ಚಂಡೀಗರ್ : ದೇಶದಾದ್ಯಂತ ಲಾಕ್ ಡೌನ್ ಜಾರಿಯಲ್ಲಿದೆ. ಕರ್ಪ್ಯೂ ಹಿನ್ನೆಲೆಯಲ್ಲಿ ಜನರು ಮನೆಯಿಂದ ಹೊರಗೆ ಬರಬೇಕಾದ್ರೆ ಪಾಸ್ ಕಡ್ಡಾಯ. ಆದ್ರಿಲ್ಲಿ ಪಾಸ್ ಕೇಳಿದ ತಪ್ಪಿಗೆ ದುಷ್ಕರ್ಮಿಗಳು ಪೊಲೀಸ್ ಅಧಿಕಾರಿಯ ಕೈಯನ್ನೇ ಕತ್ತರಿಸಿದ್ದಾರೆ.

ಅಷ್ಟಕ್ಕೂ ಈ ಘಟನೆ ನಡೆದಿರೋ ಪಂಜಾಬ್ ನ ಪಟಿಯಾಲ ತರಕಾರಿ ಮಾರುಕಟ್ಟೆಯಲ್ಲಿದೆ. ಕೊರೊನಾ ವೈರಸ್ ಸೋಂಕು ಹರಡುವ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕಾ ಕ್ರಮವಾಗಿ ಲಾಕ್ ಡೌನ್ ಆದೇಶವನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತದೆ.

ಪಟಿಯಾಲಾ ತರಕಾರಿ ಮಾರುಕಟ್ಟೆಯ ಬಳಿಯಲ್ಲಿಯೂ ಪೊಲೀಸರು ಬ್ಯಾರಿಕೇಡ್ ಇಟ್ಟು ರಸ್ತೆಯನ್ನು ಬಂದ್ ಮಾಡಿದ್ರು. ಈ ವೇಳೆಯಲ್ಲಿ ಶಸ್ತ್ರ ಸಜ್ಜಿತವಾಗಿ ಬಂದಿದ್ದ ನಿಹಾಂಕ್ ಗುಂಪೊಂದನ್ನು ಸಬ್ ಇನ್ ಸ್ಪೆಕ್ಟರ್ ಹರ್ಜಿತ್ ಸಿಂಗ್ ಅಡ್ಡಗಟ್ಟಿದ್ದಾರೆ. ಕರ್ಪ್ಯೂ ಪಾಸ್ ಕೇಳಿದ್ದಾರೆ.

ಇಷ್ಟಕ್ಕೆ ಸಿಟ್ಟಾದ ನಿಹಾಂಕ್ ಗುಂಪಿನ ದುಷ್ಕರ್ಮಿಗಳು ಹರ್ಜಿಂತ್ ಸಿಂಗ್ ಅವರ ಕೈಯನ್ನು ತಲವಾರಿನಿಂದ ಕತ್ತರಿಸಿ ಪರಾರಿಯಾಗಿದ್ದಾರೆ. ಘಟನೆ ಇದೀಗ ವಿಡಿಯೋದಲ್ಲಿ ಸೆರೆಯಾಗಿದ್ದು, ಆರೋಪಿಗಳು ಗುರುದ್ವಾರದಲ್ಲಿ ತಲೆಮರೆಯಿಸಿಕೊಂಡಿದ್ದಾರೆ. ಘಟನೆಯ ಹಿನ್ನೆಲೆಯಲ್ಲಿ ಪೊಲೀಸರು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.