ಮನೋರಂಜನಾ ಕ್ಷೇತ್ರದಲ್ಲಿ ಎಂಟರಟೇನ್ ಮೆಂಟ್ ನ ಹೊಸ ಹೊಸ ಸಾಧ್ಯತೆಗಳನ್ನು ಹುಟ್ಟುಹಾಕುತ್ತಲೇ ಇರೋದು ಚಾನೆಲ್ ನ ಬೆಳವಣಿಗೆಗೆ ಅಗತ್ಯ ಹಾಗೂ ಅನಿವಾರ್ಯ. ಇಂತಹುದೇ ರಿಯಲ್ ಮನೋರಂಜನೆ ಕಾನ್ಸೆಪ್ಟ್ ಜೊತೆ ಕಣಕ್ಕಿಳಿದಿದೆ ಕಲರ್ಸ್ ಕನ್ನಡ ವಾಹಿನಿ. ಹೌದು ರಾಜಾ ರಾಣಿ ಅನ್ನೋ ಹೊಸ ಪ್ರೋಗ್ರಾಂ ಸಿದ್ಧವಾಗಿದೆ.

ಮನೋರಂಜನೆಯ ಕ್ಷೇತ್ರದಲ್ಲಿ ತನ್ನದೇ ಆದ ಛಾಪು ಮೂಡಿಸಿರೋ ಕಲರ್ಸ್ ಕನ್ನಡ ವಾಹಿನಿ ರಾಜಾ-ರಾಣಿ ಅನ್ನೋ ಹೊಸತೊಂದು ರಿಯಾಲಿಟಿ ಗೇಮ್ ಶೋ ಗೆ ಸಿದ್ಧತೆ ನಡೆಸಿದ್ದು, ಈಗಾಗಲೇ ಪ್ರೊಮೋ ಕೂಡ ರಿಲೀಸ್ ಆಗಿದೆ.

ಸ್ಯಾಂಡಲ್ ವುಡ್ ಹಾಗೂ ಕಿರುತೆರೆಯ ಸೆಲೆಬ್ರೆಟಿ ಜೋಡಿಗಳನ್ನು ಗುರಿಯಾಗಿಸಿಕೊಂಡು ಕಲರ್ಸ್ ಕನ್ನಡ ವಾಹಿನಿ ಈ ಶೋ ಆಯೋಜಿಸುತ್ತಿದ್ದು, ಪ್ರೋಮೋ ಗಮನಸೆಳೆಯುತ್ತಿದೆ.

ಲಕ್ಷ್ಮೀಬಾರಮ್ಮ ಖ್ಯಾತಿಯ ನೇಹಾ ಗೌಡಾ ಹಾಗೂ ಚಂದು ಪ್ರೊಮೋ ರಿಲೀಸ್ ಆಗಿದ್ದು, ಇಬ್ಬರೂ ಕಾರಿನಲ್ಲಿ ಹಾಡಿಗಾಗಿ ಕಿತ್ತಾಡುವ ದೃಶ್ಯ ಒಟ್ಟುಕೊಂಡು ಪ್ರೋಮೋ ಸಿದ್ಧಪಡಿಸಲಾಗಿದೆ.

ಇನ್ನು ಕನ್ನರ ರ್ಯಾಪರ್ ಹಾಗೂ ಬಿಗ್ ಬಾಸ್ ಸ್ಪರ್ಧಿ ಚಂದನ್ ಶೆಟ್ಟಿ ಹಾಗೂ ನಿವೇದಿತಾ ಗೌಡರನ್ನು ಒಳಗೊಂಡ ಪ್ರೋಮೋ ಕೂಡ ಪ್ರಸಾರವಾಗುತ್ತಿದ್ದು, ಶೋದ ಬಗ್ಗೆ ಕುತೂಹಲ ಹೆಚ್ಚಿಸಿದೆ.

ಕನ್ನಡ ಕಿರುತೆರೆಯಲ್ಲಿ ಈಗ ಹಲವು ಸೀರಿಯಲ್ ಸ್ಟಾರ್ ಗಳು ಕಪಲ್ಸ್ ಗಳಾಗಿ ಬದಲಾಗಿದ್ದು, ಇತ್ತೀಚಿಗಷ್ಟೇ ಅಗ್ನಿಸಾಕ್ಷಿಯ ಚಂದನ್ ಹಾಗೂ ಕವಿತಾ ಹೊಸ ಬದುಕಿಗೆ ಕಾಲಿರಿಸಿದ್ದಾರೆ.

ಇಂತಹ ಸ್ಟಾರ್ ಜೋಡಿಗಳನ್ನು ಗಮನದಲ್ಲಿಟ್ಟುಕೊಂಡು ಕಲರ್ಸ್ ಕನ್ನಡ ವಾಹಿನಿ ಈ ಶೋಗೆ ಸಿದ್ಧವಾಗಿದ್ದು, ರಿಯಲ್ ಜೋಡಿಗಳನ್ನು ತೆರೆ ಮೇಲೆ ಆಟವಾಡಿಸುವ ಗೇಮ್ ಶೋ ಇದಾಗಿದೆ.

ಕೊರೋನಾ ಸಂಕಷ್ಟದಿಂದ ಬೇಸತ್ತ ಜನರಿಗೆ ಫುಲ್ ಎಂಟರೈನಮೆಂಟ್ ಮಾಡೋ ಪ್ಲ್ಯಾನ್ ನಲ್ಲಿರೋ ಕಲರ್ಸ್ ಕನ್ನಡ ವಾಹಿನಿ ಪ್ರೇಕ್ಷಕರ ಕುತೂಹಲ ಹೆಚ್ಚಿಸಿದೆ.