ನವದೆಹಲಿ : ಲಾಕ್ ಡೌನ್ ನಿಂದ ತತ್ತರಿಸಿರುವ ದೇಶದ ಆರ್ಥಿಕತೆಯ ಚೇತರಿಕೆಗೆ ಆರ್ ಬಿಐ 50,000 ಕೋಟಿ ರೂಪಾಯಿ ಆರ್ಥಿಕ ನೆರವು ಘೋಷಣೆ ಮಾಡಿದೆ. 90 ದಿನಗಳ ಕಾಲ ಸಾಲ ಮರುಪಾವತಿಗೆ ವಿನಾಯಿತಿಯನ್ನು ನೀಡಲಾಗಿದ್ದು, 90 ದಿನಗಳ ಸಾಲವನ್ನು ವಸೂಲಾಗದ ಸಾಲವೆಂದು ಪರಿಗಣನೆ ಮಾಡಲಾಗುವುದು. ಅಲ್ಲದೇ ದೇಶದಲ್ಲಿ ಹಣ ಹರಿವಿಗೆ ಕೊರತೆಯಾಗದಂತೆ ಕ್ರಮವಹಿಸುವುದರ ಜೊತೆಗೆ ಉದ್ಯಮ ವಲಯಕ್ಕೆ ಸಾಲ ನೀಡಲು ಹೆಚ್ಚಿನ ಆಧ್ಯತೆ ನೀಡುವುದಾಗಿ ಆರ್ ಬಿಐ ಗನರ್ವರ್ ಶಕ್ತಿಕಾಂತ್ ದಾಸ್ ಘೋಷಣೆ ಮಾಡಿದ್ದಾರೆ.

2ನೇ ಹಂತದ ಲಾಕ್ ಡೌನ್ ಘೋಷಣೆ ಮಾಡಿರುವ ಹಿನ್ನೆಲೆಯಲ್ಲಿ ಸುದ್ದಿಗೋಷ್ಠಿ ನಡೆಸಿದ ಭಾರತೀಯ ರಿಸರ್ವ್ ಬ್ಯಾಂಕ್ ಗವರ್ನರ್ ಶಕ್ತಿಕಾಂತ್ ದಾಸ್ ಅವರು ಆರ್ಥಿಕ ಪುನಶ್ಚೇತನಕ್ಕೆ ಹಲವು ಘೋಷಣೆಗಳನ್ನು ಮಾಡಿದ್ದಾರೆ. 50,000 ಕೋಟಿ ರೂಪಾಯಿ ವಿಶೇಷ ಪ್ಯಾಕೇಜ್ ನಲ್ಲಿ, ಎನ್ ಬಿಎಫ್ ಸಿ, ನಬಾರ್ಡ್ ಹಾಗೂ ಎಮ್ ಎಫ್ ಐ ಮೂಲಕ ಸುಮಾರು 50,000 ಕೋಟಿ ರೂಪಾಯಿ ನೆರವನ್ನು ಆರ್ ಬಿಐ ಘೋಷಣೆ ಮಾಡಿದೆ.

ನಬಾರ್ಡ್ ಮೂಲಕ 25,000 ಕೋಟಿ, ಗೃಹ ಸಾಲ ನೀಡುವ ಸಂಸ್ಥೆಗಳಿಗೆ 10,000 ಕೋಟಿ ಹಾಗೂ ಬ್ಯಾಂಕೇತರ ಸಂಸ್ಥೆಗಳಿಗೆ 15,000 ಕೋಟಿ ನೆರವು ನೀಡುವುದಾಗಿ ಆರ್ ಬಿಐ ಘೋಷಣೆ ಮಾಡಿದೆ. ಇನ್ನು ರೇಪೊ ದರದಲ್ಲಿ ಯಾವುದೇ ಬದಲಾವಣೆಯನ್ನು ಮಾಡಿಲ್ಲ. ಆದರೆ ರಿಸರ್ವ್ ರೇಪೋದರ 3.75ಕ್ಕೆ ಇಳಿಕೆ ಮಾಡಿದೆ.

ಬ್ಯಾಂಕುಗಳು ಆರ್ ಬಿಐಗೆ ನೀಡುವ ಬಡ್ಡಿ ದರದಲ್ಲಿ ಇಳಿಕೆ, ಅಲ್ಲದೇ ಕೊರೊನಾ ವಿರುದ್ದದ ಹೋರಾಟಕ್ಕೆ ಶೇ.60 ರಷ್ಟು ಹಣಕಾಸಿನ ನೆರವು ನೀಡಲಾಗುತ್ತಿದ್ದು, ರಾಜ್ಯ ಸರಕಾರಗಳಿಗೆ ಹಾಗೂ ಗ್ರಾಮೀಣ ಮತ್ತು ಸರಕಾರಿ ಬ್ಯಾಂಕುಗಳಿಗೆ ನೆರವು ಘೋಷಿಸಲಾಗಿದೆ ಎಂದರು.

