ನವದೆಹಲಿ : ಅಕ್ಟೋಬರ್ ತಿಂಗಳು ಆರಂಭಗೊಳ್ಳುತ್ತಿದ್ದಂತೆಯೇ ಒಂದೆಡೆ ಬ್ಯಾಂಕಿಂಗ್ ವ್ಯವಹಾರಗಳಲ್ಲಿ ಭಾರೀ ಬದಲಾವಣೆಗಳನ್ನು ಮಾಡಲಾಗುತ್ತಿದೆ. ಇನ್ನೊಂದೆಡೆ ಒಂದೇ ದಿನಗಳಲ್ಲಿ ಸಾಲು ಸಾಲು ರಜೆಗಳು ಬರುತ್ತಿದ್ದು, ಅಕ್ಟೋಬರ್ ತಿಂಗಳಲ್ಲಿ ಬರೊಬ್ಬರಿ 14 ದಿನಗಳ ಕಾಲ ಬ್ಯಾಂಕಿಂಗ್ ಸೇವೆ ಬಂದ್ ಆಗಲಿದೆ.

ಭಾರತೀಯ ರಿಸರ್ವ್ ಬ್ಯಾಂಕ್ (ಆರ್ ಬಿಐ) ಬ್ಯಾಂಕುಗಳ ರಜೆಯ ದಿನಾಂಕವನ್ನು ಪ್ರಕಟಿಸಿದೆ. ಅದ್ರಲ್ಲೂ ಈ ಬಾರಿ ಅಕ್ಟೋಬರ್ ತಿಂಗಳ ಲ್ಲಿ ಬ್ಯಾಂಕುಗಳಿಗೆ ಅತೀ ಹೆಚ್ಚು ದಿನಗಳ ಕಾಲ ರಜೆ ಘೋಷಿಸಲಾಗಿದೆ. ಅಧಿಕ ವರ್ಷವಾಗಿರುವುದರಿಂದಾಗಿ ಬಹುತೇಕ ಹಬ್ಬಗಳು ಒಂದೇ ತಿಂಗಳಿನಲ್ಲಿ ಬಂದಿವೆ. ಗಾಂಧಿಜಯಂತಿಯಿಂದ ಆರಂಭಗೊಳ್ಳುವ ಅಕ್ಟೋಬರ್ ತಿಂಗಳ ರಜೆ ಅಂತ್ಯದ ವರೆಗೂ ಮುಂದುವರಿಯಲಿದೆ. ತಿಂಗಳಲ್ಲಿ ನಾಲ್ಕು ಭಾನುವಾರದ 2 ಶನಿವಾರದ ರಜೆಯ ಜೊತೆಗೆ ಬರೋಬ್ಬರಿ 8 ಸಾರ್ವತ್ರಿಕ ಹಾಗೂ ಸ್ಥಳೀಯ ರಜೆಗಳನ್ನು ಘೋಷಣೆ ಮಾಡಲಾಗಿದೆ.

ಬ್ಯಾಂಕಿಂಗ್ ವ್ಯವಹಾರವನ್ನು ಮಾಡುವವರು ರಜೆಯ ದಿನಗಳನ್ನು ಗಮನದಲ್ಲಿಟ್ಟುಕೊಂಡ್ರೆ ಬಹಳ ಒಳಿತು. ಹಾಗಾದ್ರೇ ಯಾವೆಲ್ಲ ದಿನ ರಜೆ ಇರಲಿದೆ ಅನ್ನೊಂದನ್ನು ನೋಡುವುದಾದ್ರೆ : ಅಕ್ಟೋಬರ್ 2 (ಗಾಂಧಿಜಯಂತಿ ), ಅಕ್ಟೋಬರ್ 4 ( ಭಾನುವಾರ ),ಅಕ್ಟೋಬರ್ 8 ( ಚೆಹಲುಮ್ – ಸ್ಥಳೀಯ ರಜಾ), ಅಕ್ಟೋಬರ್ 10 ( ಎರಡನೇ ಶನಿವಾರ), ಅಕ್ಟೋಬರ್ 11 ( ಭಾನುವಾರ), ಅಕ್ಟೋಬರ್ 17 ( ಸ್ಥಳೀಯರ ರಜೆ ), ಅಕ್ಟೋಬರ್ 18 ( ಭಾನುವಾರ), ಅಕ್ಟೋಬರ್ 23 (ದುರ್ಗಾ ಪೂಜೆ / ಮಹಾಸಪ್ತಮಿ ಸ್ಥಳೀಯ ರಜೆ).

ಅಕ್ಟೋಬರ್ 24 ( ಮಹಾಷ್ಠಮಿ / ಮಹಾನವಮಿ ಸ್ಥಳೀಯ ರಜಾ), ಅಕ್ಟೋಬರ್ 25 (ಭಾನುವಾರ), ಅಕ್ಟೋಬರ್ 26 ( ದುರ್ಗಾ ಪೂಜೆ (ವಿಜಯದಶಮಿ), ಅಕ್ಟೋಬರ್ 29 (ಪ್ರವಾದಿ ಮೊಹಮ್ಮದ್ ಜಯಂತಿ), ಅಕ್ಟೋಬರ್ 30 (ಈದ್-ಇ-ಮಿಲಾದ್), ಅಕ್ಟೋಬರ್ 31 ಅಕ್ಟೋಬರ್ (ಮಹರ್ಷಿ ವಾಲ್ಮೀಕಿ ಜಯಂತಿ).