ಸೋಮವಾರ, ಏಪ್ರಿಲ್ 28, 2025
HomeBreakingJames movie : ಅಪ್ಪು ಅಭಿಮಾನಿಗಳಿಗೆ ಸಿಕ್ತು ಸಿಹಿಸುದ್ದಿ: ಜನವರಿ 26ಕ್ಕೆ ಜೇಮ್ಸ್ ತಂಡ ಕೊಡ್ತಿದೆ...

James movie : ಅಪ್ಪು ಅಭಿಮಾನಿಗಳಿಗೆ ಸಿಕ್ತು ಸಿಹಿಸುದ್ದಿ: ಜನವರಿ 26ಕ್ಕೆ ಜೇಮ್ಸ್ ತಂಡ ಕೊಡ್ತಿದೆ ಸಪ್ರೈಸ್ ಗಿಫ್ಟ್

- Advertisement -

ಸ್ಯಾಂಡಲ್ ವುಡ್ ನ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ( Puneeth Rajkumar ) ಇನ್ನಿಲ್ಲವಾಗಿ ಎರಡು ತಿಂಗಳು ಕಳೆದಿದ್ದರೂ ಅಭಿಮಾನಿಗಳ ಮನಸ್ಸಿನ ಶೋಕ‌ಮಾತ್ರ ಕಡಿಮೆಯಾಗಿಲ್ಲ . ಸದ್ಯ ಪುನೀತ್ ನಟನೆಯ ಹಳೆಯ ಸಿನಿಮಾಗಳನ್ನೇ ನೋಡಿ ನೋಡಿ ಸಮಾಧಾನ ಪಡ್ತಿರೋ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದು ಕಾದಿದ್ದು, ಜೇಮ್ಸ್ ಚಿತ್ರತಂಡ (James movie) ಜನವರಿ 26 ರಂದು ಅಭಿಮಾನಿಗಳಿಗೆ ಸಪ್ರೈಸ್ ಗಿಫ್ಟ್ ನೀಡಲು ಮುಂದಾಗಿದೆ.

ಅಪ್ಪು ನಟನೆಯ ಕಟ್ಟಕಡೆಯ ಸಿನಿಮಾ ಜೇಮ್ಸ್. ಪುನೀತ್ ವಿಭಿನ್ನ ರೋಲ್ ನಲ್ಲಿ ಕಾಣಿಸಿಕೊಂಡಿದ್ದ ಈ ಸಿನಿಮಾ ಸಖತ್ ಕುತೂಹಲ ಮೂಡಿಸಿತ್ತು. ಆದರೆ ಸಿನಿಮಾ ಪೂರ್ಣ ಗೊಳ್ಳುವ ಮುನ್ನವೇ ಪುನೀತ್ ರಾಜ್ ಕುಮಾರ್ ಅಭಿಮಾನಿಗಳನ್ನು ಅಗಲಿ ಹೋದರು. ಆದರೆ ಈ ಸಿನಿಮಾವನ್ನು ಪುನೀತ್ ಧ್ವನಿಯಲ್ಲೇ ತೆರೆಗೆ ತರಲು ಸರ್ಕಸ್ ನಡೆಸಿರುವ ಜೇಮ್ಸ್ ಚಿತ್ರತಂಡ ಅದಕ್ಕಾಗಿ ಭರ್ಜರಿ ಸರ್ಕಸ್ ನಡೆಸಿದೆ. ಈಗಾಗಲೇ ಶೂಟಿಂಗ್ ಪೂರ್ತಿಗೊಳಿಸಿದ್ದ ಸಿನಿಮಾ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿತ್ತು. ಹೀಗಿರುವಾಗಲೇ ಪುನೀತ್ ದಿಢೀರ್ ನಿಧನರಾಗಿದ್ದು ಚಿತ್ರತಂಡಕ್ಕೂ ಶಾಕ್ ತಂದಿತ್ತು.