ಜಿ 20 ರಾಷ್ಟ್ರಗಳಿಗೆ ಹೋಲಿಸಿದ್ರೆ ಭಾರತದ ಬೆಳವಣಿಗೆಯ ದರ ಉತ್ತಮವಾಗಿದೆ. ಜಾಗತಿಕವಾಗಿ ಜಿಡಿಪಿಯಲ್ಲಿ ಇಳಿಕೆಯಾಗಿದ್ದರೂ ಕೂಡ ಶೇ.19ರ ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಲಾಕ್ ಡೌನ್ ನಡುವೆಯೂ ಹಲವು ರಾಜ್ಯಗಳ ಹಣಕಾಸು ಸ್ಥಿತಿ ಉತ್ತಮವಾಗಿದೆ. ಕೈಗಾರಿಕಾ ಉತ್ಪಾದನೆ ಫೆಬ್ರವರಿಯವರೆಗೆ ಧನಾತ್ಮಕವಾಗಿದೆ.

ವಿಶ್ವದ ಆರ್ಥಿಕತೆ 9 ಟ್ರಲಿಯನ್ ಡಾಲರ್ ನಷ್ಟು ಕುಸಿತವಾಗಿದೆ. ದೇಶದಲ್ಲಿ ಕೊರೊನಾದ ಪರಿಣಾಮಗಳು ಫೆಬ್ರವರಿಯ ನಂತರ ಆರಂಭವಾಗಲಿದೆ. 2021ಕ್ಕೆ ಭಾರತ 7.4ರ ಜಿಡಿಪಿ ಬೆಳವಣಿಗೆಯ ದರವನ್ನು ನಿರೀಕ್ಷಿಸಲಾಗಿದೆ. ದೇಶದ ಖಜಾನೆಯಲ್ಲಿ ಅಗತ್ಯ ವಿದೇಶಿ ಕರೆನ್ಸಿ ಲಭ್ಯವಿದೆ.

ಆಟೋ ಮೊಬೈಲ್ ಕ್ಷೇತ್ರದಲ್ಲಿ ಸಾಕಷ್ಟು ಕುಸಿತವಾಗಿದ್ದು, ವಿದ್ಯುತ್ ಬೇಡಿಕೆಯೂ ಶೇ.30ರಷ್ಟು ಕುಸಿತವಾಗಿದೆ. ಕಳೆದ 4 ತಿಂಗಳಿನಿಂದಲೂ ಉತ್ಪಾದನಾ ವಲಯ ಕುಸಿತವಾಗಿದೆ, ಆದರೆ ಬ್ಯಾಂಕುಗಳಲ್ಲಿ ನಗದು ಕೊರತೆಯಾಗದಂತೆ ನಿಗಾವಹಿಸಲಾಗಿದೆ ಎಂದಿದ್ದಾರೆ.

ಸಣ್ಣ ಮತ್ತು ಮದ್ಯಮ ಕಂಪೆನಿಗಳಿಗೆ ಸುಲಭ ಸಾಲ ನೀಡಲು ಕ್ರಮಕೈಗೊಳ್ಳಲಾಗುತ್ತಿದೆ. ದೇಶದಲ್ಲಿ ಹಣಕಾಸಿನ ಹರಿವು ಹೆಚ್ಚಿಸಲು ಅಗತ್ಯ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹಣ ಚಲಾವಣೆಯನ್ನು ಉತ್ತಮಗೊಳಿಸಲು ಕ್ರಮಕೈಗೊಳ್ಳಲಾಗಿದ್ದು, ದೇಶದ ಹಣಕಾಸಿನ ಹರಿವು ಹೆಚ್ಚಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ.

ಉದ್ಯಮ ವಲಯಕ್ಕೆ ಸಾಲ ಸಿಗುವಂತೆ ಆಧ್ಯತೆ ನೀಡಲಾಗುತ್ತಿದ್ದು, ಸಾಲ ನೀಡುವಿಕೆಯಲ್ಲಿ ತೊಂದರೆಯಾಗದಂತೆ ಕ್ರಮ, ಬ್ಯಾಂಕೇತರ ಸಂಸ್ಥೆಗಳೂ ಹಣಕಾಸಿನ ನೆರವಿನ ಘೋಷಣೆ ಮಾಡಲಾಗಿದೆ.

ಇನ್ನು ಲಾಕ್ ಡೌನ್ ನಿಂದಾಗಿ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದೇವೆ. ಕೊರೊನಾ ನಡುವಲ್ಲಿಯೇ ಆರ್ ಬಿಐನ 150 ಸಿಬ್ಬಂಧಿಗಳು ಹಾಗೂ ದೇಶದಾದ್ಯಂತ ಬ್ಯಾಂಕ್ ಸಿಬ್ಬಂಧಿಗಳು ಕಾರ್ಯನಿರ್ವಹಿಸುತ್ತಿದ್ದಾರೆ. ಸಾವಿನ ನಡುವೆಯೇ ಜೀವನ ನಡೆಯುತ್ತಿದೆ. ಆತಂಕದ ನಡುವೆಯೇ ಭವಿಷ್ಯ ಕಟ್ಟೋಣಾ. ಕೊರೊನಾ ವಿರುದ್ದ ಹೋರಾಡುತ್ತಿರುವ ವೈದ್ಯರು ಹಾಗೂ ಪೊಲೀಸರಿಗೆ ಅಭಿನಂದನೆ ಸಲ್ಲಿಸಿದ್ದಾರೆ.