ರಾಮನಗರ : ರೈತನೋರ್ವ ತನ್ನ ಜಮೀನಿಗೆ ನೀರಿನ ಪೈಪ್ ಲೈನ್ ಅಳವಡಿಸಲು ಮುಂದಾಗಿದ್ದ. ಇದಕ್ಕಾಗಿ 200 ಅಡಿ ಉದ್ದದ ಪೈಪ್ ಲೈನ್ ಒಳಗೆ ಸಿಲುಕಿಕೊಂಡಿದ್ದ. ಕೆಲ ಗಂಟೆಗಳ ಕಾರ್ಯಾಚರಣೆ ಬಳಿಕ ರೈತನನ್ನು ರಕ್ಷಣೆ ಮಾಡಲಾಗಿದೆ.
ರಾಮನಗರ ಜಿಲ್ಲೆಯ ಕೊಂಕಾನಿದೊಡ್ಡಿ ಗ್ರಾಮದ ರಾಜಣ್ಣ ಎಂಬವರೇ ಪೈಪ್ ಲೈನ್ ನಲ್ಲಿ ಸಿಲುಕಿಕೊಂಡ ರೈತ. ಇಂದು ಬೆಳಗ್ಗೆ ಜಮೀನಿಗೆ ನೀರಿನ ಪೈಪ್ ಲೈನ್ ಸಂಪರ್ಕ ಕಲ್ಪಿಸಲು ಬೈಪಾಸ್ ರಸ್ತೆಯ ಅಡಿ ಯಲ್ಲಿ ಅಳವಡಿಸಿದ್ದ ಪೈಪ್ ಲೈನ್ ಒಳಗೆ ಹೋಗಿದ್ದಾರೆ. ಆದರೆ ಹಿಂದಿರುಗಿ ಬರುವ ವೇಳೆಯಲ್ಲಿ ರಾಜಣ್ಣ ಪೈಪ್ ಲೈನ್ ನ ಒಳಗಡೆ ಸಿಲುಕಿ ಹಾಕಿಕೊಂಡಿದ್ದಾರೆ.
ಸುಮಾರು 200 ಅಡಿ ಉದ್ದದ ಪೈಪ್ ಲೈನ್ ನಲ್ಲಿ ರಾಜಣ್ಣ ಸಿಲುಕಿರುವ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಬಂದ ಅಗ್ನಿಶಾಮಕ ದಳದ ಸಿಬ್ಬಂದಿಗಳು ಕಾರ್ಯಾಚರಣೆ ನಡೆಸಿ ರೈತ ರಾಜಣ್ಣನನ್ನು ರಕ್ಷಣೆ ಮಾಡಿದ್ದಾರೆ.