ಸಿನಿಮಾದಲ್ಲಿ ಪುನೀತ್ ರಾಜ್ ಕುಮಾರ್ ಪಾತ್ರಕ್ಕೆ ಧ್ವನಿ‌ ನೀಡೋದು ಯಾರು ಎಂಬ ಪ್ರಶ್ನೆ ಎಲ್ಲರನ್ನೂ ಕಾಡುತ್ತಿದೆ. ಈ ಪ್ರಶ್ನೆಗೆ ನಿರ್ದೇಶಕ ಚೇತನ್ ಉತ್ತರ ನೀಡಿದ್ದು ಸಿನಿಮಾವನ್ನು ಅಪ್ಪು ಧ್ವನಿಯಲ್ಲೇ ತೆರೆಗೆ ತರಲು ಯತ್ನಿಸುತ್ತಿದ್ದೇವೆ. ಶೂಟಿಂಗ್ ನಲ್ಲಿ ಪುನೀತ್ ಡೈಲಾಗ್ ಹೇಳಿದ್ದು ರೆಕಾರ್ಡ್ ಆಗಿರುತ್ತೆ. ಅದನ್ನೇ ಬಳಸಿಕೊಂಡು ಬೇಡದ ಶಬ್ದಗಳನ್ನು ಎಡಿಟ್ ಮಾಡಿ ಡಬ್ಬಿಂಗ್ ಗೆ ಬಳಸಿಕೊಳ್ಳುವ ಪ್ಲ್ಯಾನ್ ಇದೆ. ಒಂದೊಮ್ಮೆ ಇದಕ್ಕೆ ಟೆಕ್ನಾಲಜಿ ಸಪೋರ್ಟ್ ಮಾಡದೇ ಇದ್ದಲ್ಲಿ ನಟ ಶಿವರಾಜ್ ಕುಮಾರ್ ಧ್ವನಿಯಲ್ಲಿ ಅಪ್ಪು ಪಾತ್ರ ಮೂಡಿಬರಲಿದೆ ಎಂದು ಮಾಹಿತಿ ನೀಡಿದ್ದಾರೆ.

ಇನ್ನೂ ಚಿತ್ರತಂಡ ಅಪ್ಪು ಅಭಿಮಾನಿಗಳಿಗೊಂದು ಸುದ್ದಿ ನೀಡಿದೆ. ಇದೇ ತಿಂಗಳ 26 ರಂದು ಜೇಮ್ಸ್ ಚಿತ್ರದ ವಿಶಿಷ್ಟ ಪೋಸ್ಟರ್ ವೊಂದು ರಿಲೀಸ್ ಆಗಲಿದೆ. ಆ ಮೂಲಕ ಸಿನಿಮಾದ ಅಪ್ಡೇಟ್ ಮಾಹಿತಿ ನೀಡೋದು ಚಿತ್ರತಂಡದ ಉದ್ದೇಶ. ಜೇಮ್ಸ್ ಚಿತ್ರತಂಡ ನೀಡೀರೋ ಈ ಮಾಹಿತಿಯಿಂದ ಅಪ್ಪು ಅಭಿಮಾನಿಗಳು ಖುಷಿಯಾಗಿದ್ದಾರೆ. ಕಳೆದ ಎರಡು ತಿಂಗಳಿನಿಂದ ಅಪ್ಪು ಅಗಲಿಕೆಯ ದುಃಖದಲ್ಲೇ ಇರೋ ರಾಜ್ ಕುಮಾರ್ ನ ಅಭಿಮಾನಿಗಳಿಗೆ ಈ ಪೋಸ್ಟರ್ ರಿಲೀಸ್ ವಿಚಾರ ಕೊಂಚ ಸಮಾಧಾನ ತಂದಿದೆ.

ಎಲ್ಲ ಅಂದುಕೊಂಡಂತೆ ಆದರೇ 2022 ರ ಮಾರ್ಚ್ 17 ನೇ ತಾರೀಕು ಅಪ್ಪು ಅಭಿನಯದ ಕೊನೆ ಚಿತ್ರ ಜೇಮ್ಸ್ ತೆರೆಗೆ ಬರಲಿದೆ. ಇದಲ್ಲದೇ ಪುನೀತ್ ಸಿದ್ಧಪಡಿಸಿದ ಗಂಧದಗುಡಿ ಸಾಕ್ಷ್ಯಚಿತ್ರ ಹಾಗೂ ಪುನೀತ್ ಗೆಸ್ಟ್ ರೋಲ್ ನಲ್ಲಿ ನಟಿಸಿದ ಲಕ್ಕಿಮ್ಯಾನ್ ಸಿನಿಮಾ ಕೂಡ ಈ ವರ್ಷವೇ ತೆರೆಗೆ ಬರೋ ಸಾಧ್ಯತೆ ಇದೆ.

ಇದನ್ನೂ ಓದಿ : ಕ್ಯಾಮರಾ ಎದುರೇ ಟವೆಲ್ ಕಿತ್ತೆಸೆದ ನಿವೇದಿತಾ ಗೌಡ: ಚಂದನ್ ಪರದಾಟ ಹೇಗಿತ್ತು ನೋಡಿ

ಇದನ್ನೂ ಓದಿ : ಟಾಪ್ ಸಂಭಾವನೆ ಪಟ್ಟಿಯಲ್ಲಿ ಎರಡನೇ ಸ್ಥಾನ : ಅನುಷ್ಕಾ, ಸಮಂತಾ ಹಿಂದಿಕ್ಕಿದ ರಶ್ಮಿಕಾ

( Puneeth Rajkumar fans good news, surprise for James movie team in January 26)

Kannada News Next Deskhttp://kannada.newsnext.live
Kannada News Next Live brings latest news from India and World on breaking news, today news headlines, politics, business, technology, Sports, Education in Kannada Language since 2020. kannada.newsnext.live it was first indexed by Google in July 2021
RELATED ARTICLES

Most Popular