ನವದೆಹಲಿ : ವಿಶ್ವವನ್ನೇ ಆತಂಕ್ಕೀಡು ಮಾಡಿರೋ ಕೊರೊನಾ ವೈರಸ್ ಭಿತಿ ಇದೀಗ ದೇಶವನ್ನು ಕಾಡುತ್ತಿದೆ. ಕೊರೊನಾ ವೈರಸ್ ಕುರಿತು ಯಾವುದೇ ವದಂತಿಗಳಿಗೆ ಕಿವಿಗೊಡಬೇಡಿ ಅಂತಾ ಪ್ರಧಾನಿ ನರೇಂದ್ರ ಮೋದಿ ಜನರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಕೊರೊನಾ ವೈರಸ್ ಕುರಿತು ಸಾಕಷ್ಟು ವದಂತಿಗಳು ಹರಡುತ್ತಿದೆ. ಕೊರೊನಾ ಹೆಚ್ಚುತ್ತಿರೋ ಹಿನ್ನೆಲೆಯಲ್ಲಿ ಸ್ವಚ್ಚತೆಗೆ ಹೆಚ್ಚಿನ ಆದ್ಯತೆಯನ್ನು ನೀಡಿ, ಹೊರಗಡೆ ಹೋಗುವಾಗ ಕೈಚೀಲ ಮಾಸ್ಕ್ ಧರಿಸಿ, ಆದರೆ ಯಾವುದೇ ಕಾರಣಕ್ಕೂ ಕೈ ಕುಲುಕದೆ ಭಾರತೀಯ ಸಂಸ್ಕೃತಿಯಂತೆ ಕೈ ಮುಗಿದು ನಮಸ್ಕರಿಸಿ ಎಂದಿದ್ದಾರೆ.

ಇನ್ನು ಆಹಾರ ಸೇವನೆಯ ಕುರಿತು ಒಂದೊಂದು ಮಾತನಾಡುತ್ತಿದ್ದಾರೆ. ಆದರೆ ಕೊರೊನಾ ವೈರಸ್ ಕುರಿತು ಯಾರೂ ಆತಂಕ ಪಡುವ ಅಗತ್ಯವಿಲ್ಲ. ಆದರೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸಿ ಎಂದಿದ್ದಾರೆ. ನಿಮಗೆ ಕೊರೊನಾ ವೈರಸ್ ಕುರಿತು ಸಂದೇಹ ಸಂಶಯಗಳಿದ್ದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ. ತಪ್ಪದೇ ವೈದ್ಯರ ಸಲಹೆಯನ್ನು ಪಾಲಿಸಿ ಎಂದಿದ್ದಾರೆ.