ಒಂದಾದ ಮೇಲೊಂದು ಹಿಟ್ ಚಿತ್ರಗಳನ್ನು ನೀಡುತ್ತಲೇ ಬರುತ್ತಿರುವ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೊಸ ಚಿತ್ರ ಜೇಮ್ಸ್ ಗೆ ಭರ್ಜರಿ ಖಡಕ್ ವಿಲನ್ ಎಂಟ್ರಿಯಾಗಿದ್ದು, ಚಿತ್ರ ಸಾಕಷ್ಟು ಕುತೂಹಲ ಮೂಡಿಸಿದೆ.

ಚೇತನ್ ಕುಮಾರ್ ನಿರ್ದೇಶಿಸುತ್ತಿರುವ ಪುನೀತ್ ರಾಜಕುಮಾರ್ ಅಭಿನಯದ ಬಹುನೀರಿಕ್ಷಿತ ಚಿತ್ರ ಜೇಮ್ಸ್ ನಲ್ಲಿ ವಿಲನ್ ಪಾತ್ರಕ್ಕೆ ಮಹಾಭಾರತ ಸೀರಿಯಲ್ ನ ಘಟೋತ್ಕಜ ಖ್ಯಾತಿಯ ದೈತ್ಯ ಪ್ರತಿಭೆ ಕೇತನ್ ಕರಾಂಡೆ ಎಂಟ್ರಿಕೊಟ್ಟಿದ್ದಾರೆ.

ಲಾಕ್ ಡೌನ್ ಬಳಿಕ ಜೇಮ್ಸ್ ಚಿತ್ರತಂಡ ಈಗಾಗಲೇ ಚಿತ್ರೀಕರಣ ಆರಂಭಿಸಿದ್ದು, ಸಾಹಸ ನಿರ್ದೇಶಕ ರಾಮ್ ಲಕ್ಷ್ಮಣ ಮಾರ್ಗದರ್ಶನದಲ್ಲಿ ಕೇತನ್ ಹಲವು ಸಾಹಸ ದೃಶ್ಯಗಳಲ್ಲಿ ತಮ್ಮ ಪ್ರತಿಭಾಪ್ರದರ್ಶನ ಮಾಡಿದ್ದಾರೆ.

ಹಿಂದಿ ಹಾಗೂ ಮರಾಠಿಯ ಹಲವು ಸೀರಿಯಲ್ ಗಳಲ್ಲಿ ನಟಿಸಿ ಸೈ ಎನ್ನಿಸಿಕೊಂಡಿರುವ ಕೇತನ್ ಖರಾಂಡೆ ಸೂರ್ಯಪುತ್ರ ಕರ್ಣ ಸೀರಿಯಲ್ ನಲ್ಲಿ ಭೀಮನ ಪಾತ್ರ ಹಾಗೂ ಮಹಾಭಾರತದಲ್ಲಿ ಭೀಮನ ಪುತ್ರ ಘಟೋತ್ಕಜನ ಪಾತ್ರದಲ್ಲಿ ಮಿಂಚಿದ್ದರು.

ಇದಲ್ಲದೇ ನಿರ್ದೇಶಕ ಚೇತನ್ ಹಲವು ಚಿತ್ರಗಳಲ್ಲಿ ಕೇತನ್ ನಟಿಸಿದ್ದು, ಈ ಭಾರಿ ಪವರ್ ಸ್ಟಾರ್ ಅಭಿನಯದ ಜೇಮ್ಸ್ ಚಿತ್ರಕ್ಕಾಗಿ ಕನ್ನಡಕ್ಕೆ ಎಂಠ್ರಿಕೊಡ್ತಿದ್ದಾರೆ.

ದೈತ್ಯದೇಹಿ ಕೇತನ್ ನೋಡಿದ್ರೆ ಬೆಚ್ಚಿ ಬೀಳುವಂತಿದ್ದು, ಸಿನಿಮಾದಲ್ಲಿ ಪ್ರೇಕ್ಷಕರನ್ನು ಹೇಗೆ ಭಯ ಬೀಳಸ್ತಾರೆ ಕಾದು ನೋಡಬೇಕಿದೆ.