ನವದೆಹಲಿ : ದೇಶದಾದ್ಯಂತ ಕೊರೊನಾ ವೈರಸ್ ಸೋಂಕಿನ ಪ್ರಮಾಣ ಕಡಿಮೆಯಾಗುತ್ತಿದ್ದರೂ ಕೂಡ ಅಪಾಯ ಕಡಿಮೆಯಾಗಿಲ್ಲ. ಸಾಲು ಸಾಲು ಹಬ್ಬ ಬಂದಿದೆಯೆಂದು ಯಾರೂ ಮೈ ಮರೆಯಬಾರದು ಎಂದು ಪ್ರಧಾನಿ ನರೇಂದ್ರ ಮೋದಿ ದೇಶದ ಜನರಲ್ಲಿ ಮನವಿ ಮಾಡಿದ್ದಾರೆ.

ದೇಶಶವನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ವಿಶ್ವದ ಹಲವು ರಾಷ್ಟ್ರಗಳಲ್ಲಿ ಲಾಕ್ ಡೌನ್ ಅಂತ್ಯಗೊಂಡಿ ದ್ದರೂ ಕೂಡ ವೈರಸ್ ಆರ್ಭಟ ನಿಂತಿಲ್ಲ. ಹೀಗಾಗಿ ಜನರು ಎಚ್ಚರಿಕೆಯಿಂದ ಇರಬೇಕು. ಕೊರೊನಾ ವೈರಸ್ ಸೋಂಕಿಗೆ ಲಸಿಕೆಗೆ ಬರುವವರು ಜನರು ನಿಯಮಗಳನ್ನು ತಪ್ಪದೇ ಪಾಲನೆ ಮಾಡಬೇಕು ಎಂದು ಮನವಿ ಮಾಡಿದ್ದಾರೆ.

ವೈದ್ಯರು, ನರ್ಸ್ಗಳು, ಸ್ವಚ್ಛತಾ ಕರ್ಮಿಗಳು ಕೊರೋನಾ ವಿರುದ್ಧ ನಿಸ್ವಾರ್ಥತೆಯಿಂದ ಹೋರಾಡಿದ್ದಾರೆ. ಅವರೆಲ್ಲರ ಶ್ರಮದ ಫಲವಾಗಿ ಇಂದು ವೈರಸ್ ಅನ್ನು ತಕ್ಕ ಮಟ್ಟಿಗೆ ಕಟ್ಟಿಹಾಕಿದ್ದೇವೆ. ಲಸಿಕೆ ಬರುವವರೆಗೂ ಜನರು ಕೋವಿಡ್ ನಿಯಮಗಳನ್ನ ಪಾಲಿಸಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಸಂದೇಶ ನೀಡಿದರು.

ನಾವು ವೈರಸ್ ವಿರುದ್ಧ ಸಮರ್ಥವಾಗಿ ಹೋರಾಡಿದ್ದೇವೆ. ನಮ್ಮ ಚೇತರಿಕೆ ಪ್ರಮಾಣ ಉತ್ತಮವಾಗಿದೆ. ಸಾವಿನ ಸಂಖ್ಯೆ ಕಡಿಮೆ ಇದೆ. ಬ್ರೆಜಿಲ್ ಮತ್ತು ಅಮೆರಿಕಕ್ಕಿಂತ ನಮ್ಮ ಪ್ರಕರಣಗಳ ಏರಿಕೆ ಸಂಖ್ಯೆ ಕಡಿಮೆ ಇದೆ. ಆದರೂ ಕೂಡ ನಾವು ಎಚ್ಚರಿಕೆ ತಪ್ಪಬಾರದು ಎಂದಿದ್ದಾರೆ.