಪರ್ ಶೀಟ್ ಬಳಕೆ ಮಾಡಬೇಕು. ಒಬ್ಬ ಗ್ರಾಹಕನಿಗೆ ಹೊದಿಸಿರುವ ಟವೆಲ್ ಮತ್ತೊಬ್ಬ ಗ್ರಾಹಕರಿಗೆ ಬಳಕೆ ಮಾಡುವುದನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ.

ಎರಡು ಸೆಟ್ ಪರಿಕರ ಕಡ್ಡಾಯ
ಗ್ರಾಹಕರಿಗೆ ಸೋಂಕು ಹರಡದಂತೆ ತಡೆಯುವ ನಿಟ್ಟಿನಲ್ಲಿ ಪ್ರತೀ ಸೆಲೂನ್ ಗಳಲ್ಲಿಯೂ ಎರಡು ಸೆಟ್ ಹೇರ್ ಕಟ್ಟಿಂಗ್ ಪರಿಕರ ಹಾಗೂ ಶೇವಿಂಗ್ ಸೆಟ್ ಗಳನ್ನು ಇಟ್ಟುಕೊಂಡಿರಲೇ ಬೇಕು. ಒಬ್ಬ ಗ್ರಾಹಕನಿಗೆ ಬಳಕೆ ಮಾಡಿದ ಪರಿಕರಗಳನ್ನು ಕನಿಷ್ಠ 30 ನಿಮಿಷಗಳ ಸ್ಯಾನಿಟೈಸ್ ಮಾಡಿ ಬಳಕೆ ಮಾಡಬಹುದಾಗಿದೆ.
ಗ್ರಾಹಕರಿಗೆ ಟೋಕನ್ ವ್ಯವಸ್ಥೆ
ಅಂಗಡಿಗಳಲ್ಲಿ ಗ್ರಾಹಕರಿಂದಾಗಿ ಜನದಟ್ಟಣೆಯಾಗುವುದರಿಂದ ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ಕಷ್ಟಸಾಧ್ಯವಾಗಲಿದೆ. ಈ ಹಿನ್ನೆಲೆಯಲ್ಲಿ ಸೆಲೂನ್ ಮಾಲೀಕರು ಕಡ್ಡಾಯವಾಗಿ ಟೋಕಲ್ ವ್ಯವಸ್ಥೆಯನ್ನು ಜಾರಿಗೊಳಿಸಬೇಕಿದೆ. ಅಂಗಡಿಗಳಲ್ಲಿ ಗ್ರಾಹಕರು ಹೆಚ್ಚಾಗಿ ಇರದಂತೆ ನೋಡುವ ನಿಟ್ಟಿನಲ್ಲಿ ಮುಂಗಡ ಬುಕ್ಕಿಂಗ್ ವ್ಯವಸ್ಥೆಯನ್ನು ಅಳವಡಿಸಿಕೊಳ್ಳಬೇಕು.

ಒಂದು ಮೀಟರ್ ಅಂತರವಿರಲಿ
ಸೆಲೂನ್ ಗಳಲ್ಲಿ ಕಡ್ಡಾಯವಾಗಿ ಸಾಮಾಜಿಕ ಅಂತರ ಪಾಲನೆ ಮಾಡಲೇ ಬೇಕು. ಪ್ರತೀ ಗ್ರಾಹಕರ ಮಧ್ಯದಲ್ಲಿ ಕನಿಷ್ಟ 1 ಮೀಟರ್ ಅಂತರವನ್ನು ಕಾಪಾಡಲೇ ಬೇಕಿದೆ.
ತ್ಯಾಜ್ಯವಿಲೇವಾರಿಯಲ್ಲಿ ಎಚ್ಚರಿಕೆ
ಕಟ್ಟಿಂಗ್ ಹಾಗೂ ಶೇವಿಂಗ್ ಗೆ ಬಳಕೆ ಮಾಡಿರುವ ಬ್ಲೇಡ್ ಹಾಗೂ ರೇಜರ್ ಸೇರಿದಂತೆ ಇತ್ಯಾದಿ ಚೂಪಾದ ತ್ಯಾಜ್ಯಗಳನ್ನು ಶೇ.1ರ ಸೋಡಿಯಂ ಹೈಪೋಕ್ಲೊರೈಟ್ ದ್ರಾವಣದೊಂದಿಗೆ ಒಡೆದು ಹೋಗದ, ಸೋರಿಕೆಯಾಗದ ಬಿಳಿ ಕಂಟೇನರ್ ನಲ್ಲಿ ಸಂಗ್ರಹಿಸಬೇಕು. ಅಲ್ಲದೇ ಕಂಟೇನರ್ ನ 3/4ರಷ್ಟು ಭಾಗ ತುಂಬಿದ ಬಳಿಕ ಬಯೋಮೆಡಿಕಲ್ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಕಡ್ಡಾಯವಾಗಿ ಒಪ್ಪಿಸಬೇಕು.

ದ್ವಾರದಲ್ಲಿ ಶಿಷ್ಟಾಚಾರದ ಪೋಸ್ಟರ್ ಕಡ್ಡಾಯ
ಪ್ರತೀ ಸೆಲೂನ್ ನ ಪ್ರವೇಶ ದ್ವಾರದಲ್ಲಿ ಕೆಮ್ಮು ಮತ್ತು ಸಾಮಾಜಿಕ ಅಂತರದ ಬಗೆಗಿನ ಶಿಷ್ಟಾಚಾರಗಳಿಗೆ ಸಂಬಂಧಿಸಿದ ಪೋಸ್ಟರ್ ಅಂಟಿಸಬೇಕು. ಕೊರೊನಾ ಸೋಂಕಿನ ಕುರಿತು ಗ್ರಾಹಕರಿಗೆ ಅರಿವು ಮೂಡಿಸುವ ಕಾರ್ಯವನ್ನು ಮಾಡಲೇ ಬೇಕು.
ಕೊರೊನಾ ಸೋಂಕಿತರ ಬಗ್ಗೆ ಮಾಹಿತಿ ಕಡ್ಡಾಯ
ಮಾಸ್ಕ್ ಮತ್ತು ಕೆಮ್ಮಿಗೆ ಸಂಬಂಧಿಸಿದ ಶಿಷ್ಟಾಚಾರ ಬಗ್ಗೆ ಸೆಲೂನ್ ನಲ್ಲಿರುವ ಸಿಬ್ಬಂದಿ ಮತ್ತು ಸಹಾಯಕರಿಗೆ ಮಾರ್ಗದರ್ಶನ ನೀಡಬೇಕು. ಯಾರಿಗಾರೂ ಕೋವಿಡ್ 19ಗೆ ಸಂಬಂಧಿಸಿದ ರೋಗ ಲಕ್ಷಣಗzvxbxc

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular