ಸೋಮವಾರ, ಏಪ್ರಿಲ್ 28, 2025
HomeBreakingಬಹುಮುಖ ಪ್ರತಿಭೆಗೆ ಹುಟ್ಟುಹಬ್ಬದ ಸಂಭ್ರಮ….! ಚಿತ್ರತಂಡದಿಂದ ಸ್ಪೆಶಲ್ ಗಿಫ್ಟ್ ಪಡೆದ ರಕ್ಷಿತ್ ಶೆಟ್ಟಿ..!!

ಬಹುಮುಖ ಪ್ರತಿಭೆಗೆ ಹುಟ್ಟುಹಬ್ಬದ ಸಂಭ್ರಮ….! ಚಿತ್ರತಂಡದಿಂದ ಸ್ಪೆಶಲ್ ಗಿಫ್ಟ್ ಪಡೆದ ರಕ್ಷಿತ್ ಶೆಟ್ಟಿ..!!

- Advertisement -

ನಟ,ನಿರ್ದೇಶಕ,ನಿರ್ಮಾಪಕರಾಗಿ ಗುರುತಿಸಿಕೊಂಡಿರುವ  ಸಿಂಪಲ್ ಸ್ಟಾರ್ ರಕ್ಷಿತ್ ಶೆಟ್ಟಿ 777 ಚಾರ್ಲಿ ಸಿನಿಮಾದ ಜೊತೆ ಹುಟ್ಟುಹಬ್ಬದ ಸಂಭ್ರಮದಲ್ಲಿದ್ದಾರೆ. ಕೊರೋನಾ ಕಾರಣಕ್ಕೆ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಳ್ಳುತ್ತಿರುವ ರಕ್ಷಿತ್ ಶೆಟ್ಟಿಗೆ ಅಭಿಮಾನಿಗಳು, ಸೆಲೆಬ್ರೆಟಿಗಳು ಶುಭಹಾರೈಸಿದ್ದಾರೆ.

https://kannada.newsnext.live/rohini-sinduri-shilpa-nag-transfer-state-governament/

ಸಿಂಪಲ್ ಸ್ಟಾರ್ ಹುಟ್ಟುಹಬ್ಬಕ್ಕೆ ಸೋಷಿಯಲ್ ಮೀಡಿಯಾದಲ್ಲಿ ಅಭಿಮಾನಿಗಳಿಂದ ಶುಭಾಶಯಗಳ ಸುರಿಮಳೆಯೇ ಹರಿದುಬಂದಿದ್ದು, ಎಲ್ಲರೂ ಪೋಟೋದ ಜೊತೆ ವಿಶ್ ಮಾಡುತ್ತಿದ್ದಾರೆ. ಇನ್ನು ಸದ್ಯ ರಕ್ಷಿತ್ ನಿರ್ಮಾಪಕ ಹಾಗೂ ನಟರಾಗಿ ಗುರುತಿಸಿಕೊಂಡಿರುವ 777 ಚಾರ್ಲಿ ತಂಡ ಹುಟ್ಟುಹಬ್ಬದ ಕೊಡುಗೆಯಾಗಿ ಟೀಸರ್ ರಿಲೀಸ್ ಗೆ ಸಿದ್ಧವಾಗಿದೆ.

https://kannada.newsnext.live/amazon-insult-kannadiga/

ಇನ್ನು ನಾಯಿಯೊಂದರ ಸುತ್ತ ಹೆಣೆದುಕೊಂಡ ಕತೆಯನ್ನು ಒಳಗೊಂಡ 777 ಚಾರ್ಲಿ ಸಿನಿಮಾ ಐದು ಭಾಷೆಯಲ್ಲಿ ಬಿಡುಗಡೆಯಾಗುತ್ತಿದೆ.  ಈ ಸಿನಿಮಾದ ಜೊತೆ ಜೊತೆಗೆ ರಕ್ಷಿತ್ ಸಪ್ತಸಾಗದಾಚೆಗೆಲ್ಲೋ ಸಿನಿಮಾ ಚಿತ್ರೀಕರಣ ಕೂಡ ಆರಂಭಿಸಿದ್ದು, ಕೊರೋನಾದಿಂದ ಸ್ಥಗಿತಗೊಂಡಿದೆ.

https://kannada.newsnext.live/hindi-bollywood-minorgirl-missuse-actor-pearlpuri-arrest-mumbai-police/

ನಮ್ಮಏರಿಯಾದಲ್ಲಿ ಒಂದಿನ ಸಿನಿಮಾದಿಂದ ಸ್ಯಾಂಡಲ್ ವುಡ್ ನಲ್ಲಿ ಸಿನಿ ಕೆರಿಯರ್ ಆರಂಭಿಸಿದ ರಕ್ಷಿತ್ ಶೆಟ್ಟಿ, ನಿರ್ದೇಶಕ,ನಿರ್ಮಾಪಕರಾಗಿಯೂ ಗುರುತಿಸಿಕೊಂಡಿದ್ದಾರೆ.

ಸಾಲು ಸಾಲು ಚಿತ್ರಗಳಲ್ಲಿ ನಟಿಸುತ್ತಿರುವ ರಕ್ಷಿತ್, 777 ಚಾರ್ಲಿ, ಸಪ್ತಸಾಗರದಾಚೆ ಬಳಿಕ ಕಿರಿಕ್ ಪಾರ್ಟಿ-2 ಹಾಗೂ ಪುಣ್ಯಕೋಟಿ ಸಿನಿಮಾವನ್ನು ತೆರೆಗೆ ತರಲಿದ್ದಾರೆ.  

RELATED ARTICLES

Most Popular