ಸೋಮವಾರ, ಏಪ್ರಿಲ್ 28, 2025
HomeBreakingRashmika mandanna: ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಕಿರಿಕ್ ಬೆಡಗಿ…! ತಮಿಳು ಸ್ಟಾರ್ ನಟನಿಗೆ ಜೋಡಿಯಾಗಲಿದ್ದಾರೆ ರಶ್ಮಿಕಾ…!!

Rashmika mandanna: ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ ಕಿರಿಕ್ ಬೆಡಗಿ…! ತಮಿಳು ಸ್ಟಾರ್ ನಟನಿಗೆ ಜೋಡಿಯಾಗಲಿದ್ದಾರೆ ರಶ್ಮಿಕಾ…!!

- Advertisement -

ಹಿಂದಿ,ತೆಲುಗು,ತಮಿಳು ಹೀಗೆ ಎಲ್ಲಾ ಚಿತ್ರರಂಗದಲ್ಲೂ  ಅವಕಾಶ ಮೇಲೆ ಅವಕಾಶ ಪಡೆಯುತ್ತಿರೋ ಕೊಡಗಿನ ಬೆಡಗಿ ರಶ್ಮಿಕಾ ಮಂದಣ್ಣ ಅಭಿಮಾನಿಗಳಿಗೆ ಸಿಹಿಸುದ್ದಿ ನೀಡಿದ್ದಾರೆ. ಸದ್ಯದಲ್ಲೇ ತಮಿಳು ಸ್ಟಾರ್ ನಟನಿಗೆ ರಶ್ಮಿಕಾ ಜೋಡಿಯಾಗಲಿದ್ದಾರೆ.

ಇಷ್ಟಕ್ಕೂ ರಶ್ಮಿಕಾ ಜೋಡಿಯಾಗ್ತಿರೋದು ಸಿನಿಮಾದಲ್ಲಿ ಮಾತ್ರ. ಹೌದು ತಮಿಳಿನ ಸ್ಟಾರ್ ನಟ ವಿಜಯ್ ಜೊತೆ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈ ವಿಚಾರವನ್ನು ಸ್ವತಃ ರಶ್ಮಿಕಾ ಹೇಳಿಕೊಂಡಿದ್ದಾರೆ.

ಸೋಷಿಯಲ್ ಮೀಡಿಯಾದಲ್ಲಿ ಸಖತ್ ಆಕ್ಟಿವ್ ಆಗಿರೋ ರಶ್ಮಿಕಾ ಅಭಿಮಾನಿಗಳ ಜೊತೆ ಸಂವಾದ ನಡೆಸುತ್ತಿದ್ದ ವೇಳೆ ಈ ಸಂಗತಿ ರಿವೀಲ್ ಮಾಡಿದ್ದಾರೆ. ನೀವು ವಿಜಯ್ ಜೊತೆ ಯಾವಾಗ ನಟಿಸುತ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ರಶ್ಮಿಕಾ ಶೀಘ್ರದಲ್ಲೇ ಎಂದಿದ್ದಾರೆ.

ಮೂಲಗಳ ಮಾಹಿತಿ ಪ್ರಕಾರ ಸದ್ಯದಲ್ಲೇ ವಿಜಯ್ ಜೊತೆ ರಶ್ಮಿಕಾ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರಂತೆ. ಈಗಾಗಲೇ ಅಗ್ರಿಮೆಂಟ್ ಗೂ ರಶ್ಮಿಕಾ ಸಹಿ ಹಾಕಿದ್ದಾರಂತೆ.

ವಿಜಯ್ ಬೀಸ್ಟ್ ಎನ್ನುವ ಸಿನಿಮಾದಲ್ಲಿ ನಟಿಸಲಿದ್ದು, ಇದೇ ಸಿನಿಮಾದಲ್ಲಿ ರಶ್ಮಿಕಾ ವಿಜಯ್ ಜೊತೆ ಡ್ಯುಯೆಟ್ ಹಾಡಲಿದ್ದಾರೆ.

ಸದ್ಯ ಹಿಂದಿಯ ಮಿಶನ್ ಮಜ್ನು ಹಾಗೂ ಗುಡ್ ಬೈ ಸಿನಿಮಾದಲ್ಲಿ ನಟಿಸುತ್ತಿರುವ ರಶ್ಮಿಕಾ ಪುಷ್ಪ ಸಿನಿಮಾ ಶೂಟಿಂಗ್ ಮುಗಿಸಿದ್ದು, ಹಿಂದಿಯಲ್ಲೇ ಮತ್ತೆರಡು ಸಿನಿಮಾಗಳಿಗೂ ಸೈ ಎಂದಿದ್ದಾರಂತೆ.  

RELATED ARTICLES

Most Popular