ಮಂಗಳೂರು : ಕೊರೊನಾ ವೈರಸ್ ಸೋಂಕಿನಿಂದಾಗಿ ಜನರು ಆರ್ಥಿಕವಾಗಿ ಜರ್ಜರಿತರಾಗಿದ್ದಾರೆ. ಈ ನಡುವಲ್ಲೇ ರಾಜ್ಯದಲ್ಲಿನ ಶಾಲೆಗಳಲ್ಲಿ ಆನ್ ಲೈನ್ ಕ್ಲಾಸ್ ಶುರುವಾಗಿದೆ. ಇದ್ರಿಂದಾಗಿ ಪೋಷಕರು ಸಾಲಕ್ಕಾಗಿ ಬ್ಯಾಂಕುಗಳಿಗೆ ಅರ್ಜಿ ಸಲ್ಲಿಸಿದ್ದಾರೆ.

ಮಂಗಳೂರಿನ ಬಹುತೇಕ ಖಾಸಗಿ ಶಾಲೆಗಳಲ್ಲಿ ಆನ್ ಲೈನ್ ಕ್ಲಾಸ್ ಆರಂಭಗೊಂಡಿದೆ. ಶೇ.40 ರಷ್ಟು ಪೋಷಕರ ಬಳಿಯಲ್ಲಿ ಸ್ಮಾರ್ಟ್ ಪೋನ್ ಇಲ್ಲ. ಇನ್ನೊಂದೆಡೆ ಕೊರೊನಾ ಹೊಡೆತಕ್ಕೆ ಮೊಬೈಲ್ ಪೋನ್, ಸ್ಮಾರ್ಟ್ ಪೋನ್, ಲ್ಯಾಪ್ ಟಾಪ್ ಕೊಳ್ಳಲು ಕೂಡ ಹಣವಿಲ್ಲ. ಹೀಗಾಗಿ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಪೋಷಕರು ಬ್ಯಾಂಕುಗಳಲ್ಲಿ ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದಾರೆ.

ರಾಜ್ಯ ಸರಕಾರ ಆನ್ ಲೈನ್ ಕ್ಲಾಸ್ ಆರಂಭಿಸಲು ಅನುಮತಿ ನೀಡುತ್ತಿದ್ದಂತೆಯೇ ಪೋಷಕರು ಆಕ್ರೋಶ ವ್ಯಕ್ತಪಡಿಸಿದ್ದರು. ಹೀಗಾಗಿ ರಾಜ್ಯದಲ್ಲಿ 5ನೇ ತರಗತಿ ವರೆಗಿನ ಮಕ್ಕಳಿಗೆ ಆನ್ ಲೈನ್ ಕ್ಲಾಸ್ ಬಂದ್ ಆಗಿತ್ತು. ಆದ್ರೀಗ ರಾಜ್ಯ ಸರಕಾರ ನೇಮಿಸಿದ ತಜ್ಞರ ಸಮಿತಿ ಆನ್ ಲೈನ್ ಕ್ಲಾಸ್ ನಡೆಸುವ ಕುರಿತು ವರದಿಯನ್ನು ಸಲ್ಲಿಸಿದೆ. ಈ ಹಿನ್ನೆಲೆಯಲ್ಲಿ ಬೇರೆ ದಾರಿ ಕಾಣದೆ ಪೋಷಕರು ಸಾಲದ ಮೊರೆ ಹೋಗಿದ್ದಾರೆ.

ಈ ನಡುವಲ್ಲೇ ಇಂದು ಹೈಕೋರ್ಟ್ ಆನ್ ಲೈನ್ ಕ್ಲಾಸ್ ಕುರಿತು ಮಹತ್ವದ ಆದೇಶವನ್ನು ಹೊರಡಿಸಲಿದ್ದು, ನ್ಯಾಯಾಲಯದ ತೀರ್ಪು ಕುತೂಹಲವನ್ನು ಮೂಡಿಸಿದೆ.