ಭಾನುವಾರ, ಏಪ್ರಿಲ್ 27, 2025
HomeBreakingOmicron BF.7:ಕೋವಿಡ್ ಲಸಿಕೆ ಪಡೆದಿದ್ದರೂ ಎಚ್ಚರ ಅಗತ್ಯ; ಇಲ್ಲವಾದ್ರೆ ಬಿಎಫ್.7 ಗೆ ಬಲಿಯಾಗ್ತೀರಾ..!!

Omicron BF.7:ಕೋವಿಡ್ ಲಸಿಕೆ ಪಡೆದಿದ್ದರೂ ಎಚ್ಚರ ಅಗತ್ಯ; ಇಲ್ಲವಾದ್ರೆ ಬಿಎಫ್.7 ಗೆ ಬಲಿಯಾಗ್ತೀರಾ..!!

- Advertisement -

(Omicron BF.7)ಕೊರೊನದ ಅಲೆಯಿಂದ ಜನರು ಚೇತರಿಸಿಕೊಳ್ಳುತ್ತಾ, ದೇಶ ಯಥಾಸ್ಥಿತಿಗೆ ಬರುತ್ತಿದೆ ಅನ್ನುವಷ್ಟರಲ್ಲಿ ಓಮಿಕ್ರಾನ್ ಬಿಎಫ್.7 ಎಲ್ಲರನ್ನೂ ಕಾಡುತ್ತಿದೆ. ಈಗಾಗಲೇ ಇದಕ್ಕೆ ಮೂಗಿಗೆ ಹಾಕುವಂತಹ ಲಸಿಕೆಯನ್ನು ವಿಜ್ಞಾನಿಗಳು ಕಂಡು ಹಿಡಿದಿದ್ದು, ಇದನ್ನು ತೆಗೆದುಕೊಳ್ಳಿ ಮತ್ತು ಜೊತೆಗೆ ಬೂಸ್ಟರ್ ಡೋಸ್‌ಗಳನ್ನು ಹಾಕಿಸಿಕೊಳ್ಳಿ. ಹೊಸ ತಳಿ ಓಮಿಕ್ರಾನ್ ಬಿಎಫ್.7 ಔಷಧೀಯನ್ನು ತೆಗೆದುಕೊಂಡು ಇದರೊಂದಿಗೆ ನೀವು ಮುನ್ನಚ್ಚರಿಕೆ ಕ್ರಮವನ್ನು ಪಾಲಿಸುವುದು ಅಗತ್ಯ.

(Omicron BF.7)ಲಸಿಕೆ ಹಾಕಿಸಿಕೊಳ್ಳುವುದರಿಂದ ನೀವು ಈಗ ಬಂದಿರುವ ಹೊಸ ತಳಿಯಿಂದ ಸುರಕ್ಷಿತವಾಗಿ ಇರುತ್ತೀರಾ ಎಂದರ್ಥವಲ್ಲ, ಇದಕ್ಕೆ ಬೇಕಾದ ಸುರಕ್ಷತೆಯ ಕ್ರಮವನ್ನು ತೆಗೆದುಕೊಳ್ಳುವುದು ಮುಖ್ಯ. ಲಸಿಕೆಯನ್ನು ಹಾಕಿಸುವುದರ ಜೊತೆಗೆ ಕೋವಿಡ್‌ ನಿಯಮವನ್ನು ಪಾಲನೆ ಮಾಡುವ ಮೂಲಕ ಹೊಸ ತಳಿಯಿಂದ ದೂರವಿರಿ. ಇದರ ಜೊತೆಗೆ ನೀವು ಇರುವ ಜಾಗದ ನೈರ್ಮಲ್ಯತೆಯನ್ನು ಕಾಪಾಡಿಕೊಳ್ಳಿ.ಲಸಿಕೆ ಹಾಕಿಸಿದರು ಕೂಡ ಓಮಿಕ್ರಾನ್ ಬಿಎಫ್.7 ನಿಮ್ಮನ್ನು ಕಾಡಬಹುದು. ಹೆದರಬೇಕಿಲ್ಲ ನಿಮ್ಮ ದೇಹದಲ್ಲಿ ಈ ಕೆಳಗೆ ನೀಡಲಾದ ಮಾಹಿತಿಯಲ್ಲಿರುವಂತೆ ಲಕ್ಷಣಗಳು ಕಂಡು ಬಂದರೆ ಕೂಡಲೇ ವೈದ್ಯರನ್ನು ಸಂಪರ್ಕಿಸಿ.

