ರಿಕ್ ಬೆಡಗಿ ರಶ್ಮಿಕಾ ಮಂದಣ್ಣ ಅದೃಷ್ಟ ಸಖತ್ತಾಗೇ ಖುಲಾಯಿಸಿದೆ. ಸೌತ್ ಇಂಡಿಯಾದಲ್ಲಿ ಮಿಂಚಿದ ಕೊಡಗಿನ ಕುವರಿ ಈಗ ಬಾಲಿವುಡ್ ನತ್ತ ತನ್ನ ದಂಡಯಾತ್ರೆ ಮುಂದುವರೆಸಿದ್ದಾಳೆ.

ತಮಿಳು,ತೆಲುಗಿನ ಬಳಿಕ ರಶ್ಮಿಕಾ ಮಂದಣ್ಣ ಈಗ ಮುಂಬೈ ಮಾಯಾನಗರಿಯತ್ತ ಮುಖಮಾಡಿದ್ದು, ಹಿಂದಿಯಲ್ಲಿ ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಅಂದ ಮಾತ್ರಕ್ಕೆ ರಶ್ಮಿಕಾ ಹಿಂದಿ ಫಿಲ್ಮನಲ್ಲಿ ನಟಿಸುತ್ತಿದ್ದಾರೆ ಅಂದ್ಕೋಬೇಡಿ. ರಶ್ಮಿಕಾ ಬಾಲಿವುಡ್ ನ ರ್ಯಾಪ್ ಸಾಂಗ್ ವೊಂದಕ್ಕೆ ಹೆಜ್ಜೆ ಹಾಕಲಿದ್ದಾರೆ.

ಬಾಲಿವುಡ್ ನ ಪ್ರಸಿದ್ಧ ರ್ಯಾಪ್ ಸಿಂಗರ್ ಬಾದ್ ಷಾ ಹಾಡಿಗೆ ಕೊಡಗಿನ ಕಿತ್ತಳೆ ರಶ್ಮಿಕಾ ಕುಣಿಯಲಿದ್ದು ಚಂಡಿಗಡದಲ್ಲಿ ಚಿತ್ರೀಕರಣ ನಡೆಯಲಿದೆಯಂತೆ.

ಹಾಗಂತ ಇದು ಯಾವುದೋ ಸಣ್ಣ ಪುಟ್ಟ ರ್ಯಾಪ್ ಸಾಂಗ್ ಅಲ್ಲ. ಯಶ್ ರಾಜ್ ಫಿಲ್ಮ್ ನಿರ್ಮಿಸುತ್ತಿರುವ ಬಿಗ್ ಬಜೆಟ್ ರ್ಯಾಪ್ ಇದಾಗಿದ್ದು ಅದ್ದೂರಿ ಚಿತ್ರೀಕರಣಕ್ಕೆ ತಂಡ ಸಿದ್ಧವಾಗಿದೆ.

ಆದರೇ ಈ ವಿಚಾರವನ್ನು ರಶ್ಮಿಕಾ ಇನ್ನು ಅಧಿಕೃತವಾಗಿ ಹೇಳಿಕೊಂಡಿಲ್ಲ. ಆದರೆ ಸಾಂಗ್ ಶೂಟಿಂಗ್ ತೆರಳಲು ಸಿದ್ಧವಾಗಿದ್ದಾರೆ ಎನ್ನಲಾಗ್ತಿದೆ. ಸಧ್ಯ ರಶ್ಮಿಕಾ ಪುಷ್ಪ ಸಿನಿಮಾ ಶೂಟಿಂಗ್ ನಲ್ಲಿದ್ದಾರೆ.

ಕನ್ನಡದ ಕಿರಿಕ್ ಪಾರ್ಟಿ ಯಿಂದ ಕೆರಿಯರ್ ಆರಂಭಿಸಿದ ರಶ್ಮಿಕಾ ಮಂದಣ್ಣ ತೆಲುಗಿನ ಗೀತ ಗೋವಿಂದಂ ಸೇರಿದಂತೆ ಹಲವು ಚಿತ್ರಗಳಲ್ಲಿ ನಟಿಸಿ ಹೆಸರು ಗಳಿಸಿದ್ದಾರೆ.ಕನ್ನಡದಲ್ಲಿ ಸಧ್ಯ ರಶ್ಮಿಕಾ ಅಭಿನಯದ ಪೊಗರು ಸಿನಿಮಾ ರಿಲೀಸ್ ಗೆ ಸಿದ್ಧವಿದ್ದು 2021 ರಲ್ಲಿ ತೆರೆಗೆ ಬರಲಿದೆ.