ಬುಧವಾರ, ಏಪ್ರಿಲ್ 30, 2025
HomeBreakingRamesh Kumar apologies: ಸದನದಲ್ಲಿ ‘ರೇಪ್​’ ಹೇಳಿಕೆಗೆ ಕ್ಷಮೆಯಾಚಿಸಿದ ಕಾಂಗ್ರೆಸ್​ ಶಾಸಕ ರಮೇಶ್​ಕುಮಾರ್​..!

Ramesh Kumar apologies: ಸದನದಲ್ಲಿ ‘ರೇಪ್​’ ಹೇಳಿಕೆಗೆ ಕ್ಷಮೆಯಾಚಿಸಿದ ಕಾಂಗ್ರೆಸ್​ ಶಾಸಕ ರಮೇಶ್​ಕುಮಾರ್​..!

- Advertisement -

ರೇಪ್​ ಆಗುವಾಗ ತಡೆಯಲು ಆಗದೇ ಇದ್ದರೆ ಮಲಗಿ ಎಂಜಾಯ್​ ಮಾಡಿಬಿಡಬೇಕು ಎಂದು ಸದನದಲ್ಲಿ ಹೇಳಿದ್ದ ಕಾಂಗ್ರೆಸ್​ ಶಾಸಕ ಕೆ.ಆರ್​ ರಮೇಶ್​ ಹೇಳಿಕೆಗೆ ತೀವ್ರ ವಿರೋಧ ವ್ಯಕ್ತವಾದ ಬೆನ್ನಲ್ಲೇ ಅವರು ಟ್ವಿಟರ್​ನಲ್ಲಿ ಕ್ಷಮೆಯಾಚಿಸಿದ್ದಾರೆ. (Ramesh Kumar Apologies)


ಈ ವಿಚಾರವಾಗಿ ಟ್ವೀಟ್​ ಮಾಡಿರುವ ಶಾಸಕ ರಮೇಶ್​ ಕುಮಾರ್​, ಅತ್ಯಾಚಾರ ಕುರಿತಂತೆ ಸದನದಲ್ಲಿ ನಾನು ನೀಡಿದ ಅಸಡ್ಡೆ ಹಾಗೂ ನಿರ್ಲಕ್ಷ್ಯದ ಕಮೆಂಟ್​ನ ಬಗ್ಗೆ ಅತ್ಯಂತ ಪ್ರಾಮಾಣಿಕವಾಗಿ ಕ್ಷಮೆಯಾಚಿಸುತ್ತಿದ್ದೇನೆ. ಈ ನೀಚ ಕೃತ್ಯವನ್ನು ಕ್ಷುಲ್ಲಕ ಎಂದು ಹೇಳುವುದು ನನ್ನ ಉದ್ದೇಶವಾಗಿರಲಿಲ್ಲ. ಆದರೆ ಇನ್ನು ಮುಂದೆ ನಾನು ಪದಗಳನ್ನು ಆಯ್ಕೆ ಮಾಡಿಕೊಳ್ಳುವಾಗ ಎಚ್ಚರಿಕೆ ವಹಿಸುತ್ತೇನೆ ಎಂದು ಬರೆದುಕೊಂಡಿದ್ದಾರೆ.


ಸದನದಲ್ಲಿ ಅತಿವೃಷ್ಟಿ ಕುರಿತು ನಿಯಮ 69ರ ಅಡಿಯಲ್ಲಿ ಚರ್ಚೆ ನಡೆಯುತ್ತಿದ್ದ ವೇಳೆಯಲ್ಲಿ ಸ್ಪೀಕರ್​ ವಿಶ್ವೇಶ್ವರ ಹೆಗಡೆ ಕಾಗೇರಿ ಮಾತನಾಡಿ ಎಲ್ಲರೂ ಮಾತನಾಡಬೇಕು ಎಂದು ಹೇಳುತ್ತಾರೆ. ಆದರೆ ನನಗೆ ಸದನದ ಬ್ಯುಸಿನೆಸ್​ ನಡೆಯುವುದು ಮುಖ್ಯ. ಆದರೆ ನನ್ನ ಪರಿಸ್ಥಿತಿ ಹೇಗಾಗಿದೆ ಅಂದರೆ ಲೆಟ್ಸ್​ ಎಂಜಾಯ್​ ದಿ ಸಿಚ್ಯೂವೇಷನ್​​ ಅನ್ನೋ ರೀತಿಯಾಗಿದೆ ರಮೇಶ್​ ಕುಮಾರ್​ ಅವರೇ ಎಂದು ಹೇಳಿದರು.


ಸ್ಪೀಕರ್​ ತಮ್ಮ ಹೆಸರು ಪ್ರಸ್ತಾಪಿಸುತ್ತಿದ್ದಂತೆಯೇ ಎದ್ದು ನಿಂತ ಕಾಂಗ್ರೆಸ್​ ಶಾಸಕ ರಮೇಶ್​ ಕುಮಾರ್​, ರೇಪ್​ ನಡೆಯುತ್ತಿರುವಾಗ ತಡೆಯಲು ಆಗದೇ ಇದ್ದರೆ ಮಲಗಿ ಎಂಜಾಯ್​ ಮಾಡಿಬಿಡಬೇಕು ಎಂದು ಹೇಳಿದರು. ಶಾಸಕ ರಮೇಶ್​ ಕುಮಾರ್​ ಮಾತಿಗೆ ಸ್ಪೀಕರ್​​ ವಿಶ್ವೇಶ್ವರ ಹೆಗಡೆ ಕಾಗೇರಿ ಸೇರಿದಂತೆ ಸದನದಲ್ಲಿದ್ದ ಎಲ್ಲರೂ ಗೊಳ್ಳೆಂದು ನಕ್ಕರು. ಯಾರೋಬ್ಬರೂ ಕೂಡ ಇಂತಹ ಹೇಳಿಕೆ ಏಕೆ ನೀಡಿದಿರಿ ಎಂದು ಪ್ರಶ್ನೆ ಮಾಡಲಿಲ್ಲ . ಆದರೆ ಈ ವಿವಾದಾತ್ಮಕ ಹೇಳಿಕೆಗೆ ಸಾರ್ವಜನಿಕ ವಲಯದಲ್ಲಿ ಭಾರೀ ಆಕ್ಷೇಪ ವ್ಯಕ್ತವಾಗಿದೆ.

Ramesh Kumar apologies for rape statement

ಇದನ್ನು ಓದಿ :Block Congress President : ನಿಷ್ಕ್ರೀಯ ಕಾಂಗ್ರೆಸ್‌ ಬ್ಲಾಕ್‌ ಅಧ್ಯಕ್ಷರಿಗೆ ಕೆಪಿಸಿಸಿ ಬಿಗ್‌ ಶಾಕ್‌ : ಮೂಡಬಿದ್ರೆ, ಬಂಟ್ವಾಳ, ಸುಳ್ಯ ಬ್ಲಾಕ್‌ಗೆ ಹೊಸ ಅಧ್ಯಕ್ಷರು !

ಇದನ್ನೂ ಓದಿ : Bill Against family politics : ಕುಟುಂಬ ರಾಜಕಾರಣದ ವಿರುದ್ಧ ಮಸೂದೆ ತನ್ನಿ: ಕೈ, ಕಮಲ‌ ಪಾಳಯಕ್ಕೆ ಎಚ್.ಡಿ.ರೇವಣ್ಣ ಸವಾಲು

RELATED ARTICLES

Most Popular