ನವದೆಹಲಿ : ಕೊರೊನಾ ವೈರಸ್ ಹಿನ್ನೆಲೆಯಲ್ಲಿ ದೇಶದಾದ್ಯಂತ ಜಾರಿಯಲ್ಲಿರುವ ಲಾಕ್ ಡೌನ್ ಹಿನ್ನೆಲೆಯಲ್ಲಿ ಸ್ವಾವಲಂಭಿ ಭಾರತದ ಉದ್ದೇಶ ಈಡೇರಿಸಲು ಪ್ರಧಾನಿ ನರೇಂದ್ರ ಮೋದಿ 2020ಕ್ಕೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ.

ಕೊರೊಲಾ ಲಾಕ್ ಡೌನ್ ಹಿನ್ನೆಲೆಯಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಲಾಕ್ ಡೌನ್ ಹಿನ್ನೆಲೆಯಲ್ಲಿ ಘೋಷಿಸಲಾಗಿರುವ ಪ್ಯಾಕೇಜ್ ಕಾರ್ಮಿಕರು, ರೈತರು, ಅತೀಸಣ್ಣ, ಸಣ್ಣ, ಮದ್ಯಮ ವರ್ಗದ ಉದ್ದಿಮೆದಾರರಿಗೆ ಸಹಕಾರಿಯಾಗಲಿದೆ. ತೆರಿಗೆ ಕಟ್ಟುವವರಿಗಾಗಿಯೇ ಈ ಪ್ಯಾಕೇಜ್ ಜಾರಿಗೊಳಿಸಲಾಗಿದೆ. ವಿತ್ತ ಸಚಿವರು ಪ್ರತಿ ನಿತ್ಯ ಯೋಜನೆಯ ವಿವರಣೆಯನ್ನು ನೀಡಲಿದ್ದಾರೆ. ನಾಳೆಯಿಂದ ಕೆಲವು ದಿನಗಳ ವರೆಗೆ ಯೋಜನೆಯ ಮಾಹಿತಿ ಲಭ್ಯವಾಗಲಿದೆ. ತೆರಿಗೆ ಕಟ್ಟುವವರಿಗಾಗಿಯೇ ಈ ವಿಶೇಷ ಪ್ಯಾಕೇಜ್ ಜಾರಿಗೊಳಿಸಲಾಗುತ್ತಿದೆ. ಆಧಾರ್, ಮೊಬೈಲ್, ಜನಧನ್ ಖಾತೆ ಬಳಸಿಕೊಂಡು ಯೋಜನೆ ರೂಪಿಸಲಾಗಿದೆ. ಹೊಸ ಬಂಡವಾಳ ಹರಿದು ಬರಲಿದ್ದು, ಮೇಕ್ ಇನ್ ಇಂಡಿಯಾ ಯೋಜನೆ ಸಾಕಾರವಾಗಲಿದೆ ಎಂದಿದ್ದಾರೆ.

ಒಂದು ವೈರಸ್ ಇಡೀ ಜಗತ್ತನ್ನೇ ಧರೆಶಾಹಿಯನ್ನಾಗಿಸಿದೆ. ಇದು ಮನುಕುಲದ ಕಲ್ಪನೆಗೆ ಮೀರಿದ್ದಾಗಿದೆ. ವಿಶ್ವದಾದ್ಯಂತ 42 ಲಕ್ಷಕ್ಕೂ ಅಧಿಕ ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ. 3.25 ಲಕ್ಷ ಜನರು ಸೋಂಕಿನಿಂದ ಮೃತಪಟ್ಟಿದ್ದಾರೆ. ಮೃತ ಕುಟುಂಬಗಳಿಗೆ ಸಾಂತ್ವಾನ ಹೇಳಿದ್ದಾರೆ. ವೈರಸ್ ಎದುರು ಸೋಲುವುದು ಮನುಸ್ಯನಿಗೆ ಒಪ್ಪಿತವಲ್ಲ. ಕೊರೊನಾ ಆರಂಭವಾಗಿ 4 ತಿಂಗಳು ಕಳೆದಿದೆ. ಹೀಗಾಗಿ ಸಂಪೂರ್ಣ ಎಚ್ಚರಿಕೆಯಿಂದ ಯುದ್ದ ನಿಯಮ ಪಾಲಿಸಬೇಕು ಎಂದಿದ್ದಾರೆ.

ಭಾರತ ಒಂದು ರಾಷ್ಟ್ರವಾಗಿ ಪ್ರಮುಖ ಘಟ್ಟಕ್ಕೆ ಬಂದು ನಿಂತಿದ್ದೇವೆ. ಭಾರತ ಸಂಕಟವನ್ನು ಅವಕಾಶವನ್ನಾಗಿ ಬದಲಾಯಿಸಿಕೊಂಡಿದೆ. ಸ್ವಾವಲಂಭಿ ಭಾರತವಾಗಿದೆ ಅನ್ನೋದೆ ನಮಗೆ ಪಾಠ. ವಿಶ್ವದ ಎದುರು ಭಾರತದ ಮೂಲಭೂತ ಚಿಂತನೆ ಬದಲಾಗಿದೆ. ಭಾರತದ ಚಿಂತನೆ ಇಡೀ ವಿಶ್ವದ ಒಳಿತಿನ ಚಿಂತನೆಯಾಗಿದೆ. ಇಡೀ ಜಗತ್ತಿಗೆ ಜಯವಾಗಲಿ ಅನ್ನೋದು ನಮ್ಮ ಸಂಸ್ಕೃತಿ. ಭೂಮಿಯನ್ನು ತಾಯಿಯೆಂದು ಕರೆಯುವುದು ಭಾರತ ಮಾತ್ರ. ಭಾರತದಿಂದ ವಿಶ್ವ ಹಿತ ಕಾಪಾಡಬೇಕಿದೆ ಎಂದರು.

ಕೊರೊನಾ ವಿರುದ್ದ ಭಾರತ ಸಮರ್ಥವಾಗಿ ಹೋರಾಟ ನಡೆಸುತ್ತಿದ್ದು, ಭಾರತದಲ್ಲಿ ನಿತ್ಯವೂ 2 ಲಕ್ಷ ಪಿಪಿಇ ಕಿಟ್ ತಯಾರಾಗುತ್ತಿದೆ. ಅಲ್ಲದೇ ಭಾರತದ ಔಷಧಿಗಳು ವಿಶ್ವದ ಹಲವು ರಾಷ್ಟ್ರಗಳನ್ನು ತಲುಪಿವೆ. ಭಾರತದ ಮೇಲೆ ಜಗತ್ತಿನ ವಿಶ್ವಾಸ ಹೆಚ್ಚಿದೆ. ಜಗತ್ತಿಗೆ ದೊಡ್ಡ ಕೊಡುಗೆ ಸಿಗಲಿದೆ ಅನ್ನೋದು ಖಚಿತ.