ಲಸಿಕೆ ಹಾಕಿದವರಲ್ಲಿ ಓಮಿಕ್ರಾನ್ ಬಿಎಫ್.7 ಲಕ್ಷಣಗಳು ಹೇಗೆ ಕಂಡುಬರುತ್ತವೆ?

*ಗಂಟಲು ನೋವು, ಶೀತ, ಮೂಗುಕಟ್ಟಿಕೊಳ್ಳುತ್ತದೆ , ಕೆಮ್ಮು ಮತ್ತು ತಲೆನೋವು ಕಾಣಿಸಿಕೊಳ್ಳುತ್ತದೆ.
*ಜ್ವರ ಕಾಣಿಸಿಕೊಳ್ಳುತ್ತದೆ.
*ನಿರಂತರ ಕೆಮ್ಮು ಕಾಣಿಸಿಕೊಳ್ಳುತ್ತದೆ.

ಇದನ್ನೂ ಓದಿ:Children Eat Soil:ನಿಮ್ಮ ಮಕ್ಕಳಿಗೆ ಮಣ್ಣು ತಿನ್ನುವ ಹವ್ಯಾಸವೇ ? ಹಾಗಿದ್ದರೆ ಇದನ್ನು ಹೇಗೆ ಬಿಡಿಸುವುದು

ಇದನ್ನೂ ಓದಿ:Raw Onion Benefits : ಹಸಿ ಈರುಳ್ಳಿ ತಿನ್ನುವುದರಿಂದಲೂ ಕಡಿಮೆ ಆಗುತ್ತೆ ಕೊಲೆಸ್ಟ್ರಾಲ್‌; ಹೇಗೆ ಗೊತ್ತಾ…

ಇದನ್ನೂ ಓದಿ:Healthy Food :ಪದೇ ಪದೇ ಆಯಾಸವಾಗುತ್ತಿದೆಯೇ ? ಹಾಗಿದ್ರೆ ಈ ಆಹಾರ ಸೇವನೆ ಮಾಡಿ

ಲಸಿಕೆ ಹಾಕಿಸಿಕೊಂಡರು ಕೂಡ ಇಂತಹ ಗುಣಲಕ್ಷಣಗಳು ಕಂಡುಬಂದರೆ ತಕ್ಷಣ ವೈದ್ಯರ ಬಳಿ ತೆರಳಿ ಪರೀಕ್ಷೆಯನ್ನು ಮಾಡಿಸಿಕೊಳ್ಳಿ ಇದರಿಂದ ನಿಮ್ಮ ಸುತ್ತಮುತ್ತಲಿನ ಜನರು ಸುರಕ್ಷಿತವಾಗಿರುತ್ತಾರೆ. ಲಸಿಕೆಯನ್ನು ಪಡೆಯುವುದರಿಂದ ಒಂದು ಕಾಲದವರೆಗೆ ನಿಮ್ಮನ್ನು ಸುರಕ್ಷಿತವಾಗಿರಿಸುತ್ತದೆ. ಹಾಗಾಗಿ ಆದಷ್ಟು ಮಾಸ್ಕ್‌ ಧರಿಸುವುದು ಮತ್ತು ಸಾರ್ವಜನಿಕ ಸ್ಥಳಗಳಲ್ಲಿ ಅಂತರ ಕಾಯ್ದುಕೊಳ್ಳುವುದರಿಂದ ನಿಮ್ಮನ್ನು ಹೊಸ ತಳಿ ಓಮಿಕ್ರಾನ್ ಬಿಎಫ್.7 ತಪ್ಪಿಸಿಕೊಳ್ಳಬಹುದು.

ಇದನ್ನೂ ಓದಿ:Pistachios Health Tips:ಪ್ರತಿದಿನ ನಾಲ್ಕು ಪಿಸ್ತಾ ತಿನ್ನುವುದರಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ ?

Omicron BF.7 Even if you get the covid vaccine, you need to be careful; Otherwise you will be a victim of BF.7

RELATED ARTICLES

Most Popular