ಸೋಮವಾರ, ಏಪ್ರಿಲ್ 28, 2025
HomeBreakingSanjana galrani: ಸಂಜನಾ ಮೈಮೇಲೆ ಸಿಕ್ರೆಟ್ ಟ್ಯಾಟೂ….! ಮುಚ್ಚಿಟ್ಟ ಗುಟ್ಟು ಬಿಚ್ಚಿಟ್ಟ ಗಂಡ-ಹೆಂಡತಿ ಬೆಡಗಿ…!!

Sanjana galrani: ಸಂಜನಾ ಮೈಮೇಲೆ ಸಿಕ್ರೆಟ್ ಟ್ಯಾಟೂ….! ಮುಚ್ಚಿಟ್ಟ ಗುಟ್ಟು ಬಿಚ್ಚಿಟ್ಟ ಗಂಡ-ಹೆಂಡತಿ ಬೆಡಗಿ…!!

- Advertisement -

ಸ್ಯಾಂಡಲ್ ವುಡ್ ಡ್ರಗ್ ಮಾಫಿಯಾ ಪ್ರಕರಣದಲ್ಲಿ ಜೈಲು ಸೇರಿದ್ದ ನಟಿ ಸಂಜನಾ ಜೈಲಿನಲ್ಲಿದ್ದಾಗಲೇ ಅವರ ವಿವಾಹದ ವಿಚಾರ ಬಯಲಿಗೆ ಬಂದಿತ್ತು. ಅದಾದ ಮೇಲೆ ತಮ್ಮ ಲವ್ ಸ್ಟೋರಿ ಬಿಚ್ಚಿಟ್ಟ ಸಂಜನಾ, ಇದೀಗ ಮುಚ್ಚಿಟ್ಟ ಸುಂದರ ಟ್ಯಾಟೂವೊಂದನ್ನು ತೋರಿಸಿ ಪ್ರೀತಿಯ ವಿಚಾರ ಹಂಚಿಕೊಂಡಿದ್ದಾರೆ.

ಸಂಜನಾ ತಮ್ಮ ಕುತ್ತಿಗೆಯ ಹಿಂಭಾಗದಲ್ಲಿ ಸುಂದರವಾದ ಟ್ಯಾಟೂವೊಂದನ್ನು ಹಾಕಿಸಿಕೊಂಡಿದ್ದನ್ನು ಅದನ್ನು ಇಷ್ಟು ವರ್ಷಗಳ ಕಾಲ ಮುಚ್ಚಿಟ್ಟಿದ್ದರು.

ಈಗ ಬೇಲ್ ಮೇಲೆ ಜೈಲಿನಿಂದ ಹೊರಗಿರುವ ಸಂಜನಾ ತಮ್ಮ ಪ್ರೀತಿಯ ದ್ಯೋತಕವಾದ ಟ್ಯಾಟೂ ರಿವೀಲ್ ಮಾಡಿದ್ದಾರೆ.

ಇನ್ ಸ್ಟಾಗ್ರಾಂನಲ್ಲಿ ಈ ಬಗ್ಗೆ ಸುದೀರ್ಘವಾದ ಪೋಸ್ಟ್ ಹಾಕಿರುವ ಸಂಜನಾ, ನಾನು ಟ್ಯಾಟೂವನ್ನು ಅನಾವರಣ ಮಾಡುತ್ತಿದ್ದೇನೆ. ಇದು ಅತ್ಯಂತ ವೈಯಕ್ತಿಕ ಹಾಗೂ ನನ್ನ ಹೃದಯಕ್ಕೆ ಹತ್ತಿರವಾದದ್ದು. ಇದು ನನ್ನ ಜೀವನದ ಪ್ರೀತಿಯ ಟ್ಯಾಟೂ ಎಂದು ಬರೆದಿದ್ದಾರೆ.

ಅಲ್ಲದೇ ತಾವು ಸಾಮಾಜಿಕ ಬದುಕಿನಲ್ಲಿ ಎದುರಿಸಿದ ಗಾಸಿಪ್, ಟೀಕೆಗಳ ಬಗ್ಗೆಯೂ ಬರೆದಿರುವ ಸಂಜನಾ, ನಟನೆಯನ್ನು ಆಯ್ಕೆಮಾಡಿಕೊಂಡ ನಟಿಯರು ಅನಗತ್ಯವಾಗಿ ಟೀಕೆಯನ್ನು ಎದುರಿಸಬೇಕಾಗುತ್ತದೆ.

ನನ್ನ ರಾಖಿ ಬದ್ರರ್ ನ್ನು ಬಾಯ್ ಪ್ರೆಂಡ್ ಎಂದು ಕರೆಯಲಾಯಿತು. ಓರ್ವ ನಟಿಯೊಡನೆ ಕಾಣಿಸಿಕೊಳ್ಳುವ ಸಹೋದರನು ಗಾಸಿಪ್ ನಿಂದಾಗಿ ಗೆಳೆಯನಾಗುತ್ತಾನೆ ಇದು ತೊಂದರೆ ಕೊಡುವ ವಿಚಾರವಲ್ಲವೇ ಎಂದು ಸಂಜನಾ ಪ್ರಶ್ನಿಸಿದ್ದಾರೆ.

https://www.instagram.com/p/CQ-mAeXsxTu/?utm_medium=copy_link

ಸಂಜನಾ ತಮ್ಮ ಬಹುಕಾಲದ ಸ್ನೇಹಿತ ಹಾಗೂ ವೈದ್ಯ ಡಾ.ಅಜೀಜ್ ರನ್ನು ಪ್ರೇಮವಿವಾಹವಾಗಿದ್ದು, ಆತನ ತನ್ನ ಒಳ್ಳೆಯ ಸ್ನೇಹಿತ,ಮೆಂಟರ್ ಹಾಗೂ ತಂದೆಯಂತೆ ಸದಾ ಕಾಯುವ ವ್ಯಕ್ತಿ ಎಂದಿದ್ದಾರೆ.

RELATED ARTICLES

Most Popular